ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಭಾರತದ ಪ್ರಮುಖ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ ಗಳಲ್ಲೊಂದಾದ ಬ್ಯಾಂಕ್ ಆಫ್ ಬರೋಡಾ ಸೋಮವಾರ ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದ ಮೈಸೂರು ಸೋಶಿಯಲ್ ನಲ್ಲಿ ಎಂ.ಎಸ್.ಎಂ.ಇ. ಔಟ್ರೀಚ್ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿತ್ತು.ಮೈಕ್ರೋ, ಸ್ಮಾಲ್ ಮತ್ತು ಮೀಡಿಯಂ ಎಂಟರ್ ಪ್ರೈಸಸ್ (ಎಂ.ಎಸ್.ಎಂ.ಇ.) ಕ್ಷೇತ್ರದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ತನ್ನ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿತು.ಕಾರ್ಯಕ್ರಮವನ್ನು ಬ್ಯಾಂಕ್ ನ ಬೆಂಗಳೂರು ವಲಯದ ಮುಖ್ಯ ಪ್ರಧಾನ ವ್ಯವಸ್ಥಾಪಕ ಹಾಗೂ ವಲಯ ಮುಖ್ಯಸ್ಥ ಮನೋಜ್ ಚಯಾನಿ ಉದ್ಘಾಟಿಸಿದರು. ಮೈಸೂರು ವಲಯದ ಪ್ರಾದೇಶಿಕ ಮುಖ್ಯಸ್ಥ ಟಿ.ವಿ.ವಿ.ಎಸ್. ಶರ್ಮ, ಮೈಸೂರು ವಲಯದ ಉಪ ಪ್ರಾದೇಶಿಕ ಮುಖ್ಯಸ್ಥ ವಿದ್ಯಾಸಾಗರ ಮರಳ, ವಲಯದ ಮುಖ್ಯ ವ್ಯವಸ್ಥಾಪಕ ಮತ್ತು ಎಸ್.ಎಂ.ಇ.ಎಲ್.ಎಫ್ ಮುಖ್ಯಸ್ಥ ಸಂತೋಷ್ ಕುಮಾರ್ ಅಡಾರಿ, ಮೈಸೂರು ಕ್ರೆಡಿಟ್ ಮುಖ್ಯಸ್ಥ ವಿಜಯ ಪಾಟೀಲ್ ಮತ್ತು ಬೆಂಗಳೂರು ವಲಯದ ಎ.ಜಿ.ಎಂ ಹಾಗೂ ವಲಯ ಮ್ಯಾನೇಜರ್ ಮುಖೇಶ್ ಇದ್ದರು.ಕಾರ್ಯಕ್ರಮದಲ್ಲಿ ಸ್ಥಳೀಯ ಉದ್ಯಮಿಗಳು, ಕೈಗಾರಿಕಾ ಸಂಘಗಳ ಪ್ರತಿನಿಧಿಗಳು, ಭವಿಷ್ಯದ ಉದ್ಯಮಿಗಳು ಮತ್ತು ಮೈಸೂರು ವಲಯದ ವಿವಿಧ ಶಾಖೆಗಳ ಮುಖ್ಯಸ್ಥರು ಭಾಗವಹಿಸಿದರು.
ಬ್ಯಾಂಕ್ ನ ಹಿರಿಯ ಅಧಿಕಾರಿಗಳ ಬೆಂಬಲದಿಂದ ಹಲವು ವ್ಯವಹಾರಗಳು ವಿಸ್ತರಣೆಗೊಂಡಿದ್ದು, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು ಹಾಗೂ ಉದ್ಯೋಗಾವಕಾಶ ಸೃಷ್ಟಿಸುತ್ತಿವೆ.ಕಾರ್ಯಕ್ರಮದಲ್ಲಿ ಮಾತನಾಡಿದ ಬ್ಯಾಂಕ್ ಆಫ್ ಬರೋಡಾ ಬೆಂಗಳೂರು ವಲಯದ ಮುಖ್ಯ ಪ್ರಧಾನ ವ್ಯವಸ್ಥಾಪಕ ಹಾಗೂ ವಲಯ ಮುಖ್ಯಸ್ಥ ಮನೋಜ್ ಚಯಾನಿ, ಎಂ.ಎಸ್.ಎಂ.ಇ. ಕ್ಷೇತ್ರವು ನಮ್ಮ ಆರ್ಥಿಕತೆಯ ಮೆಲುಕುಹಲ್ಲು, ಮತ್ತು ಬ್ಯಾಂಕ್ ಆಫ್ ಬರೋಡಾ ಅವರ ಪ್ರಯಾಣದಲ್ಲಿ ನಂಬಿಗಸ್ತ ಸಹಯೋಗಿಯಾಗಿರಲು ಬದ್ಧವಾಗಿದೆ. ಇಂತಹ ಔಟ್ ರೀಚ್ ಕಾರ್ಯಕ್ರಮಗಳ ಮೂಲಕ, ನಮ್ಮ ಹಣಕಾಸು ಸೇವೆಗಳ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಉದ್ಯಮಿಗಳು ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅರಿತು ಬೆಳೆಯಲು ಸಹಾಯ ಮಾಡುತ್ತೇವೆ ಎಂದರು.ಕಾರ್ಯಕ್ರಮದಲ್ಲಿ ಸಾಲ ವಿಚಾರಣೆ, ದಾಖಲೆ ಮಾರ್ಗದರ್ಶನ ಮತ್ತು ತಕ್ಷಣದ ಅರ್ಜಿ ಸ್ವೀಕರಿಸುವ ವ್ಯವಸ್ಥೆಯೊಂದಿಗೆ ಒನ್- ಆನ್ -ಒನ್ ಸಂವಹನ ಕೌಂಟರ್ಕೂಡ ಏರ್ಪಡಿಸಲಾಗಿತ್ತು. ಇದರಿಂದ ಎಂ.ಎಸ್.ಎಂ.ಇ.ಗಳಿಗೆ ಹಣಕಾಸು ನೆರವು ಸುಲಭವಾಗಿ ಲಭ್ಯವಾಯಿತು.ಎಂ.ಎಸ್.ಎಂ.ಇ. ಕ್ಷೇತ್ರದ ದೃಷ್ಟಿಕೋನಕ್ಕೆ ಅನುಗುಣವಾಗಿ ಬ್ಯಾಂಕ್ ಆಫ್ ಬರೋಡಾ ಉದ್ಯಮಶೀಲತೆ ಉತ್ತೇಜಿಸಲು ಮತ್ತು ವ್ಯವಹಾರ ವೃದ್ಧಿಗೆ ನೆರವಾಗಲು ಮುಂದುವರಿಯುತ್ತಿದೆ.