ಸಾರಾಂಶ
There was silence in Mudnal's residence
ಮಾಜಿ ಶಾಸಕ ವೆಂಕಟರೆಡ್ಡಿ ಮುದ್ನಾಳ್ ಅವರ ನಿಧನದ ಸುದ್ದಿ ತಿಳಿಯುತ್ತಲೇ, ಲಾಲ್ ಬಹಾದ್ದೂರ್ ಶಾಸ್ತ್ರಿ ವೃತ್ತ ಸಮೀಪದ ಅವರ ನಿವಾಸಕ್ಕೆ ಅಭಿಮಾನಿಗಳ-ಹಿತೈಷಿಗಳ ದಂಡು ಕಣ್ಣೀರಿಡುತ್ತಲೇ ದೌಡಾಯಿಸಿದರು. ಸಾರ್ವಜನಿಕರ ಕುಂದುಕೊರತೆಗಳ ಸ್ವೀಕಾರಕ್ಕೆಂದೇ ಸದಾ ಗಿಜಿಗುಡುತ್ತಿದ್ದ ಅವರ ಜನ ಸಂಪರ್ಕ ಕಚೇರಿ ನಾಯಕನ ಕಳೆದುಕೊಂಡು ಬಿಕೋ ಎನ್ನುತ್ತಿತ್ತು. ಪುತ್ರ ಮಹೇಶರೆಡ್ಡಿ ಅವರ ಕಣ್ಣೀರ ಕಟ್ಟೆಯೊಡೆದಿತ್ತು. ಮುದ್ನಾಳ್ ಸಹೋದರ ರಾಚನಗೌಡ ಸೇರಿದಂತೆ ಬಂಧು ಮಿತ್ರರನೇಕರು ಶೋಕಸಾಗರದಲ್ಲಿ ಮುಳುಗಿದ್ದರು.
ಸುದ್ದಿ ತಿಳಿಯುತ್ತಲೇ ಅಬ್ಬೆತುಮಕೂರಿನ ಶ್ರೀ ಡಾ. ಗಂಗಾಧರ ಶ್ರೀಗಳು ಹಾಗೂ ಹೆಡಗಿಮುದ್ರಾದ ಶ್ರೀಶಾಂತ ಶಿವಯೋಗಿ ಶ್ರೀಗಳ ಅವರ ನಿವಾಸಕ್ಕೆ ಆಗಮಿಸಿ, ಕುಟುಂಬಕ್ಕೆ ಸಾಂತ್ವನ ಹೇಳಿದರು. ವೆಂಕಟರೆಡ್ಡಿ ಮುದ್ನಾಳ್ ತಂದೆ ಮಾಜಿ ಸಚಿವ ದಿ. ವಿಶ್ವನಾಥರೆಡ್ಡಿ ಅವರ ಕಾಲದಿಂದಲೂ ಮುದ್ನಾಳ್ ಕುಟುಂಬದ ಸದಸ್ಯರಲ್ಲೊಬ್ಬರಾಗಿರುವ ಹಿರಿಯ ಗುಂಡೂರಾವ್ ಮಾಸ್ತರ್, ನಿವೃತ್ತ ಶಿಕ್ಷಕ ಅಯ್ಯಣ್ಣ ಹುಂಡೇಕಾರ್, ಭೀಮಣಗೌಡ ಕ್ಯಾತನಾಳ್, ಮೋಹನಬಾಬು, ಬಸವರಾಜ ಚಂಡ್ರಿಕಿ, ರುದ್ರಗೌಡ ಪಾಟೀಲ್, ಮಡ್ಡಿ ಮುಂತಾದವರ ತಂಡ ತಮ್ಮ ನಾಯಕನ ಅಗಲಿಕೆಗಾಗಿ ಕಣ್ಣೀರಿಡುತ್ತಿತ್ತು.-
17ವೈಡಿಆರ್15 : ಅಬ್ಬೆತುಮಕೂರಿನ ಶ್ರೀ ಡಾ. ಗಂಗಾಧರ ಶ್ರೀಗಳು ಹಾಗೂ ಹೆಡಗಿಮುದ್ರಾದ ಶ್ರೀಶಾಂತ ಶಿವಯೋಗಿ ಶ್ರೀಗಳು ಮುದ್ನಾಳ್ ನಿವಾಸಕ್ಕೆ ಆಗಮಿಸಿ, ಕುಟುಂಬಕ್ಕೆ ಸಾಂತ್ವನ ಹೇಳಿದರು.-
17ವೈಡಿಆರ್16 : ತಂದೆಯ ನಿಧನದಿಂದ ಕಣ್ಣೀರಿಡುತ್ತಿರುವ ಪುತ್ರ ಮಹೇಶಗೌಡ ಮುದ್ನಾಳ್-
17ವೈಡಿಆರ್17 : ಸಾರ್ವಜನಿಕರ ಕುಂದುಕೊರತೆಗಳ ಸ್ವೀಕಾರಕ್ಕೆಂದೇ ಸದಾ ಗಿಜಿಗುಡುತ್ತಿದ್ದ ಅವರ ಜನ ಸಂಪರ್ಕ ಕಚೇರಿ ನಾಯಕನ ಕಳೆದುಕೊಂಡು ಬಿಕೋ ಎನ್ನುತ್ತಿತ್ತು.---000---