ರಾಮನ ಬಗ್ಗೆ ಶ್ರದ್ಧೆ ಇಲ್ಲದವರು ರಜೆ ಕೊಟ್ಟಿಲ್ಲ: ಪ್ರತಾಪ್‌ ಸಿಂಹ ಟಾಂಗ್‌

| Published : Jan 22 2024, 02:16 AM IST

ರಾಮನ ಬಗ್ಗೆ ಶ್ರದ್ಧೆ ಇಲ್ಲದವರು ರಜೆ ಕೊಟ್ಟಿಲ್ಲ: ಪ್ರತಾಪ್‌ ಸಿಂಹ ಟಾಂಗ್‌
Share this Article
  • FB
  • TW
  • Linkdin
  • Email

ಸಾರಾಂಶ

ಇಡೀ ದೇಶದಲ್ಲಿ ಒಳ್ಳೆಯ ವಾತಾವರಣ ನಿರ್ಮಾಣವಾಗಿದೆ. ಜನತೆ ಭಕ್ತಿಭಾವದಿಂದ ಆ ಕ್ಷಣವನ್ನು ಎದುರು ನೋಡುತ್ತಿದ್ದಾರೆ. ಕರ್ನಾಟಕ ಸರ್ಕಾರ ಜನರ ಭಾವನೆಗಳಿಗೆ ಸ್ಪಂದಿಸುತ್ತಿಲ್ಲ. ಇವರಿಗೆ ರಾಮಭಕ್ತಿಗಿಂತ ಓಟಿನ ರಾಜಕಾರಣ ಮುಖ್ಯ ಆಗಿದೆ ಎಂದು ಪ್ರತಾಪ್‌ಸಿಂಹ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಸೋಮವಾರ ರಾಮಭಕ್ತರ ಸರ್ಕಾರ ಎಲ್ಲಾ ಕಡೆ ರಜೆ ನೀಡಿದೆ. ಹೆಸರಿನಲ್ಲಿ ರಾಮ ಇಟ್ಟುಕೊಂಡು ರಾಮನ ಬಗ್ಗೆ ಶ್ರದ್ದೆ ಇಲ್ಲದವರು ರಜೆ ಕೊಟ್ಟಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಹೆಸರು ಹೇಳದೆ ಸಂಸದ ಪ್ರತಾಪ್ ಸಿಂಹ ಟಾಂಗ್ ನೀಡಿದ್ದಾರೆ.ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ದೇಶದಲ್ಲಿ ಒಳ್ಳೆಯ ವಾತಾವರಣ ನಿರ್ಮಾಣವಾಗಿದೆ. ಜನತೆ ಭಕ್ತಿಭಾವದಿಂದ ಆ ಕ್ಷಣವನ್ನು ಎದುರು ನೋಡುತ್ತಿದ್ದಾರೆ. ಕರ್ನಾಟಕ ಸರ್ಕಾರ ಜನರ ಭಾವನೆಗಳಿಗೆ ಸ್ಪಂದಿಸುತ್ತಿಲ್ಲ. ಇವರಿಗೆ ರಾಮಭಕ್ತಿಗಿಂತ ಓಟಿನ ರಾಜಕಾರಣ ಮುಖ್ಯ ಆಗಿದೆ ಎಂದು ಆರೋಪಿಸಿದರು. ಸಿದ್ದರಾಮಯ್ಯ ಅವರು ರಾಮಭಕ್ತ ಅಲ್ಲ ರಹೀಂ ಭಕ್ತ. ಆದರೆ ನನ್ನ ಹೆಸರಿನಲ್ಲೂ ರಾಮ ಇದ್ದಾನೆ ಅಂತ ಹೇಳುತ್ತಾರೆ.ರಾಮನ ಭಕ್ತರಿರುವ ರಾಜ್ಯಗಳಲ್ಲಿ ಮತ್ತು ಕೇಂದ್ರ ಸರ್ಕಾರಗಳು ರಜೆ ಘೋಷಣೆ ಮಾಡಿದೆ. ಆದರೆ ರಾಜ್ಯದಲ್ಲಿ ರಜೆ ಘೋಷಣೆ ಮಾಡಿಲ್ಲ. ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಅಸಂಖ್ಯಾತ ಸಾಧು ಸಂತರ ಸಮ್ಮುಖದಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಿದ್ದಾರೆ. ಕನ್ನಡ ನಾಡಿನ ಜನತೆ ನಾಳೆ ನಿಮ್ಮ ಮನೆಗಳಲ್ಲಿ ಐದು ದೀಪ ಹಚ್ಚಿಅವುಗಳನ್ನು ಉತ್ತರ ದಿಕ್ಕಿನತ್ತ ಇಟ್ಟು ಹಚ್ಚಿ ಪೂಜೆ ಸಲ್ಲಿಸಿ, ಮನೆಯಲ್ಲಿ ರಾಮನ ಜಪ ಮಾಡಿ ಎಂದು ಅವರು ವಿನಂತಿಸಿದರು.400 ವರ್ಷಗಳ ಸತತ ಹೋರಾಟ ಹಾಗೂ ಪ್ರಾಣ ತ್ಯಾಗದ ಮೂಲಕ ಮಂದಿರ ನಿರ್ಮಾಣ ಆಗಿದೆ.

ಇದು ನಮ್ಮ ಹೆಮ್ಮೆಯ ವಿಚಾರ ಎಂದರು.