ಸಾರಾಂಶ
ಕನ್ನಡಪ್ರಭ ವಿಶೇಷ
ಕನ್ನಡಪ್ರಭ ವಾರ್ತೆ ಬೆಂಗಳೂರು
ಹೈಕಮಾಂಡ್ ಒಪ್ಪಿಗೆ ನೀಡಿರುವ 34 ಮಂದಿ ಕಾರ್ಯಕರ್ತರಲ್ಲಿ ಯಾರಿಗೆ ಯಾವ ನಿಗಮ-ಮಂಡಳಿಯ ಅಧ್ಯಕ್ಷ ಸ್ಥಾನ ನೀಡಬೇಕು ಎಂಬ ಬಗ್ಗೆ ಸೋಮವಾರ ತಡರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸಭೆ ಸೇರಿ ಸುದೀರ್ಘ ಚರ್ಚೆ ನಡೆಸಿದರು.
ಮೂಲಗಳ ಪ್ರಕಾರ ಎಲ್ಲ 34 ಕಾರ್ಯಕರ್ತರಿಗೆ ನಿಗಮ-ಮಂಡಳಿ ನಿಗದಿ ಮಾಡಲು ಈ ಸಭೆ ನಡೆಸಲಾಗಿದ್ದು, ಎಲ್ಲ ಅಂದುಕೊಂಡಂತೆ ನಡೆದರೆ ಬಹುತೇಕ ಮಂಗಳವಾರ ಕಾರ್ಯಕರ್ತರಿಗೆ ನಿಗಮ-ಮಂಡಳಿ ಅಧ್ಯಕ್ಷ ಹುದ್ದೆ ನೀಡುವ ಕುರಿತ ಅಧಿಸೂಚನೆ ಹೊರಬೀಳುವ ಸಾಧ್ಯತೆಯಿದೆ.
ನಿಗಮ-ಮಂಡಳಿ ಹುದ್ದೆ: ಅಳೆದು ತೂಗಿ ಸಿದ್ಧಪಡಿಸಲಾಗಿರುವ ಈ ಪಟ್ಟಿಯಲ್ಲಿ ಸಿದ್ದರಾಮಯ್ಯ ಅವರ ಆಪ್ತರಾದ ಕೆ.ಮರಿಗೌಡ, ಸರೋವರ ಶ್ರೀನಿವಾಸ್, ಹಿರಿಯ ನಾಯಕ ಎಸ್.ಇ.ಸುಧೀಂದ್ರ, ಎನ್.ಎಸ್‌ಯುಐ ಅಧ್ಯಕ್ಷ ಕೀರ್ತಿ ಗಣೇಶ್
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್, ಮಾಜಿ ಮೇಯರ್‌ಗಳಾದ ಸಂಪತ್ ರಾಜ್ ಹಾಗೂ ಪದ್ಮಾವತಿ, ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಸೇರಿದ್ದ ತೀರ್ಥಹಳ್ಳಿಯ ಆರ್.ಎಂ.ಮಂಜುನಾಥಗೌಡ, ಯುವ ನಾಯಕ ಎಸ್.ಮನೋಹರ್
ಮಾಜಿ ಜಿಲ್ಲಾಧ್ಯಕ್ಷರಾದ ಜೆ.ಎಸ್.ಆಂಜನೇಯುಲು, ಎಚ್.ಎನ್.ಸುಂದರೇಶ್ ಮುಂತಾದವರಿಗೆ 34 ಮಂದಿಗೆ ನಿಗಮ ಮಂಡಳಿಯ ಅಧ್ಯಕ್ಷ ಹುದ್ದೆಯ ಅದೃಷ್ಟ ಕೂಡಿಬಂದಿದೆ.
ಹೈಕಮಾಂಡ್ ಒಪ್ಪಿಗೆ ನೀಡಿರುವ ಹೆಸರುಗಳು: 1. ಕಾಂತಾ ನಾಯಕ್ 2. ಮುಂಡರಗಿ ನಾಗರಾಜ್ 3. ವಿನೋದ್ ಎಸ್. ಅಸೂಟಿ 4. ಬಿ.ಎಚ್. ಹರೀಶ್ 5. ಡಾ.ಅಂಶುಮಂಥ್ 6. ಜೆ.ಎಸ್. ಆಂಜನೇಯುಲು 7. ಡಾ.ಬಿ. ಯೋಗೇಶ್ ಬಾಬು 8. ಡಾ.ಎಚ್.ಕೃಷ್ಣ 9. ಮರಿಗೌಡ 10. ದೇವಿಂದ್ರಪ್ಪ ಮರ್ತೂರು
11. ರಾಜಶೇಖರ್ ರಾಮಸ್ವಾಮಿ 12. ಕೆ.ಮರಿಗೌಡ 13. ಎಸ್.ಮನೋಹರ್ 14. ಅಯೂಬ್ ಖಾನ್ 15. ಮಮತಾ ಗುಟ್ಟಿ 16. ಜಿ.ಪಲ್ಲವಿ 17. ಎಸ್.ಇ.ಸುಧೀಂದ್ರ 18. ಡಾ.ನಾಗಲಕ್ಷ್ಮೀ ಚೌಧರಿ 19. ಎಚ್.ಎಸ್. ಸುಂದರೇಶ್ 20. ಆರ್.ಎಂ. ಮಂಜುನಾಥ್ ಗೌಡ
21. ಜಯಣ್ಣ 22. ಎಸ್.ಆರ್.ಪಾಟೀಲ್ ಬ್ಯಾಡಗಿ 23. ಆರ್.ಸಂಪತ್ ರಾಜ್ 24. ಪದ್ಮಾವತಿ 25. ಸರೋವರ ಶ್ರೀನಿವಾಸ್ 26. ಶಾಕಿರ್ ಸನದಿ 27. ಸೋಮಣ್ಣ ಬೇವಿನಮರದ್ 28. ಬಿ.ಪುಷ್ಪಾ ಅಮರನಾಥ್ 29. ಮಹಬೂಬ್ ಪಾಷ 30. ಕೀರ್ತಿ ಗಣೇಶ್
31. ಮಝರ್ ಖಾನ್ 32. ಸವಿತಾ ರಘು 33. ಲಲಿತ್ ರಾಘವ್ 34. ಜಿ.ಎಸ್.ಮಂಜುನಾಥ್