ಅನಿಮಲ್‌ ವೆಲ್‌ಫೇರ್‌ ಕಮಿಟಿ ರಚಿಸಿ ಬೀದಿ ನಾಯಿಗೆ ಹೋಟೆಲ್‌ಗಳಲ್ಲಿ ಉಳಿದ ಆಹಾರ ನೀಡಲು ಚಿಂತನೆ

| Published : Sep 27 2024, 01:21 AM IST / Updated: Sep 27 2024, 08:17 AM IST

ಅನಿಮಲ್‌ ವೆಲ್‌ಫೇರ್‌ ಕಮಿಟಿ ರಚಿಸಿ ಬೀದಿ ನಾಯಿಗೆ ಹೋಟೆಲ್‌ಗಳಲ್ಲಿ ಉಳಿದ ಆಹಾರ ನೀಡಲು ಚಿಂತನೆ
Share this Article
  • FB
  • TW
  • Linkdin
  • Email

ಸಾರಾಂಶ

ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಮತ್ತು ಮನುಷ್ಯರ ಮೇಲಿನ ದಾಳಿಯನ್ನು ತಡೆಯಲು ಬಿಬಿಎಂಪಿ ಹೊಸ ಯೋಜನೆಯನ್ನು ರೂಪಿಸಿದೆ. ಹೋಟೆಲ್‌ಗಳಲ್ಲಿ ಮಾರಾಟವಾಗದ ಆಹಾರವನ್ನು ಬೀದಿ ನಾಯಿಗಳಿಗೆ ನೀಡಲು ಚಿಂತಿಸಲಾಗಿದೆ.

 ಬೆಂಗಳೂರು : ನಗರದ ಹೋಟೆಲ್‌ ಮಾಲೀಕರು ಸೇರಿದಂತೆ ಸಾರ್ವಜನಿಕರ ಸಹಭಾಗಿತ್ವದಲ್ಲಿ ‘ಅನಿಮಲ್‌ ವೆಲ್‌ಫೇರ್‌ ಕಮಿಟಿ’ ರಚಿಸಿ ಬೀದಿ ನಾಯಿಗಳಿಗೆ ಆಹಾರ ಪೂರೈಕೆಗೆ ಬಿಬಿಎಂಪಿ ಚಿಂತನೆ ನಡೆಸಿದೆ.

ಇತ್ತೀಚಿಗೆ ಬೀದಿ ನಾಯಿಗಳು ಹಾವಳಿ ಹೆಚ್ಚಾಗಿದ್ದು, ಮನುಷ್ಯರಿಗೆ ಕಡಿಯುವ ಪ್ರಕರಣ ಅಧಿಕಗೊಳ್ಳುತ್ತಿವೆ. ಈ ಕುರಿತು ತಜ್ಞರು ಹಸಿವಿನ ಕಾರಣಕ್ಕೆ ಮನುಷ್ಯರ ಮೇಲೆ ದಾಳಿ ನಡೆಸಲಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಬೀದಿ ನಾಯಿಗಳಿಗೆ ಆಹಾರದ ವ್ಯವಸ್ಥೆ ಮಾಡಲು ಮುಂದಾಗಿದೆ.

ಪಾಲಿಕೆಯ ಎಲ್ಲ ವಾರ್ಡ್‌ಗಳಲ್ಲಿ ಸ್ಥಳೀಯ ಹೋಟೆಲ್‌ ಮಾಲೀಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಹೋಟೆಲ್‌ಗಳಲ್ಲಿ ಮಾರಾಟವಾಗದೇ ಉಳಿದ ಆಹಾರವನ್ನು ಪಡೆದು ಬೀದಿ ನಾಯಿಗಳಿಗೆ ಪೂರೈಸಬೇಕು. ಇದಕ್ಕಾಗಿ ಬಿಬಿಎಂಪಿಯ ಪೌರ ಕಾರ್ಮಿಕರಿಗೆ ಅವರು ಕಾರ್ಯ ನಿರ್ವಹಿಸುವ ವ್ಯಾಪ್ತಿಯಲ್ಲಿ ಬೀದಿ ನಾಯಿಗಳಿಗೆ ಆಹಾರದ ಬಟ್ಟಲು ನೀಡುವುದು, ನಿರ್ದಿಷ್ಟ ಸ್ಥಳದಲ್ಲಿ ಆ ಬಟ್ಟಲು ಇಟ್ಟು ಆಹಾರ ಹಾಕುವ ವ್ಯವಸ್ಥೆ ಮಾಡಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ.

ಈ ಕಾರ್ಯಕ್ಕೆ ನೋಂದಣಿ ಮಾಡಿಕೊಳ್ಳುವುದಕ್ಕೆ ಬಿಬಿಎಂಪಿಯು ಶೀಘ್ರದಲ್ಲಿ ವೆಬ್‌ ಲಿಂಕ್‌ ಬಿಡುಗಡೆ ಮಾಡಲು ತೀರ್ಮಾನಿಸಿದೆ ಎಂದು ಪಶುಪಾಲನೆ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ಮಾಹಿತಿ ನೀಡಿದ್ದಾರೆ.