ಮಂಚಹಳ್ಳಿಯಲ್ಲಿ ೧೯ ಕುರಿ ಕದ್ದ ಕಳ್ಳರು

| Published : Feb 09 2024, 01:46 AM IST

ಸಾರಾಂಶ

ತಾಲೂಕಿನ ಮಂಚಹಳ್ಳಿ ಗ್ರಾಮದ ರೈತರೊಬ್ಬರ ಮನೆಯ ಹಿಂಬದಿಯಲ್ಲಿ ಕುರಿ ಕೊಟ್ಟಿಗೆಯಲ್ಲಿದ್ದ ೧೯ ಕುರಿಗಳನ್ನು ಕಳ್ಳರು ಕದ್ದೊಯ್ದ ಘಟನೆ ಗುರುವಾರ ನುಸುಕಿನ ವೇಳೆ ನಡೆದಿದೆ

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆತಾಲೂಕಿನ ಮಂಚಹಳ್ಳಿ ಗ್ರಾಮದ ರೈತರೊಬ್ಬರ ಮನೆಯ ಹಿಂಬದಿಯಲ್ಲಿ ಕುರಿ ಕೊಟ್ಟಿಗೆಯಲ್ಲಿದ್ದ ೧೯ ಕುರಿಗಳನ್ನು ಕಳ್ಳರು ಕದ್ದೊಯ್ದ ಘಟನೆ ಗುರುವಾರ ನುಸುಕಿನ ವೇಳೆ ನಡೆದಿದೆ. ಗ್ರಾಮದ ಬಸವನಾಯಕನ ಮನೆಯ ಸುತ್ತ ಮುತ್ತಲಿನ ಮನೆಗಳ ಬಾಗಿಲಿಗೆ ಬೀಗ ಹಾಕಿರುವ ಕಳ್ಳರು ನಂತರ ಬಸವನಾಯಕನ ಕುರಿ ಕೊಟ್ಟಿಗೆಯಲ್ಲಿದ್ದ ೧೯ ಕುರಿಗಳನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಕುರಿಮಂಡಿಯಲ್ಲಿದ್ದ ಸಣ್ಣ ಕುರಿಗಳನ್ನು ಬಿಟ್ಟು ದಷ್ಟ ಪುಷ್ಟ ಕುರಿಗಳನ್ನು ಟೆಂಪೋಗೆ ಹಾಕಿಕೊಂಡು ಹೋಗಿದ್ದಾರೆ ಎಂದು ರೈತ ಬಸವನಾಯಕ ದೂರಿದ್ದಾರೆ. ಈ ಸಂಬಂಧ ಬೇಗೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.೧೯ ಕುರಿಗಳನ್ನು ಕಳೆದುಕೊಂಡ ರೈತ ಬಸವನಾಯಕ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾನೆ. ೨೧ ಕುರಿಗಳನ್ನು ಕಳೆದುಕೊಂಡ ರೈತ ಬಸವನಾಯಕರಿಗೆ ಲಕ್ಷಾಂತರ ರು.ನಷ್ಟ ಉಂಟಾಗಿದೆ ಎಂದು ಗ್ರಾಮದ ಹರೀಶ್‌ ಹಾಗು ಬೆಟ್ಟೇಗೌಡ ಹೇಳಿದ್ದು ಪೊಲೀಸರು ಕಳ್ಳರ ಪತ್ತೆ ಹಚ್ಚಿ ಕುರಿ ಕಳೆದುಕೊಂಡ ರೈತನಿಗೆ ಕುರಿ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.ಮಂಚಹಳ್ಳಿ ಗ್ರಾಮದ ಬಸವನಾಯಕ ಸೇರಿದ ೧೯ ಕುರಿಗಳನ್ನು ಕಳ್ಳರು ಕದ್ದಿದ್ದಾರೆ. ಬೇಗೂರು ಠಾಣೆಯಲ್ಲಿ ಕೇಸು ದಾಖಲಾಗಿದೆ. ಕಳ್ಳರ ಪತ್ತೆ ಹಚ್ಚಲಾಗುವುದು.ಸಿ.ವನರಾಜು, ಸಿಪಿಐ, ಬೇಗೂರು ಠಾಣೆ