ಸಾರಾಂಶ
ಬೈಲಾ ಉಲ್ಲಂಘನೆ ಹಾಗೂ ಅವ್ಯವಹಾರಕ್ಕೆ ಅವಕಾಶ ಇಲ್ಲದಂತೆ ಆಡಳಿತ ಮಾಡಬೇಕಿದೆ.
ಹೂವಿನಹಡಗಲಿ: ಸಹಕಾರಿ ಕ್ಷೇತ್ರದಲ್ಲಿ ಸ್ವಾರ್ಥಕ್ಕೆ ಜಾಗ ಇದ್ದರೆ ಬ್ಯಾಂಕುಗಳು ಅಭಿವೃದ್ಧಿ ಬದಲು ದಿವಾಳಿಯಾಗುತ್ತವೆ ಎಂದು ಮಹಾವೀರ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ ಜೈನ್ ಹೇಳಿದರು.
ಇಲ್ಲಿನ ಮಹಾವೀರ ಅಲ್ಪ ಸಂಖ್ಯಾತರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಂತರದಲ್ಲಿ ಮಾತನಾಡುತ್ತಾ, ಮಹಾವೀರ ಅಲ್ಪ ಸಂಖ್ಯಾತರ ಪತ್ತಿನ ಸಹಕಾರ ಸಂಘಕ್ಕೆ ಅನ್ಯ ಧರ್ಮಿಯರು ಸಾಕಷ್ಟು ಸಹಕಾರ ನೀಡಿದ್ದಾರೆ. ನಮ್ಮ ಬಗ್ಗೆ ವಿಶ್ವಾಸ ಹೊಂದಿರುವ ಕಾರಣ ಇಲ್ಲಿನ ಹಣ ಹೂಡಿಕೆ ಮಾಡುತ್ತಿದ್ದಾರೆ ಎಂದರು.ಸಹಕಾರಿ ಕ್ಷೇತ್ರದಲ್ಲಿ ಯಾರು ದ್ರೋಹ ಬಗೆಯುವ ಕೆಲಸ ಆಗದಂತೆ ನೋಡಿಕೊಳ್ಳಬೇಕಿದೆ. ಸಂಘದ ನಿರ್ದೇಶಕರು ಸೇವಾ ಮನೋಭಾವನೆ ಇಟ್ಟುಕೊಂಡು ಕೆಲಸ ಮಾಡಬೇಕಿದೆ. ಬೈಲಾ ಉಲ್ಲಂಘನೆ ಹಾಗೂ ಅವ್ಯವಹಾರಕ್ಕೆ ಅವಕಾಶ ಇಲ್ಲದಂತೆ ಆಡಳಿತ ಮಾಡಬೇಕಿದೆ ಎಂದರು.
ನಿರ್ದೇಶಕ ಎಂ.ಶಾಂತರಾಜ, ಅರವಳ್ಳಿ ವೀರಣ್ಣ, ಮೇಘಾ ಜೈನರ್ ಸೇರಿದಂತೆ ಇತರರು ಮಾತನಾಡಿದರು.ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ:
ಮಹಾವೀರ ಅಲ್ಪಸಂಖ್ಯಾತರ ಪತ್ತಿರ ಸಹಕಾರ ಸಂಘದ ಅಧ್ಯಕ್ಷರಾಗಿ ಮಂಜುನಾಥ ಜೈನ್, ಉಪಾಧ್ಯಕ್ಷರಾಗಿ ಪುಷ್ಪಾವತಿ ರೇವಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಆರ್.ಬೊಮ್ಮಣ್ಣ, ಎ.ಯಶೋಧರಗೌಡ, ಎಂ.ಶಾಂತರಾಜ, ಡಾ.ಧರ್ಮಣ್ಣ, ಜೆ.ವಿಜಯಕುಮಾರ, ಎಚ್.ಡಿ.ಅಜಿತ್, ಆಶಾ ಪಿ.ಗುಂಜಾಳ್, ಎಚ್.ಪ್ರಸನ್ನ, ವಿಪುಲ್ ಜೈನ್, ಸುಚೇತ ಬಿ.ಜೈನ್, ಮೇಘಾ ಜೈನರ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಬಿ.ಕೆ.ಬಡಿಗೇರ ತಿಳಿಸಿದ್ದಾರೆ.