ದಸರಾದಲ್ಲಿ ನನ್ನವ್ವ ಕನ್ನಡ ರಾಜ್ಯೋತ್ಸವ

| Published : Oct 04 2025, 01:00 AM IST

ಸಾರಾಂಶ

ವಿಶ್ವದಾದ್ಯಂತ ಮೈಸೂರು ದಸರಾ ಎಂದರೆ ಜನಮನ್ನಣೆ ಪಡೆದಿರುವ ಒಂದು ಸಾಂಸ್ಕೃತಿಕ ಮಹೋತ್ಸವ. ಈ ಸಂದರ್ಭದಲ್ಲಿ ನನ್ನವ ಸಂಸ್ಥೆಯವರು ಪ್ರತಿ ತಿಂಗಳ ಒಂದರಂದು ಕನ್ನಡ ರಾಜ್ಯೋತ್ಸವ ಆಚರಿಸುತ್ತಾ ಬಂದಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರುಟಿ. ನರಸೀಪುರ ತಾ. ಯಾಚೇನಹಳ್ಳಿಯ ನನ್ನವ್ವ ಸಾಂಸ್ಕೃತಿಕ ಕಲಾತಂಡವು ದರಾ ಅಂಗವಾಗಿ ರಾಜ್ಯಮಟ್ಟದ ದಸರಾ ಕವಿಗೋಷ್ಠಿ ಹಾಗೂ ದಸರಾ ಪ್ರಶಸ್ತಿ - 2025 ಪ್ರದಾನ ಕಾರ್ಯಕ್ರಮ ಆಯೋಜಿಸಿತ್ತು.ದಸರಾ ಅಂಗವಾಗಿ ಆಯುಧಪೂಜೆಯ ದಿನ ಆಯೋಜಿಸಿದ್ದ ಈ ಕಾರ್ಯಕ್ರಮವನ್ನು ಸುಗಮ ಸಂಗೀತ ಪರಿಷತ್‌ ಜಿಲ್ಲಾಧ್ಯಕ್ಷ ನಾಗರಾಜ್‌ ವಿ. ಭೈರಿ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು, ವಿಶ್ವದಾದ್ಯಂತ ಮೈಸೂರು ದಸರಾ ಎಂದರೆ ಜನಮನ್ನಣೆ ಪಡೆದಿರುವ ಒಂದು ಸಾಂಸ್ಕೃತಿಕ ಮಹೋತ್ಸವ. ಈ ಸಂದರ್ಭದಲ್ಲಿ ನನ್ನವ ಸಂಸ್ಥೆಯವರು ಪ್ರತಿ ತಿಂಗಳ ಒಂದರಂದು ಕನ್ನಡ ರಾಜ್ಯೋತ್ಸವ ಆಚರಿಸುತ್ತಾ ಬಂದಿದ್ದಾರೆ. ದಸರಾ ಸಂಭ್ರಮದಲ್ಲಿ ಕನ್ನಡ ರಾಜ್ಯೋತ್ಸವದ ಮೂಲಕ ಕನ್ನಡದ ಕಂಪನ್ನು ಬೆಳಗುತ್ತಿರುವ ನನ್ನವ ತಂಡಕ್ಕೆ ಒಳ್ಳೆಯದಾಗಲಿ ಎಂದು ಆಶಿಸಿದರು.ಜೊತೆಗೆ ಈ ಬಾರಿ ವಿವಿಧ ಕ್ಷೇತ್ರಗಳಲ್ಲಿ ಅತ್ಯುನ್ನತ ಎಲೆಮರೆ ಕಾಯಿಯಂತೆ ಸಾಧನೆ ಮಾಡಿರುವ ಐವರಿಗೆ ದಸರಾ ಪ್ರಶಸ್ತಿ ನೀಡಿ ಗೌರವಿಸಿದ್ದು ಬಹಳ ಒಳ್ಳೆಯ ಕೆಲಸ. ಸಾಧಕರನ್ನು ಸರ್ಕಾರವೇ ಗೌರವಿಸಲು ಗುರುತಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಇಂಥವರನ್ನು ಗುರುತಿಸಿ ಗೌರವಿಸುತ್ತಿರುವುದು ಸಂಘ- ಸಂಸ್ಥೆಗಳ ಅತಿ ದೊಡ್ಡ ಜವಾಬ್ದಾರಿಯೇ ಅದು ಸರಿ ಎಂದರು.ಪ್ರಶಸ್ತಿ ಪ್ರದಾನ ಮಾಡಿದ ವಕೀಲರ ಸಂಘದ ಮಾಜಿ ಕಾರ್ಯದರ್ಶಿ ಎಸ್‌. ಉಮೇಶ್‌ ಮಾತನಾಡಿ, ನನ್ನವ್ವ ಸಂಸ್ಥೆಯು ಸಂಸ್ಕೃತಿ, ಕಲೆ ಸಾಹಿತ್ಯದ ಬಗ್ಗೆ ಹೆಚ್ಚು ಕಾರ್ಯಕ್ರಮ ಮಾಡುತ್ತಿರುವುದು ಬಹಳ ವಿಶೇಷ ಎಂದರು.2025ರ ದಸರಾ ಪ್ರಶಸ್ತಿಯನ್ನು ಮಂಡ್ಯ ಆರಕ್ಷಕ ಇಲಾಖೆಯ ಎಂ. ಲೋಕೇಶ್, ಮೈಸೂರು ಕಾರಾಗೃಹದ ಮುಖ್ಯ ನಿರೀಕ್ಷಕಿ ಉಮಾ, ಸಿನಿಮಾ ರಂಗಭೂಮಿ ಹಲವು ಕ್ಷೇತ್ರಗಳಲ್ಲಿ ಸಾಂಸ್ಕೃತಿಕ ಚಾಪು ಮೂಡಿಸುತ್ತಿರುವ ಆಲದಹಳ್ಳಿ ಮಂಜುಳಾ, ಕಿರುತೆರೆ ನಿರೂಪಕಿ ಸೌಮ್ಯ ಶ್ರೀರಾಮ್, 2000ಕ್ಕೂ ಹೆಚ್ಚು ಕವಿತೆಗಳನ್ನ ರಚಿಸಿರುವ ಲಕ್ಷ್ಮಿ ಕಲ್ಬುರ್ಗಿ ಅವರಿಗೆ ಪ್ರದಾನ ಮಾಡಲಾಯಿತು.ವಿವಿಧ ಜಿಲ್ಲೆ ಮತ್ತು ತಾಲೂಕುಗಳಿಂದ ಆಗಮಿಸಿದ್ದ ಕವಿಗಳಿಂದ ದಸರಾ ಕವಿಗೋಷ್ಠಿ ಯಶಸ್ವಿಯಾಗಿ ನಡೆಯಿತು.ನ. ಗಂಗಾಧರಪ್ಪ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಕವಯತ್ರಿ ಪ್ರಭಾಶಾಸ್ತ್ರಿ ಜೋಸ್ಲಾ, ಯಾಚೇನಹಳ್ಳಿ ನನ್ನವ್ವ ಮಹದೇವ, ಮುದ್ದಳ್ಳಿ ಪುಟ್ಟಸ್ವಾಮಿ, ಸಿಂಚನ ಚಿಕ್ಕೋಳಲೆ, ಎಂ.ಡಿ. ರಾಜೇಂದ್ರ ಪ್ರಸಾದ್, ಮಂಜುಳಾ ಇದ್ದರು.