ಸಾರಾಂಶ
ಪರಿಸರ ಸಂರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಸಾವಿರಾರು ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಅವರು ಕೈಗೊಂಡ ಕಾರ್ಯಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ. ಇಂತಹ ಮಹಾಮಾತೆ ನಿಧನದಿಂದ ನಮ್ಮ ದೇಶ ಹಾಗೂ ನಾಡಿಗೆ ತುಂಬಲಾಗದ ನಷ್ಟ ಉಂಟಾಗಿದ್ದು, ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಸಾಲುಮರದ ತಿಮ್ಮಕ್ಕನವರಿಗೆ ಗೌರವನಮನವನ್ನು ಸಲ್ಲಿಸೋಣವೆಂದು ಹಿರಿಯ ವಕೀಲ ಎಚ್.ಎಸ್.ಅರುಣ್ ತಿಳಿಸಿದರು. ೧೯೪೭ರಲ್ಲಿ ಭಾರತ ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ನಮ್ಮ ದೇಶದಲ್ಲಿ ಶೇ. ೭೭ರಷ್ಟು ದಟ್ಟಾರಣ್ಯ ಪ್ರದೇಶವಿತ್ತು ಮತ್ತು ನಂತರದಲ್ಲಿ ಅಭಿವೃದ್ಧಿ ಹಾಗೂ ಇತರೆ ಕಾರಣಗಳಿಗಾಗಿ ಈಗ ಶೇ. ೪೩ರಷ್ಟಿದೆ ಎಂದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪರಿಸರ ಸಂರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಸಾವಿರಾರು ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಅವರು ಕೈಗೊಂಡ ಕಾರ್ಯಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ. ಇಂತಹ ಮಹಾಮಾತೆ ನಿಧನದಿಂದ ನಮ್ಮ ದೇಶ ಹಾಗೂ ನಾಡಿಗೆ ತುಂಬಲಾಗದ ನಷ್ಟ ಉಂಟಾಗಿದ್ದು, ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಸಾಲುಮರದ ತಿಮ್ಮಕ್ಕನವರಿಗೆ ಗೌರವನಮನವನ್ನು ಸಲ್ಲಿಸೋಣವೆಂದು ಹಿರಿಯ ವಕೀಲ ಎಚ್.ಎಸ್.ಅರುಣ್ ತಿಳಿಸಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ವಕೀಲರ ಸಂಘ ವತಿಯಿಂದ ಸಾಲುಮರದ ತಿಮ್ಮಕ್ಕ ಅವರ ಗೌರವಾರ್ಥ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ೧೯೪೭ರಲ್ಲಿ ಭಾರತ ಸ್ವಾತಂತ್ರ್ಯ ಪಡೆದ ಸಂದರ್ಭದಲ್ಲಿ ನಮ್ಮ ದೇಶದಲ್ಲಿ ಶೇ. ೭೭ರಷ್ಟು ದಟ್ಟಾರಣ್ಯ ಪ್ರದೇಶವಿತ್ತು ಮತ್ತು ನಂತರದಲ್ಲಿ ಅಭಿವೃದ್ಧಿ ಹಾಗೂ ಇತರೆ ಕಾರಣಗಳಿಗಾಗಿ ಈಗ ಶೇ. ೪೩ರಷ್ಟಿದೆ. ಇಂತಹ ಸನ್ನಿವೇಶದಲ್ಲಿ ಮುಂದಿನ ಪೀಳಿಗೆಗಾಗಿ ಸ್ವಚ್ಛ ಪರಿಸರ ರಕ್ಷಿಸುವ ಸಲುವಾಗಿ ಗಿಡಗಳನ್ನು ನೆಟ್ಟು ಪೋಷಿಸೋಣವೆಂದರು.
