ಭ್ರಷ್ಟಾಚಾರ ವಿರುದ್ಧ ಜಯ ಸಿಗುತ್ತೆ

| Published : Dec 17 2023, 01:45 AM IST

ಸಾರಾಂಶ

ಕೆಲ ಬೀದಿನಾಯಿಗಳಿಗೆ ನಾನು ಉತ್ತರ ಕೊಡುವುದಿಲ್ಲ. ಜತೆಗೆ ಭ್ರಷ್ಟಾಚಾರ ವಿರುದ್ಧ ಜಯ ಸಿಗುತ್ತೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಹೈಕೋರ್ಟ‌ನಲ್ಲಿ ಡಿಕೆಶಿ ಕೇಸ್ ವಿಚಾರವಾಗಿ ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ಜನವರಿ 5ರಂದು ಮತ್ತೆ ವಿಚಾರಣೆ ಪ್ರಾರಂಭವಾಗುತ್ತದೆ. ನ್ಯಾಯಕ್ಕೆ ಜಯ ಸಿಕ್ಕೇ ಸಿಗುತ್ತದೆ. ಭ್ರಷ್ಟಾಚಾರದ ವಿರುದ್ಧ ನಾವಿದ್ದೇವೆ ಎಂದು ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಕೊಲೆ ಆರೋಪಿಯ ಕೇಸನ್ನು ಸರ್ಕಾರ ವಾಪಸ್ ತೆಗೆದುಕೊಳ್ತೀನಿ ಅಂದ್ರೆ ಅರಾಜಕತೆ ಉಂಟಾಗುತ್ತದೆ. ಹೈಕೋರ್ಟ್‌ನಲ್ಲಿ ನಮ್ಮ ವಕೀಲರು ವಾದ ಮಂಡನೆ ಮಾಡಿದ್ದಾರೆ. ಸರ್ಕಾರದ ಪರವಾಗಿ ಅವರ ವಕೀಲರು ವಾದ ಮಂಡನೆ ಮಾಡುತ್ತಾರೆ ಎಂದು ಹೇಳಿದರು.

ಕೆಲ ಬೀದಿನಾಯಿಗಳಿಗೆ ನಾನು ಉತ್ತರ ಕೊಡುವುದಿಲ್ಲ. ಹಂದಿಗಳು ಹಾಗೇ ಒದರುತ್ತಾ ಬರುತ್ತವೆ, ಹೋಗುತ್ತವೆ. ಹಂದಿಗಳನ್ನು ಏನೂ ಕೇಳಬಾರದು ಎಂದರು. ತಮ್ಮ ವಿರುದ್ಧ ಮಾಜಿ ಸಚಿವ ಮುರಗೇಶ ನಿರಾಣಿ ಶುಕ್ರವಾರ ವಾಗ್ದಾಳಿ ನಡೆಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದರು.

ಮೈಸೂರು ಮಹಾರಾಜರ ದೂರ ದೃಷ್ಟಿಯಿಂದ ಮೈಸೂರು ಅಭಿವೃದ್ಧಿ ಯಾಗಿದೆ. ಹೀಗಾಗಿ ವಿಮಾನ ನಿಲ್ದಾಣಕ್ಕೆ ಮೈಸೂರು ಮಹಾರಾಜರ ಹೆಸರು ಇಡಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು.

ಏಷ್ಯಾದಲ್ಲಿ ಮೊದಲು ವಿದ್ಯುತ್ ಆಗಿದ್ದು ಜಯಚಾಮರಾಜೇಂದ್ರ ಒಡೆಯರ್ ಸಮಯದಲ್ಲಿ. ಆದಿಲ್‌ಶಾಹಿ, ನಿಜಾಮ್ ಶಾಹಿಗಳಿಂದ ಈ ಭಾಗ ಅಭಿವೃದ್ಧಿ ಆಗಿಲ್ಲ ಎಂದರು.

ಬಿಜೆಪಿ, ಹಿಂದೂ ಕಾರ್ಯಕರ್ತ ಮೇಲೆ‌ ದೌರ್ಜನ್ಯ ವಿಚಾರವಾಗಿ ಮಾತನಾಡಿದ ಅವರು, ದೌರ್ಜನ್ಯಕ್ಕೆ ಒಳಗಾಗದ ಹಿಂದೂ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರ ನೆರವಿಗೆ ಬಿಜೆಪಿ ಇದೆ. ಅವರ ಕಾನೂನು ಹೋರಾಟಕ್ಕೆ ನೆರವು ನೀಡುತ್ತೇವೆ. ಕೆಲವೇ ದಿನಗಳಲ್ಲಿ ಬೆಂಗಳೂರಿನಲ್ಲಿ ಆಫೀಸ್ ತೆರೆಯಲಾಗುತ್ತಿದೆ. ಅವರನ್ನು ಸ್ಟೇಷನ್‌ಗೆ ಕರೆಸಿ ಮುಚ್ಚಳಿಕೆ ಪತ್ರ ಬರೆಯಿಸಿಕೊಳ್ಳುತ್ತಿದ್ದಾರೆ. ಈ ದೌರ್ಜನ್ಯ ನಾವು ಸಹಿಸಲ್ಲ. ಪ್ರಚೋದನೆ ಮಾಡಿದ್ದರೆ ಬೇಕಾದರೆ ಕ್ರಮ ಕೈಗೊಳ್ಳಲಿ. ವಾಕ್ ಸ್ವಾತಂತ್ರ್ಯ ಇದೆ, ಅಭಿವ್ಯಕ್ತಿ ಸ್ವಾತಂತ್ರ್ಯ ತಡೆಯುವ ಅವಕಾಶ ಇಲ್ಲ. ವಿನಾಕಾರಣ ದೌರ್ಜನ್ಯ ಸರಿ ಅಲ್ಲ ಎಂದರು.

ತನ್ವೀರ್ ಹಾಸ್ಮಿ ವಿರುದ್ಧ ಎನ್ಐಎ ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದೆ. ಈಗಾಗಲೇ ಎನ್ಐಎ ತಂಡದವರು ಬೆಂಗಳೂರು ಹಾಗೂ ಇತರದೆ ದಾಳಿ ಮಾಡಿದ್ದಾರೆ. ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮುಸ್ಲಿಂ ಧರ್ಮಗುರು ಕುರಿತು ಕೆಲ ಮಾಹಿತಿಯನ್ನು ಕೂಡ ಹಂಚಿಕೊಂಡಿದ್ದೇನೆ. ಅದನ್ನು ಬಹಿರಂಗವಾಗಿ ಹೇಳಲಾಗಲ್ಲ. ಈ ಮೂಲಕ ಧರ್ಮಗುರು ತನ್ವೀರ್ ಪೀರಾ ವಿರುದ್ಧ ತನಿಖೆ ಆಗುತ್ತದೆ ಎಂದು ಹೇಳಿದರು.