ಸಾರಾಂಶ
ತುರುವೇಕೆರೆ: ಪಟ್ಟಣದ ಬಾಣಸಂದ್ರ ರಸ್ತೆಯ ಭರತ್ ಪೆಟ್ರೋಲ್ ಬಂಕ್ ನಲ್ಲಿ ಬೈಕ್ ನಲ್ಲಿದ್ದ ಲಕ್ಷಾಂತರ ರೂಪಾಯಿಗಳನ್ನು ಕಳವು ಮಾಡಿ ಪರಾರಿಯಾಗಿರುವ ಘಟನೆ ಶುಕ್ರವಾರ ನಡೆದಿದೆ.
ತುರುವೇಕೆರೆ: ಪಟ್ಟಣದ ಬಾಣಸಂದ್ರ ರಸ್ತೆಯ ಭರತ್ ಪೆಟ್ರೋಲ್ ಬಂಕ್ ನಲ್ಲಿ ಬೈಕ್ ನಲ್ಲಿದ್ದ ಲಕ್ಷಾಂತರ ರೂಪಾಯಿಗಳನ್ನು ಕಳವು ಮಾಡಿ ಪರಾರಿಯಾಗಿರುವ ಘಟನೆ ಶುಕ್ರವಾರ ನಡೆದಿದೆ.
ಕೋಳಘಟ್ಟ ಗ್ರಾಮದ ವಿಶ್ವನಾಥ್ ಎಂಬುವರು ಶುಕ್ರವಾರ ಮಧ್ಯಾಹ್ನ ಬ್ಯಾಂಕ್ ನಲ್ಲಿ ಚಿನ್ನದ ವಡವೆಗಳನ್ನು ಅಡವಿಟ್ಟು 2.90 ಲಕ್ಷ ರೂಪಾಯಿಗಳನ್ನು ಪಡೆದುಕೊಂಡು ತನ್ನ ಬೈಕ್ ನ ಬಾಕ್ಸ್ ನಲ್ಲಿ ಇಟ್ಟುಕೊಂಡಿದ್ದರು. ತಮ್ಮ ಗ್ರಾಮದತ್ತ ತೆರಳುವ ಮುನ್ನ ಬಾಣಸಂದ್ರ ರಸ್ತೆಯಲ್ಲಿನ ಭರತ್ ಪೆಟ್ರೋಲ್ ಬಂಕ್ ವೊಂದರಲ್ಲಿ ಬೈಕ್ ಗೆ ಪೆಟ್ರೋಲ್ ಹಾಕಿಸಿ, ತದ ನಂತರ ಬೈಕ್ ಅನ್ನು ಸ್ವಲ್ಪ ಮುಂದೆ ನಿಲ್ಲಿಸಿ ತಾವು ತಂದಿದ್ದ ಕ್ಯಾನಿಗೆ ಡೀಸೆಲ್ ತುಂಬಿಸಿಕೊಳ್ಳಲು ಹೋಗಿದ್ದರು. ಡೀಸೆಲ್ ತುಂಬಿಸಿಕೊಂಡು ಬಂಕ್ ನವರಿಗೆ ಹಣ ಕೊಡಲು ಬೈಕ್ ನ ಬಾಕ್ಸ್ ತೆರೆಯಲು ಹೋದಾಗ ಶಾಕ್ ಆಗಿತ್ತು. ಬೈಕ್ ನ ಬಾಕ್ಸ್ ತೆರೆದಿತ್ತು. ಅಲ್ಲದೇ ಬಾಕ್ಸ್ ನಲ್ಲಿಟ್ಟಿದ್ದ ಸುಮಾರು ೨.೯೦ ಲಕ್ಷರೂ ಹಣ ಕಳ್ಳತನವಾಗಿತ್ತು. ಈ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಲಾಯಿತು. ಪೊಲೀಸರು ಸ್ಥಳಕ್ಕೆ ಆಗಮಿಸಿ ಪೆಟ್ರೋಲ್ ಬಂಕ್ ನಲ್ಲಿದ್ದ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ಕಳ್ಳತನ ಮಾಡಿದ ಆರೋಪಿಯ ಬೈಕ್ ನಂಬರ್ ಪತ್ತೆ ಆಗಿದೆ. ಆರೋಪಿಯ ಸೆರೆಗೆ ಪೊಲೀಸರು ಬಲೆ ಬೀಸಿದ್ದಾರೆ.