ಸಾರಾಂಶ
ಬೆಂಗಳೂರು : ಕಾವೇರಿ 5ನೇ ಹಂತದ ಯೋಜನೆಯ ಕೊಳೆವೆಯನ್ನು ಹೆಗ್ಗನಹಳ್ಳಿಯ ನೆಲಮಟ್ಟದ ಸಂಗ್ರಹಗಾರಕ್ಕೆ ಕೊಳವೆ ಜೋಡಣೆಯ ಕಾಮಗಾರಿ ಕೈಗೊಂಡಿರುವ ಹಿನ್ನೆಲೆಯಲ್ಲಿ ಸೆ.21ರಂದು ನಗರದ ಬಹುತೇಕ ಭಾಗಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಕಾವೇರಿ 5ನೇ ಹಂತದ 700 ಮಿ.ಮೀ ಕೊಳವೆ ಮಾರ್ಗವನ್ನು ಹೆಗ್ಗನಹಳ್ಳಿಯ ನೆಲಮಟ್ಟದ ಸಂಗ್ರಹಗಾರಕ್ಕೆ ಕೊಳವೆ ಜೋಡಣೆ ಕಾಮಗಾರಿಯನ್ನು ಸೆ.21ರ ಶನಿವಾರ ಕೈಗೊಳ್ಳಲಾಗುತ್ತಿದೆ. ಇದರಿಂದ ಶನಿವಾರ ಮಧ್ಯಾಹ್ನ 1ರಿಂದ ರಾತ್ರಿ 10ರವರೆಗೆ ಕಾವೇರಿ 4ನೇ ಘಟ್ಟದ 2ನೇ ಫೇಸ್‌ನಲ್ಲಿ ನೀರು ಪೂರೈಕೆ ಮಾಡುವ ಪ್ರದೇಶಗಳಿಗೆ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮನವಿ ಮಾಡಿದೆ.
ಸುಬ್ರಹ್ಮಣ್ಯನಗರ, ಗಾಯತ್ರಿನಗರ, ಪ್ರಕಾಶನಗರ, ನಂದಿನಿ ಲೇಔಟ್, ಗೋರುಗುಂಟೆಪಾಳ್ಯ, ಕೃಷ್ಣಾನಂದನಗರ, ಶಂಕರನಗರ, ಕಂಠೀರವನಗರ, ಮಹಾಲಕ್ಷ್ಮಿ ಲೇಔಟ್, ಸರಸ್ವತಿನಗರ, ಗಣೇಶ ಬ್ಲಾಕ್, ರಾಜಾಜಿನಗರದ ಎಲ್ಲಾ ಪ್ರದೇಶಗಳು, ರಾಜಗೋಪಾಲನಗರ, ಜಿಕೆಡಬ್ಲೂ ಲೇಔಟ್, ಲಕ್ಷ್ಮಿದೇವಿನಗರ, ಚಾಮುಂಡಿಪುರ, ಪಾರ್ವತಿನಗರ, ಪೀಣ್ಯ ಕೈಗಾರಿಕಾ ಪ್ರದೇಶ, ಚೊಕ್ಕಸಂದ್ರ, ಎಚ್‌ಎಂಟಿ ಲೇಔಟ್, ಗೃಹಲಕ್ಷ್ಮಿ ಲೇಔಟ್, ಪೀಣ್ಯ ಮೊದಲನೇ ಹಂತ, ಪೀಣ್ಯ ವಿಲೇಜ್, ಎಂಇಐ ಲೇಔಟ್, ಬಾಗಲಗುಂಟೆ, ಮಲ್ಲಸಂದ್ರ, ದಾಸರಹಳ್ಳಿ, ರಾಮಯ್ಯ ಲೇಔಟ್, ಪ್ರಶಾಂತನಗರ, ಕಮ್ಮಗೊಂಡನಹಳ್ಳಿ, ಭುವನೇಶ್ವರಿನಗರ, ಹೆಗ್ಗನಹಳ್ಳಿ, ಹೇರೋಹಳ್ಳಿ, ಸುಂಕದಕಟ್ಟೆ, ಪೈಪ್‌ಪೈನ್ ರಸ್ತೆ, ಶ್ರೀನಿವಾಸನಗರ, ಹೋಯ್ಸಳನಗರ, ಸಂಜೀವಿನಿನಗರ, ಲಕ್ಷ್ಮಣನಗರ, ಶ್ರೀಗಂಧನಗರ, ಮಯೂರನಗರ, ಶಿವಾನಂದನಗರ, ಫ್ರೆಂಡ್ಸ್ ಸರ್ಕಲ್, ಎಜಿಬಿ ಲೇಔಟ್, ಚಿಕ್ಕಸಂದ್ರ, ಕಿರ್ಲೋಸ್ಕರ್ ಲೇಔಟ್, ಸೌಂದರ್ಯ ಲೇಔಟ್, ಸಿದ್ದೇಶ್ವರ ಲೇಔಟ್, ಕೆ.ಪಿ.