ಮಹಿಳೆಯ ಸರ ಕಿತ್ತು, ಬೈಕ್ ಬಿಟ್ಟು ಕಳ್ಳರು ಪರಾರಿ

| Published : Oct 04 2025, 12:00 AM IST

ಸಾರಾಂಶ

ಗಾಜನೂರು ಗ್ರಾಮದಲ್ಲಿ ನಿಡಘಟ್ಟ- ಚಂದಹಳ್ಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಹೆಲ್ಮೆಟ್ ಧರಿಸಿ ಬಂದ ಇಬ್ಬರು ಕಳ್ಳರು ಮಹಿಳೆ ಮನಸ್ಸನ್ನು ಬೇರೆಡೆಗೆ ತಿರುಗಿಸಿ ಕತ್ತಿನಲ್ಲಿದ್ದ ಸರವನ್ನು ಕಿತ್ತು ಹೋಗಲು ಯತ್ನಿಸಿದ್ದಾರೆ.

ಮಳವಳ್ಳಿ:

ಮಹಿಳೆಯ 50 ಗ್ರಾಂ ಮಾಂಗಲ್ಯ ಸರ ಕಿತ್ತು ಬೈಕ್‌ನಲ್ಲಿ ಪರಾರಿಯಾಗುವಾಗ ಗ್ರಾಮಸ್ಥರು ಹಿಮ್ಮೆಟ್ಟಿಸಿದ ಪರಿಣಾಮ ಕಳ್ಳರು ಬೈಕ್ ಬಿಟ್ಟು ತಪ್ಪಿಸಿಕೊಂಡಿರುವ ಘಟನೆ ತಾಲೂಕಿನ ಗಾಜನೂರು ಗ್ರಾಮದಲ್ಲಿ ನಡೆದಿದೆ.ಗ್ರಾಮದ ಎನ್. ಉಷಾ ಎಂಬ ಮಹಿಳೆ ತಾಲೂಕಿನ ಗಾಜನೂರು ಗ್ರಾಮದಲ್ಲಿ ನಿಡಘಟ್ಟ- ಚಂದಹಳ್ಳಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್‌ನಲ್ಲಿ ಹೆಲ್ಮೆಟ್ ಧರಿಸಿ ಬಂದ ಇಬ್ಬರು ಕಳ್ಳರು ಮಹಿಳೆ ಮನಸ್ಸನ್ನು ಬೇರೆಡೆಗೆ ತಿರುಗಿಸಿ ಕತ್ತಿನಲ್ಲಿದ್ದ ಸರವನ್ನು ಕಿತ್ತು ಹೋಗಲು ಯತ್ನಿಸಿದ್ದಾರೆ.

ಮಹಿಳೆ ಚೀರಾಟವನ್ನು ಅರಿತ ಗ್ರಾಮಸ್ಥರು ಬೈಕ್‌ನನ್ನು ಹಿಂಬಾಲಿಸಿದ್ದಾರೆ. ತಪ್ಪಿಸಿಕೊಳ್ಳಲು ಹೋದಾಗ ರಸ್ತೆಯ ಗುಂಡಿಯಲ್ಲಿ ಬಿದ್ದಾಗ ಬೈಕ್‌ನನ್ನು ಕೆಎಲ್-38, ಎಲ್.6848 ನಂಬರ್ ನ ಬಜಾಜ್ ಪಲ್ಸರ್ ಬೈಕ್‌ ಅನ್ನು ಅಲ್ಲಿಯೇ ಬಿಟ್ಟು ಸಾರ್ವಜನಿಕರಿಂದ ತಪ್ಪಿಸಿಕೊಂಡಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲಿಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.