ಹಿರಿಯ ವಕೀಲ ರಾಮಪ್ರಸನ್ನ ಅವರು ವೃಕ್ಷಮಾತೆ ಎಂದೇ ಪ್ರಸಿದ್ಧಿ ಪಡೆದಿರುವ ಸಾಲು ಮರದ ತಿಮ್ಮಕ್ಕ ಅವರು ಪರಿಸರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮಕ್ಕಳಿಲ್ಲದ ತಿಮ್ಮಕ್ಕ ತಮ್ಮ ಊರಿನ ದಾರಿಯ ಎರಡೂ ಬದಿಗಳಲ್ಲಿ ಗಿಡಗಳನ್ನು ನೆಟ್ಟು ಮಕ್ಕಳಂತೆ ಸಾಕಿ ಸಲಹಿದರು.ಅವರ ಈ ಸಾಧನೆಗೆ ಪದ್ಮಶ್ರೀ ಸೇರಿದಂತೆ ಇಂದಿರಾ ಪ್ರಿಯದರ್ಶಿನಿ ವೃಕ್ಷಮಿತ್ರ ಪ್ರಶಸ್ತಿ, ವೀರಚಕ್ರ ಪ್ರಶಸ್ತಿ, (ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆ, ಕರ್ನಾಟಕ ಸರ್ಕಾರ) ಮಾನ್ಯತೆ ಪಡೆದ ಪ್ರಮಾಣ ಪತ್ರ, (ಭಾರತೀಯ ವೃಕ್ಷ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ, ಬೆಂಗಳೂರು) ಇವರಿಂದ ಶ್ಲಾಘನೆಯ ಪ್ರಮಾಣ ಪತ್ರ, ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ, ಗಾಡ್ ಫ್ರಿ ಫಿಲಿಪ್ಸ್ ಧೀರತೆ ಪ್ರಶಸ್ತಿ, ಪಂಪಾಪತಿ ಪರಿಸರ ಪ್ರಶಸ್ತಿ, ಬಾಬಾಸಾಹೇಬ್ ಅಂಬೇಡ್ಕರ್ ಪ್ರಶಸ್ತಿಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ. ವೃಕ್ಷಮಾತೆಗೆ ಈ ಪ್ರಶಸ್ತಿಗಳನ್ನ ನೀಡುವ ಮೂಲಕ ಪ್ರಶಸ್ತಿಗಳ ಹಿರಿಮೆ ಹೆಚ್ಚಿದೆ ಎಂದು ಶ್ರೀಯುತರ ಸಾಧನೆಯನ್ನು ಸ್ಮರಿಸಿದರು.ಹಿರಿಯ ವಕೀಲ ಶಿವಮೂರ್ತಿ ಅವರು ನ್ಯಾಯಾಲಯದ ಆವರಣದಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವ ಸಲುವಾಗಿ ನಿರಂತರ ನೀರಿನ ವ್ಯವಸ್ಥೆಗಾಗಿ ತೊಟ್ಟಿ ಹಾಗೂ ಇತರೆ ವ್ಯವಸ್ಥೆ ಕಲ್ಪಿಸಲು ವಕೀಲರ ಸಂಘಕ್ಕೆ ೨೦ ಸಾವಿರ ರು. ದೇಣಿಗೆ ನೀಡುವುದಾಗಿ ತಿಳಿಸಿ, ಸಾಲುಮರದ ತಿಮ್ಮಕ್ಕನವರ ಪರಿಸರ ಕಾಳಜಿಯನ್ನು ನಾವುಗಳು ೧೧೪ ಗಿಡಗಳನ್ನು ನೆಟ್ಟು ಪೋಷಿಸುವ ಮೂಲಕ ಶ್ರದ್ದಾಂಜಲಿಯನ್ನು ಅರ್ಥಪೂರ್ಣವಾಗಿ ಸಲ್ಲಿಸೋಣವೆಂದರು.ತಾಲೂಕಿನ ವಕೀಲರ ಸಂಘದ ಅಧ್ಯಕ್ಷ ಎಂ.ವಿ.ಶಿವಕುಮಾರ್ ಹಾಗೂ ರಾಮಪ್ರಸನ್ನ ಮಾತನಾಡಿದರು. ಶ್ರದ್ಧಾಂಜಲಿ ಸಭೆಗೆ ಮುನ್ನ ನ್ಯಾಯಾಲಯದ ಆವರಣದಲ್ಲಿ ಸಾಲುಮರದ ತಿಮ್ಮಕ್ಕನವರ ಗೌರವಾರ್ಥ ಗಿಡಗಳನ್ನು ನೆಟ್ಟು ಪೋಷಿಸುವ ಸಂಕಲ್ಪದೊಂದಿಗೆ ಕಂಬನಿ ಮಿಡಿದರು.
ಉಪವಲಯ ಅರಣ್ಯಾಧಿಕಾರಿ ಕುಮಾರಸ್ವಾಮಿ, ಹಿರಿಯ ವಕೀಲರಾದ ಪುರುಷೋತಮ್, ಬಾನುಪ್ರಕಾಶ್, ಸಿ.ಎಂ.ಅಶೋಕ್, ಯು.ಆರ್.ಸತೀಶ್, ಪ್ರಶಾಂತ್, ಮೈತ್ರಿ ಕೆ.ಎನ್., ಜ್ಯೋತಿಲಕ್ಷ್ಮೀ ಕೆ, ಕೆ.ಎಸ್. ಪ್ರಕಾಶ್, ಜಯಪ್ರಕಾಶ್, ಶ್ವೇತ, ಸುನೀಲ್, ಮಮತಾ, ರಾಮಪ್ರಸಾದ್, ಶಿವಕುಮಾರ್, ಮಂಜುನಾಥ್, ರಾಮಚಂದ್ರ ಬಿ.ಕೆ, ನವೀನ್, ಶಿವಣ್ಣ, ಶಶಿಕುಮಾರ್, ಆಶಾಕುಮಾರಿ, ರವಿ, ಆಶಾರಾಣಿ, ಸಂಗೀತ, ರಾಣಿ, ಅನುಷಾ, ಚಂದ್ರಶೇಖರ್, ರಾಘವೇಂದ್ರ, ಪ್ರವೀಣ್, ಕೃಷ್ಣೇಗೌಡ, ಕೃಷ್ಣಮೂರ್ತಿ, ಪುನೀತ್, ಪ್ರಶಾಂತ್, ಅರಣ್ಯ ಇಲಾಖೆ ವಾಚರ್‌ಗಳಾದ ಹೇಮಂತ್, ಶಿವಣ್ಣ, ಇತರರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))