ಅಗ್ರಹಾರ, ಚೆನ್ನಪ್ಪ ಗಾರ್ಡನ್, ಗಾಣಪ್ಪ ಲೇಔಟ್, ಮಂಜುನಾಥನಗರ, ಚೌಡರಪಾಳ್ಯ, ವಿದ್ಯಾರಣ್ಯನಗರ, ಮಾರೇನಹಳ್ಳಿ 20ನೇ ಮೇನ್, ಕೆಎಚ್‌ಬಿ ಕ್ವಾರ್ಟರ್ಸ್, ಹೌಸಿಂಗ್ ಬೋರ್ಡ್, ಕಾರ್ಪೋರೇಷನ್ ಕಾಲೋನಿ, ತಿಮ್ಮನಹಳ್ಳಿ, ಎಂ.ಸಿ.ಲೇಔಟ್, ಮೂಡಲಪಾಳ್ಯ, ನಾಗಾಪುರ, ಅಗ್ರಹಾರ ದಾಸರಹಳ್ಳಿ, ರಾಜಾಜಿನಗರ 6ನೇ ಬ್ಲಾಕ್, ವೆಸ್ಟ್ ಆಫ್ ಕಾರ್ಡ್ ರೋಡ್, ಇಂದಿರನಗರ ಕೊಳಗೇರಿ, ಕೆಎಚ್‌ಬಿ ಕಾಲೋನಿ, ಮಹಾಗಣಪತಿನಗರ, ಶಿವನಹಳ್ಳಿ, ಶಿವಪುರ, ನೆಲಗದರನಹಳ್ಳಿ, ಐಪಿನಗರ, ದೊಡ್ಡಣ್ಣ ಕೈಗಾರಿಕಾ ಪ್ರದೇಶ, ರಾಮಯ್ಯ ಲೇಔಟ್, ಜೈಭುವನೇಶ್ವರಿನಗರ, ಸಂಜಯಗಾಂಧಿನಗರ, ಮಲ್ಲಸಂದ್ರ, ರವೀಂದ್ರನಗರ, ಸಂತೋಷ್ ನಗರ, ಬಿಎಚ್‌ಇಎಲ್ ಕಾಲೋನಿ, ಬಾಬಣ್ಣ ಲೇಔಟ್, ಕಲ್ಯಾಣನಗರ, ಶನಿಮಹಾತ್ಮ ದೇವಸ್ಥಾನ, ಹಾವನೂರು ಲೇಔಟ್, ಡಿಫೆನ್ಸ್ ಕಾಲೋನಿ, ಶಂಕ್ರಪ್ಪ ಗಾರ್ಡನ್, ಗೋಪಾಲಪುರ, ಕಾವೇರಿಪುರ, ರಂಗನಾಥಪುರ, ಬಿಡಿಎ ಲೇಔಟ್, ರಾಜೀವ್ ಗಾಂಧಿ ಕೊಳಚೆ ಪ್ರದೇಶ, ಮುನೇಶ್ವರನಗರ, ಮೂಡಲಪಾಳ್ಯ, ಎಂಟಿ ಲೇಔಟ್, ಮಾರೇನಹಳ್ಳಿ, ಜಿಕೆಡಬ್ಲೂ ಲೇಔಟ್, ವಿನಾಯಕ ಲೇಔಟ್, ಮಾರುತಿ ಮಂದಿರ, ಶಿವಾನಂದನಗರ, ಕೋಮಲನಗರ, ವಿಶ್ವಭಾರತಿ ನಗರ, ಸಣ್ಣಕ್ಕಿ ಬಯಲು, ಕಾಮಾಕ್ಷಿಪಾಳ್ಯ, ರಾಗ್ಗಿನಗರ, ಶಕ್ತಿಗಣಪತಿ ನಗರ, ಬಿಎಚ್‌ಇಎಲ್ ಲೇಔಟ್, ಕನ್ನಹಳ್ಳಿ, ಐಡಿಐಲ್ ಹೋಮ್ ಟೌನ್‌ಶಿಪ್, ಮೈಲಾಸಂದ್ರ, ಕೆಂಗೇರಿ, ಕೆಂಗೇರಿ ಸ್ಯಾಟಲೈಟ್ ಟೌನ್, ಬಂಡೇ ಮಠ, ಕೆಂಗೇರಿ ಪೋರ್ಟ್, ಸ್ವಾತಿ ಲೇಔಟ್, ಕೋಡಿಪಾಳ್ಯ, ವಿಜಯಶ್ರೀ ಲೇಔಟ್, ಭುವನೇಶ್ವರನಗರ, ಜ್ಞಾನಭಾರತಿ, ದುಬಾಸಿಪಾಳ್ಯ, ನಾಗದೇವನಹಳ್ಳಿ, ಅನ್ನಪೂರ್ಣೇಶ್ವರಿನಗರ, ಜ್ಞಾನಗಂಗಾನಗರ, ರೈಲ್ವೆ ಲೇಔಟ್, ಎಂಪಿಎಂ ಲೇಔಟ್, ಮಲ್ಲತ್ತಹಳ್ಳಿ, ಪಾಪರೆಡ್ಡಿಪಾಳ್ಯ, ಐಪಿಎ ಲೇಔಟ್, ನಾಗರಭಾವಿ, ಎನ್‌ಜಿಇಎಫ್ ಲೇಔಟ್, ಟೆಲಿಕಾಂ ಲೇಔಟ್ ಪ್ರದೇಶದಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.