ತರೀಕೆರೆಯಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಚ ಮಹಾತ್ಮಾ ಗಾಂಧೀಜಿ, ಸುಭಾಷ್ ಚಂದ್ರ ಬೋಸ್ ಇಂತಹ ಮಹನೀಯರನ್ನು, ಹುತಾತ್ಮರನ್ನು ಸ್ಮರಿಸಿಕೊಳ್ಳಬೇಕು ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದರು.

ಶನಿವಾರ ತಾಲೂಕು ಅಡಳಿತ, ತಾಪಂ, ಪುರಸಭೆ ಸಂಯಕ್ತಾಶ್ರಯದಲ್ಲಿ ಪಟ್ಟಣ ಬಯಲು ರಂಗ ಮಂದಿರದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಸಂವಿಧಾನ ನಮಗೆ ಅನೇಕ ಹಕ್ಕು ಮತ್ತು ಕರ್ತವ್ಯ ನೀಡಿದೆ. ಎಲ್ಲಿ ಮಹಿಳೆಯರಿಗೆ ಗೌರವ ದೊರಕುತ್ತದೋ ಅಲ್ಲಿ ದೇವರು ನೆಲೆಸುತ್ತಾನೆ ಎಂಬ ಮಾತಿದೆ. ಪರಿಸರ ಸಂರಕ್ಷಣೆ ನಮ್ಮ ಕರ್ತವ್ಯ, ಸ್ವಚ್ಛತೆ ಎಲ್ಲರೂ ಕಾಪಾಡಬೇಕು. ಸಾರ್ವಜನಿಕರು ಕೈಜೋಡಿಸಿದರೆ ಊರು ಸ್ವಚ್ಛವಾಗಿರುತ್ತದೆ. ಸರ್ಕಾರದ ಆಸ್ತಿ ನಮ್ಮ ಆಸ್ತಿಯಂತೆ ರಕ್ಷಿಸಿ ಎಂದು ಹೇಳಿದರು.

ಕ್ಷೇತ್ರದಲ್ಲಿ 120 ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಕೆರೆಗಳಿಗೆ ನೀರು ತುಂಬಿದರೆ ಅಂತರ್ಜಲ ವೃದ್ಧಿಸಿ ಮುಂದೆ ಬರಗಾಲ ಇರುವುದಿಲ್ಲ. ಯುವಕರು ದುಶ್ಚಟಗಳಿಂದ ದೂರ ಇರಬೇಕು. ಯುವಕರು ದೊಡ್ಡ ಕನಸು ಕಾಣಬೇಕು, ಐ.ಎ.ಎಸ್. ಇತ್ಯಾದಿ ಉನ್ನತ ವಿದ್ಯಾಭ್ಯಾಸ ಮಾಡಬೇಕು, ವಿದ್ಯೆಗೆ ಹೆಚ್ಚು ಒತ್ತು ನೀಡಿ ಎಂದು ಕರೆನೀಡಿದರು.


ಪಟ್ಟಣದಲ್ಲಿ ರಸ್ತೆ ಅಭಿವೃದ್ಧಿದಿ ಪಡಿಸಲಾಗಿದೆ, ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣ ನಿರ್ಮಾಣವಾಗುತ್ತಿದೆ. ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೋ ಆಗುತ್ತದೆ, ಬಯಲು ರಂಗ ಮಂದಿರ ಅಭಿವೃದ್ಧಿ ಪಡಿಸಲಾಗುವುದು, ಕ್ಷೇತ್ರದಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಮಾದರಿ ಕ್ಷೇತ್ರವಾಗಿಸುವ ಸಂಕಲ್ಪ ಮಾಡೋಣ ಎಂದರು.

ಉಪವಿಭಾಗಾಧಿಕಾರಿ ಎನ್.ವಿ.ನಟೇಶ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ ರಾಷ್ಟ್ರಧ್ವಜ ಹೆಮ್ಮೆಯಿಂದ ಹಾರಿಸುವ ದಿನ ಇಂದು. ಅಸಂಖ್ಯಾತ ಹೋರಾಟಗಾರ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯದೊರೆತಿದೆ. ಭೀಕರ ಬರಗಾಲ ಇದೆ, ನೀರಿನ ಪ್ರಮಾಣ ಕಡಿಮೆ ಇದೆ. ಸ್ವಚ್ಛತೆ ಪ್ರತಿ ನಾಗರೀಕರ ಕರ್ತವ್ಯ. ಯುವಜನತೆ ದೇಶದ ಭವಿಷ್ಯ, ಸರ್ಕಾರದ ಯೋಜನೆ ಗಳು ಸಮಾಜದ ಕಟ್ಟಕಡೆ ವ್ಯಕ್ತಿಗೂ ತಲುಪಬೇಕು. ಸಮೃದ್ಧ ರಾಷ್ಟ್ರವನ್ನಾಗಿ ಕಟ್ಟೋಣ ಎಂದು ಹೇಳಿದರು.

ಪುರಸಭೆ ಉಪಾಧ್ಯಕ್ಷೆ ಶಮೀಮ್ ಬಾನು, ತಾಲೂಕು ಗ್ಟಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷೆ ಹೇಮಲತಾ ರೇವಣ್ಣ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿ.ಆರ್.ಅನಂತಪ್ಪ, ತಹಸೀಲ್ದಾರ್ ರಶ್ಮಿ ಎಚ್.ಜೆ. ತರೀಕೆರೆ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಪರಶುರಾಮಪ್ಪ, ತಾ.ಪಂ.ಇ.ಒ.ಡಾ.ದೇವೇಂದ್ರಪ್ಪ, ಪುರಸಭೆ ಮುಖ್ಯಾಧಿಕಾರಿ ತಾಹೇರಾ ತಸ್ಮೀಮ್, ಬಿ.ಇ,.ಒ.ಪರಶುರಾಮಪ್ಪ ಹೆಚ್.ಎ.ಮತ್ತಿತರರು ಭಾಗವಹಿಸಿದ್ದರು.

ತರೀಕೆರೆ ಟೌನ್ ಕ್ಲಬ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಂದ ಸಾಧಕರಿಗೆ ಸನ್ಮಾನ ಮತ್ತು ಬಹುಮಾನ ವಿತರಣೆ ನೆರವೇರಿಸಲಾಯಿತು.15ಕೆಟಆರ್.ಕೆ.1ೊಃ ತರೀಕೆರೆಯ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಶಾಸಕ ಜಿ.ಎಚ್.ಶ್ರೀನಿವಾಸ್, ಉಪ ವಿಭಾಗಾಧಿಕಾರಿ ಎನ್.ವಿ.ನಟೇಶ್, ತಹಸೀಲ್ದಾರ್ ರಶ್ಮಿ ಎಚ್.ಜೆ.ಮತ್ತಿತರರು ಭಾಗವಹಿಸಿದ್ದರು.