ಕಲೆಗಳಲ್ಲಿ ಆಸಕ್ತಿ ಇಲ್ಲದವರು ಪಶುಗಳಿಗೆ ಸಮಾನ: ಕೃಷ್ಣಾಪುರ ಶ್ರೀ

| Published : Dec 05 2023, 01:30 AM IST

ಕಲೆಗಳಲ್ಲಿ ಆಸಕ್ತಿ ಇಲ್ಲದವರು ಪಶುಗಳಿಗೆ ಸಮಾನ: ಕೃಷ್ಣಾಪುರ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ, ಕುಂಜಿಬೆಟ್ಟಿನ ಕಾವ್ಯಶ್ರೀ ಸಂಗೀತ ಕಲಾ ಕೇಂದ್ರ, ಕುಂಜಿಬೆಟ್ಟು,ಉಡುಪಿ ಮತ್ತು ರಾಜರಾಜೇಶ್ವರ ಭಜನಾ ಮಂಡಳಿಗಳು ಸಮರ್ಪಿಸಿದ ‘ಪ್ರತಿಭಾ ನಾದೋನ್ಮಾದ’ ಎಂಬ ಇಡೀ ದಿನ ನಡೆದ ಕಾರ್ಯಕ್ರಮದ ಸಮಾರೋಪ

ಕನ್ನಡಪ್ರಭ ವಾರ್ತೆ ಉಡುಪಿ

ಸಂಸ್ಕಾರವಿಲ್ಲದ ಅಥವಾ ಸಂಗೀತ ಮುಂತಾದ ಕಲೆಗಳಲ್ಲಿ ಆಸಕ್ತಿ ಇಲ್ಲದವರು ಪಶುಗಳಿಗೆ ಸಮಾನ ಎಂದು ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.

ಅವರು ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ, ಪರ್ಯಾಯ ಶ್ರೀಕೃಷ್ಣಾಪುರ ಮಠದ ಆಶ್ರಯದಲ್ಲಿ, ಕುಂಜಿಬೆಟ್ಟಿನ ಕಾವ್ಯಶ್ರೀ ಸಂಗೀತ ಕಲಾ ಕೇಂದ್ರ, ಕುಂಜಿಬೆಟ್ಟು,ಉಡುಪಿ ಮತ್ತು ರಾಜರಾಜೇಶ್ವರ ಭಜನಾ ಮಂಡಳಿಗಳು ಸಮರ್ಪಿಸಿದ ‘ಪ್ರತಿಭಾ ನಾದೋನ್ಮಾದ’ ಎಂಬ ಇಡೀ ದಿನ ನಡೆದ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಸಂದೇಶ ನೀಡಿದರು.

ಕಾವ್ಯಶ್ರೀ ಕಲಾಕೇಂದ್ರವು ಅಬಾಲವೃದ್ಧರಾದಿಯಾಗಿ ಎಲ್ಲರಿಗೂ ಸಂಗೀತ ಮತ್ತು ದೇವರ ಭಜನೆಯಲ್ಲಿ ಆಸಕ್ತಿ ಬರುವಂತೆ ಕಲಿಸುತ್ತಿರುವುದು ದೇವರಿಗೆ ಸಂತೋಷವನ್ನುಂಟು ಮಾಡುತ್ತದೆ ಎಂದು ಶ್ರೀಗಳು ಶ್ಲಾಘಿಸಿದರು.

ಈ ಸಂದರ್ಭ ಸಂಗೀತ ಗುರುಗಳಾದ ವಿದುಷಿ ಮಾಧವಿ ಭಟ್ ಪೆರ್ಣಂಕಿಲ ಅವರನ್ನು ಶ್ರೀಪಾದರು ಸನ್ಮಾನಿಸಿ ಹರಸಿದರು. ಕಲಾಕೇಂದ್ರದ ಲಲಿತಾ ಶ್ರೀರಾಮ್ ಮುಂತಾದವರು ಉಪಸ್ಥಿತರಿದ್ದರು.