ಸಾರಾಂಶ
ಕನ್ನಡಪ್ರಭ ವಾರ್ತೆ ಸುರಪುರ
ಸುರಪುರದ ಕನ್ನಡ ಸಾಹಿತ್ಯ ಸಂಘ, ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಮತ್ತು ನಾಡಹಬ್ಬ ಉತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಗರುಡಾದ್ರಿ ಕಲಾ ಮಂದಿರದಲ್ಲಿ ಸೆ.22 ರಿಂದ ಅ.2 ರವರೆಗೆ 39ನೇ ನಾಡಹಬ್ಬ ಉತ್ಸವ ಆಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ರಾಜಾ ಮುಕುಂದ ನಾಯಕ ಹೇಳಿದರು.ನಗರದ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್‌ನಲ್ಲಿ ನಾಡಹಬ್ಬ ಉತ್ಸವ ಆಚರಣೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಮತ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೆ.22ರಂದು ಬೆಳಿಗ್ಗೆ 11 ಗಂಟೆಗೆ ನಾಡದೇವಿಯ ಭಾವಚಿತ್ರದ ಮೆರಣಿಗೆಯು ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಿಂದ ಗರುಡಾದ್ರಿ ಕಲಾ ಮಂದಿರದವರೆಗೂ ಜರುಗಲಿದೆ. ನಾಡದೇವಿಯ ಭಾವಚಿತ್ರದ ಮೆರವಣಿಗೆಗೆ ಅರಸು ಮನೆತನದ ರಾಜಾ ಕೃಷ್ಣಪ್ಪ ನಾಯಕ, ಶಾಸಕ ರಾಜಾ ವೇಣುಗೋಪಾಲ ನಾಯಕ, ನಾಡಹಬ್ಬ ಉತ್ಸವ ಸಮಿತಿ ಗೌರವಾಧ್ಯಕ್ಷ ರಾಜಾ ಪಾಮ ನಾಯಕ, ಅಧ್ಯಕ್ಷ ರಾಜಾ ಮುಕುಂದ ನಾಯಕ, ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ, ಉದ್ಯಮಿ ಗ್ಯಾನಚಂದ ಜೈನ್, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಕಾಶ ಗುತ್ತೇದಾರ್ ಚಾಲನೆ ನೀಡುವರು ಎಂದರು.
ನಂತರ ಗರುಡಾದ್ರಿಯಲ್ಲಿ ನಾಡದೇವಿಯ ಸ್ಥಾಪನೆ, ಪೂಜೆ ಪ್ರಸಾದ ವಿತರಣೆ ನಡೆಯುವುದು. ಅಂದು ಸಂಜೆ 7 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಾಡಹಬ್ಬ ಉತ್ಸವ ಸಮಿತಿ ಗೌರವಾಧ್ಯಕ್ಷ ರಾಜಾ ಪಾಮನಾಯಕ ಉದ್ಘಾಟಿಸುವರು. ಕನ್ನಡ ಸಾಹಿತ್ಯ ಸಂಘ ಅಧ್ಯಕ್ಷ ಬಸವರಾಜ ಜಮದ್ರಖಾನಿ ಅಧ್ಯಕ್ಷತೆ ವಹಿಸುವರು. ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ಆರ್.ಎಂ.ನಾಯಕ, ಉಪಾಧ್ಯಕ್ಷರಾದ ರಾಜಾ ಹರ್ಷವರ್ಧನ ನಾಯಕ, ಕಿಶೋರಚಂದ ಜೈನ್, ಕೆವೈಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ ಮುಖ್ಯ ಅತಿಥಿಗಳಾಗಿರುತ್ತಾರೆ ಎಂದರು.ಸೆ.22ರಿಂದ ಅ.2ರವರೆಗೆ ಪ್ರತಿ ದಿನ ಸಂಜೆ 7 ಗಂಟೆಗೆ ನಗರದ ವಿವಿಧ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮಗಳು ಇರುತ್ತವೆ. ಅ.1ರಂದು ಸಂಜೆ 7 ಗಂಟೆಗೆ ಸಮಾರೋಪ ಸಮಾರಂಭ ಜರುಗಲಿದೆ. ಮಾಜಿ ಸಚಿವ ರಾಜುಗೌಡ, ಜಯಲಲಿತಾ ಪಾಟೀಲ್, ರಾಜಾ ಹನುಮಪ್ಪ ನಾಯಕ, ಶರಣಬಸಪ್ಪ ಯಾಳವಾರ ಮುಖ್ಯ ಅತಿಥಿಗಳಾಗಿರುತ್ತಾರೆ.
ಯಲ್ಲಪ್ಪ ಕಾಡ್ಲೂರ, ಪಂಡಿತ ನಿಂಬೂರೆ, ಬಸವರಾಜ ಜಮದ್ರಖಾನಿ, ಜೆ.ಅಗಸ್ಟಿನ್, ಪ್ರಕಾಶ ಸಜ್ಜನ, ಶ್ರೀನಿವಾಸ ಜಾಲವಾದಿ ಅತಿಥಿಗಳಾಗಿರುತ್ತಾರೆ. ಆರ್.ಎಂ ನಾಯಕ ಅಧ್ಯಕ್ಷತೆ ವಹಿಸುವರು ಎಂದು ವಿವರಿಸಿದರು.ಬಸವರಾಜ ಜಮದ್ರಖಾನಿ, ಕಿಶೋರಚಂದ ಜೈನ್, ಗೋವರ್ಧನ ಝಂವ್ಹಾರ, ಮಂಜುನಾಥ ಗುಳಗಿ, ಶ್ರೀನಿವಾಸ ಜಾಲವಾದಿ, ರಾಯಚಂದ ಜೈನ್, ಮಹೇಶ ಜಹಗೀರದಾರ್, ಶಿವಕುಮಾರ ಮಸ್ಕಿ, ಪಾರಪ್ಪ ಗುತ್ತೇದಾರ್, ಶರಣು ನಾಯಕ ಬೈರಿಮಡ್ಡಿ, ಭೀಮನಗೌಡ ಲಕ್ಷ್ಮೀ ಹೆಮನೂರ, ಭೀಮು ನಾಯಕ ಮಲ್ಲಿಬಾವಿ, ವೆಂಕಟೇಶ ಸುರಪುರಕರ, ಹಣಮಂತ್ರಾಯ ಚೌಡೇಶ್ವರಿಹಾಳ, ರಾಜಶೇಖರ ದೇಸಾಯಿ, ದೇವು ಹೆಬ್ಬಾಳ, ಪ್ರಕಾಶ ಬಣಗಾರ, ಸೋಮರೆಡ್ಡಿ ಮಂಗ್ಯಾಳ, ಶ್ರೀಶೈಲ್ ಯಂಕಂಚಿ, ಶರಣಬಸವ ಕಬಾಡಗೇರಾ. ರಮೇಶ ಇತರರು ಹಾಜರಿದ್ದರು.