ಸಾರಾಂಶ
ತರೀಕೆರೆಯಲ್ಲಿ ಬಿಜೆಪಿ ಕಾರ್ಯಾಲಯದಲ್ಲಿ ಕಾರ್ಯಕರ್ತರ ಸಭೆ
ಕನ್ನಡಪ್ರಭ ವಾರ್ತೆ, ತರೀಕೆರೆರಾಷ್ಟ್ರಕ್ಕೋಸ್ಕರ ನಡೆಯುತ್ತಿರುವ ಚುನಾವಣೆ ಇದೆಂದು ಮತದಾರರಿಗೆ ತಿಳಿಸಲು ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.ಗುರುವಾರ ಭಾರತೀಯ ಜನತಾ ಪಾರ್ಟಿಯಿಂದ ಬಿಜೆಜೆ ಕಾರ್ಯಾಲಯದಲ್ಲಿ ಏರ್ಪಾಡಿಸಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದರು. ಪ್ರಥಮ ಸುತ್ತಿನ ಚುನಾವಣಾ ಪ್ರಚಾರ ಮುಗಿಸಿ ಇದು ಎರಡನೆ ಸುತ್ತಿನ ಚುನಾವಣಾ ಪ್ರಚಾರಕ್ಕಾಗಿ ಬಂದಿದ್ದೇನೆ, ಮತದಾರರ ಭಾವನೆಯನ್ನು ತಿಳಿದುಕೊಳ್ಳಬೇಕು, ವೈಚಾರಿಕ ವಿಚಾರಗಳಾದ ವ್ಯಕ್ತಿಗಿಂತ ಪಕ್ಷ ಬಹಳ ಮುಖ್ಯ, ರಾಷ್ಟ್ರದ ವಿಚಾರ ಬಂದಾಗ, ವ್ಯಕ್ತಿ ಅಥವಾ ಪಾರ್ಟಿಗಿಂತ ದೇಶವೇ ಬಹಳ ದೊಡ್ಡದು, ದೇಶದ ಗ್ಯಾರಂಟಿಗಾಗಿ ಈ ಚುನಾವಣೆ ನಡೆಯುತ್ತಿದೆ ಎಂದು ಮತದಾರರಿಗೆ ತಿಳಿಸಬೇಕು ಎಂದರು.
ಪ್ರತಿ ತಿಂಗಳೂ 22 ಲಕ್ಷ ಕ್ವಿಂಟಾಲ್ ಅಕ್ಕಿಯನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡುತ್ತಿದೆ. ಸತ್ಯಕ್ಕೆ ಅಪಚಾರ ವಾಗಬಾರದು. ಕೇಂದ್ರದಿಂದ 10 ಕೆಜಿ ಕೊಡಲಾಗುತ್ತಿದೆ ಎಂದು ಹೇಳಿದರು.ರಾಜ್ಯದಲ್ಲಿ ಹೊಸ ಕಾಮಗಾರಿ ಆಗಿಲ್ಲ, ಅಭಿವೃದ್ಧಿ ಕೆಲಸ ನಿಂತಿದೆ ಹತ್ತುವರೆ ಲಕ್ಷ ಜನರಿಗೆ ಗೃಹಲಕ್ಷ್ಮಿ ಯೋಜನೆ ಬಂದಿಲ್ಲ, ಭಾರತ ದೇಶ ಹೆಚ್ಚು ಶಕ್ತಿಯುತವಾಗಲು ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ, ನರೇಂದ್ರ ಮೋದಿ ಮತ್ತೆ ದೇಶದ ಪ್ರಧಾನಿಯಾಗಿಸಬೇಕು. ಅದಕ್ಕಾಗಿ ಅತ್ಯಂತ ಹೆಚ್ಚಿನ ಮತ ನೀಡಿ ನನ್ನನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು. ಪುರಸಭೆ ಸದಸ್ಯ ಟಿ.ಎಂ.ಬೋಜರಾಜ್ ಮಾತನಾಡಿ ಈ ಚುನಾವಣೆ ಅತ್ಯಂತ ಸವಾಲಿನ ಮಹತ್ವದ ಚುನಾವಣೆ ಯಾಗಿದೆ, ಸ್ವಾಭಿಮಾನಿ ಭಾರತದ ನಿರ್ಮಾಣಕ್ಕಾಗಿ ಪ್ರಬಲ ನಾಯಕ ನರೇಂದ್ರ ಮೋದಿ ಚುಕ್ಕಾಣಿ ಹಿಡಿಯಬೇಕು. ಸಾರಿಗೆ ಸಂಪರ್ಕ, ವಂದೇ ಭಾರತ್ ರೈಲು ಮಾರ್ಗ ಇತ್ಯಾದಿ ಅನೇಕ ಅಭಿವೃದ್ಧಿ ಕಾರ್ಯಗಳನ್ನುನರೇಂದ್ರ ಮೋದಿ ನಿರ್ವಹಿಸಿದ್ದಾರೆ. ಪಟ್ಟಣದಲ್ಲಿ ದಿನದ 24 ಗಂಟೆ ಶುದ್ಧವಾದ ಕುಡಿಯುವ ನೀರಿನ ಯೋಜನೆ ಅಮೃತ್ 2 ಕೇಂದ್ರದ ಬಿಜೆಪಿ ಸರ್ಕಾರದ ಯೋಜನೆಯಾಗಿದೆ. ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಅತ್ಯಂತ ಹೆಚ್ಚಿನ ಮತ ನೀಡಿ ಗೆಲ್ಲಿಸಬೇಕು ಎಂದು ಕೋರಿದರು. ಮಾಜಿ ಶಾಸಕ ಎಸ್.ಎಂ.