ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಇದು ಸಿದ್ದರಾಮಯ್ಯ ಆಡಳಿತಕ್ಕೆ ಜನ ಕೊಟ್ಟ ತೀರ್ಪಲ್ಲ. ಈ ತೀರ್ಪಿನಿಂದ ಹಗರಣಗಳು ಮುಚ್ಚಿ ಹೋಗುವುದಿಲ್ಲ. ಗೆದ್ದವರು ಬೀಗುವ ಅಗತ್ಯವು ಇಲ್ಲ ಎಂದು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ತಿಳಿಸಿದರು.ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣ ಹೆಂಡ ಶಿಫಾರಸು ಇಂತಹದರ ಮೇಲೆಯೆ ಚುನಾವಣೆ ನಡೆಯುವುದು. ಈ ಚುನಾವಣೆಯು ಅದೇ ರೀತಿ ನಡೆದಿದೆ. ಮುಡಾ ಹಗರಣ ಮೈಸೂರು ವ್ಯಾಪ್ತಿಯದು. ಹೀಗಾಗಿ, ಅದು ಚನ್ನಪಟ್ಟಣದಲ್ಲಿ ವರ್ಕ್ ಆಗುತ್ತೆ ಅಂದುಕೊಳ್ಳುವುದು ಬೇಡ ಎಂದರು.ಸಿದ್ದರಾಮಯ್ಯ ಸರ್ಕಾರಕ್ಕೆ ಜನಕೊಟ್ಟ ತೀರ್ಪುಇದಲ್ಲ. ಉಪ ಚುನಾವಣೆಗಳು ಯಾವ ರೀತಿ ನಡೆದಿದೆಎಂಬುದು ಎಲ್ಲರಿಗೂ ಗೊತ್ತಿದೆ. ಹಗರಣದ ಆರೋಪ ಹೊತ್ತವರು ಈ ತೀರ್ಪುನಿಂದ ಖುಷಿ ಪಡುವ ಅಗತ್ಯ ಇಲ್ಲ. ನಿಖಿಲ್ ಸೋತಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದೆಲ್ಲ ಸಾಮಾನ್ಯ. ಏನು ವೋಟ್ ಹೊತ್ತಿಕೊಂಡು ಭೂತ್ ಗಳಲ್ಲಿ ಹಾಕಿಸಿಕೊಳ್ಳಲು ಆಗುತ್ತದ ಎಂದು ಅವರು ಪ್ರಶ್ನಿಸಿದರು.ಬಿಜೆಪಿಯವರು ಜೆಡಿಎಸ್ ಒಟ್ಟಾಗಿ ಕೆಲಸ ಮಾಡಿದರು. ಆದರೆ, ಅದು ಫಲ ಕೊಟ್ಟಿಲ್ಲ. ಬಿಜೆಪಿ ನಾಲ್ಕು ಗುಂಪು ಇರೋದು ಸತ್ಯ. ಬಿಜೆಪಿ ಅವರಿಗೆ ಜನರು ಮತ್ತೆ ಮತ್ತೆ ಅವಕಾಶ ಕೊಟ್ಟಿದ್ದಾರೆ. ಇದು ತಪ್ಪು ತಿದ್ದುಕೊಳ್ಳುವ ಅವಕಾಶ ಎಂದು ಅವರು ಹೇಳಿದರು.