ತಿಮ್ಮಕ್ಕನ ಪರಿಸರ ಸಂರಕ್ಷಣಾ ಸೇವೆ ಅನನ್ಯ: ಚಾ.ರಂ.ಶ್ರೀನಿವಾಸಗೌಡ

| Published : Nov 20 2025, 12:45 AM IST

ತಿಮ್ಮಕ್ಕನ ಪರಿಸರ ಸಂರಕ್ಷಣಾ ಸೇವೆ ಅನನ್ಯ: ಚಾ.ರಂ.ಶ್ರೀನಿವಾಸಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಸಾಲುಮರದ ತಿಮ್ಮಕ್ಕ ಅವರಿಗೆ ಮಕ್ಕಳಿಲ್ಲದ ಹಿನ್ನೆಲೆ ಅವರು, ಮಕ್ಕಳಂತೆ ೪ಕಿಮೀ ದೂರ ರಸ್ತೆಬದಿ 300ಕ್ಕೂ ಹೆಚ್ಚು ಗಿಡಗಳು, 8 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು, ಪೋಷಣೆ ಮಾಡಿದ್ದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರಈಚೆಗೆ ನಿಧನರಾದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನ ಗೌರವಾರ್ಥ ನಗರದ ಚಾಮರಾಜೇಶ್ವರ ದೇವಸ್ಥಾನ ಮುಂಭಾಗದಲ್ಲಿ ಜಿಲ್ಲಾ ಕನ್ನಡಪರ ಸಂಘಟನೆಗಳ ಒಕ್ಕೂಟ ಹಾಗೂ ಗಡಿನಾಡು ಜಿಲ್ಲಾ ಕನ್ನಡಪರ ಹೋರಾಟ ವೇದಿಕೆ ವತಿಯಿಂದ ಸಾಲುಮರದ ತಿಮ್ಮಕ್ಕ ಅವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಅಖಿಲ ಕರ್ನಾಟಕ ಕನ್ನಡ ಮಹಾಸಭೆ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ಸಾಲುಮರದ ತಿಮ್ಮಕ್ಕ ಅವರಿಗೆ ಮಕ್ಕಳಿಲ್ಲದ ಹಿನ್ನೆಲೆ ಅವರು, ಮಕ್ಕಳಂತೆ ೪ಕಿಮೀ ದೂರ ರಸ್ತೆಬದಿ 300ಕ್ಕೂ ಹೆಚ್ಚು ಗಿಡಗಳು, 8 ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು, ಪೋಷಣೆ ಮಾಡಿದ್ದರು. ಈಗ ಅವು ಹೆಮ್ಮರವಾಗಿ ಬೆಳೆದು, ಸಾರ್ವಜನಿಕರಿಗೆ ನೆರಳು ಒದಗಿಸುತ್ತಿವೆ. ಇಂತಹ ಸಾಧಕರನ್ನು ಸ್ಮರಿಸುವುದು ಕನ್ನಡಿಗರಾದ ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ನಿಜಧನಿಗೋವಿಂದರಾಜು, ಪಣ್ಯದಹುಂಡಿರಾಜು, ಗೊರವರಕಲಾವಿದ ಶಿವಮಲ್ಲೇಗೌಡ, ಗಡಿನಾಡು ಕನ್ನಡ ಹೋರಾಟ ವೇದಿಕೆ ಅಧ್ಯಕ್ಷ ರಾಚಪ್ಪ, ಕನ್ನಡ ಪರ ಹೋರಾಟಗಾರ ಮಹೇಶ್ ಗೌಡ, ಎಸ್‌ಪಿಬಿ ಸಾಂಸ್ಕೃತಿಕ ಕಲಾವೇದಿಕೆ ಅಧ್ಯಕ್ಷ ಶಿವಣ್ಣ, ಲಿಂಗರಾಜು, ಸಿದ್ದರಾಜು, ಬಂಗಾರಸ್ವಾಮಿ, ಸುಬ್ಬಯ್ಯ, ರಂಗಸ್ವಾಮನಾಯಕ, ಸುಭಾಷ್, ಶಿವರಾಜು, ನಾಗೇಶ್, ನಾಗೇಂದ್ರ ಇತರರು ಹಾಜರಿದ್ದರು.