ನಾಗರಾಜ್ ಮಾತನಾಡಿ ದೇಶದ ಬಲಿಷ್ಠ ನಾಯಕರು ನರೇಂದ್ರ ಮೋದಿ. ದೇಶದ ರಕ್ಷಣೆ ಸಂರಕ್ಷಣೆ ಮಾಡಿದರು, ದೇಶವನ್ನು ಆರ್ಥಿಕವಾಗಿ 5ನೇ ಸ್ಥಾನಕ್ಕೆ ತಂದಿದ್ದಾರೆ. ದೇಶದ ಹಿತದೃಷ್ಠಿಯಿಂದ ನರೇಂದ್ರ ಮೋದಿ ಮತ್ತೆ ಪ್ರಧಾನ ಮಂತ್ರಿಯಾಗಬೇಕು, ಬಿಜೆಪಿ ಅಭ್ಯರ್ಥಿಗೆ ಜಯಸಿಗಬೇಕೆಂದರು. ಪುರಸಭೆ ಮಾಜಿ ಅಧ್ಯಕ್ಷ, ಜಾತ್ಯತೀತ ಜನತಾ ದಳದ ತಾಲೂಕು ಅಧ್ಯಕ್ಷ ಎಂ.ನರೇಂದ್ರ ಮಾತನಾಡಿ ದೇಶ ಉಳಿದರೆ ನಾವು ಉಳಿಯುತ್ತೇವೆ, ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಅವರು ಕಸ್ತೂರಿ. ನಮ್ಮಉಳಿವಿಗೆ ಕೋಟಾ ಶ್ರೀನಿವಾಸ ಪೂಜಾರಿ ಗೆಲ್ಲಬೇಕು, ದೇಶದ ಸಂಸ್ಕೃತಿ ಸಂಸ್ಕಾರ ಉಳಿಯಲು ನರೇಂದ್ರ ಮೋದಿ ಮತ್ತೆ ಪ್ರಧಾನಿ ಗಳಾಗಬೇಕುಇದಕ್ಕೆ ಬಿಜೆಪಿಗೆ ನಿಮ್ಮ ಮತ ನೀಡಿ ಗೆಲ್ಲಿಸಿ ಎಂದು ಹೇಳಿದರು.ಮುಖಂಡರಾದ ಕೃಷ್ಮಮೂರ್ತಿ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ, ತಾಲೂಕು ಬಿಜೆಪಿ ಅಧ್ಯಕ್ಷ ಪ್ರತಾಪ್ ಗರಗದಹಳ್ಳಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಎಲ್.ರಮೇಶ್, ಕೆ.ಆರ್.ಆನಂದಪ್ಪ, ಶಿವಾನಂದ್, ಮುದುಗುಂಡಿ ಲೋಹಿತ್, ಜಿಪಂ ಮಾಜಿ ಅಧ್ಯಕ್ಷೆ ಚೈತ್ರಶ್ರೀ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೇಶ್ವರಿ ರಾಜಶೇಖರ್ ಮತ್ತಿತರರು ಭಾಗವಹಿಸಿದ್ದರು.
--ಬಾಕ್ಸ್--ಬಹಿರಂಗ ಚರ್ಚೆಗೆ ಆಹ್ವಾನ
ಪಕ್ಷದ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ 4 ಬಾರಿ ಶಾಸಕರಾಗಿ 3 ಬಾರಿ ಸಚಿವರಾಗಿ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಿದ್ದಾರೆ. ದೇಶದ ಉಳಿವಿಗೆ, ರಕ್ಷಣೆಗಾಗಿ ನರೇಂದ್ರ ಮೋದಿ ಆಡಳಿತ ನಡೆಸಿದ್ದು ಮತ್ತೆ ಪ್ರಧಾನಿಯಾಗಬೇಕು ಎಂದು ಮಾಜಿ ಶಾಸಕ ಡಿ.ಎಸ್.ಸುರೇಶ್ ಹೇಳಿದರು.ಅಮೃತ್ -2 ಶುದ್ಧ ಕುಡಿಯುವ ಯೋಜನೆಗೆ ಕೇಂದ್ರ ಸರ್ಕಾರ ತರೀಕೆರೆ ತಾಲೂಕಿಗೆ 55 ಕೋಟಿ ಮತ್ತು ಅಜ್ಜಂಪುರ 25 ಕೋಟಿ ಮಂಜೂರು ಮಾಡಿದೆ. ತರೀಕೆರೆ ಪಟ್ಟಣ ನಗರೋತ್ಥಾನ ಯೋಜನೆಗೆ 10 ಕೋಟಿ ನಮ್ಮ ಬಿಜೆಪಿ ಸರ್ಕಾರ ಮಂಜೂರು ಮಾಡಿದ್ದು, ಆ ಕಾಮಗಾರಿಗಳು ಈಗ ನಡೆಯತ್ತಿದೆ. ನಾನು ದಾಖಲೆ ತರುತ್ತೇನೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲು ಹಾಕಿದರು.18ಕೆಟಿಆರ್.ಕೆ.1ಃ
ತರೀಕೆರೆಯಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿದರು. ಮಾಜಿ ಶಾಸಕರಾದ ಡಿ.ಎಸ್.ಸುರೇಶ್, ಎಸ್.ಎಂ.ನಾಗರಾಜ್ ಮತ್ತಿತರರು ಇದ್ದರು.