ಕನ್ನಡಪ್ರಭ ವಾರ್ತೆ ವಿಜಯಪುರ

ಭಾರತ ಎಲ್ಲ ದೇಶಗಳ ಜೊತೆಗೆ ಉತ್ತಮ ಸಂಬಂಧ ಹೊಂದಿದೆ. ಅಮೆರಿಕ, ಇಸ್ರೇಲ್, ಇರಾನ್ ಜೊತೆಯಲ್ಲೂ ಒಳ್ಳೆಯ ಸಂಬಂಧ ಹೊಂದಿದ್ದು, ಈ ಯುದ್ದದಲ್ಲಿ ನಮ್ಮದೇನು ಪಾತ್ರವಿಲ್ಲ. ನಾವು ಭಾರತೀಯರು ಶಾಂತಿ ಬಯಸುತ್ತೇವೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ಖಮೇನಿ ಸಾವಿಗೆ ರಾಜ್ಯದಲ್ಲಿ ಶೋಕಾಚರಣೆ, ಪ್ರತಿಭಟನೆ ವಿಚಾರವಾಗಿ ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪ್ರತಿಭಟನೆ ಮಾಡುವವರು ದೇಶದ್ರೋಹಿಗಳು‌, ನಾಲಾಯಕರು. ಅಲ್ಲಿನ ಘಟನೆಗೂ ಇಲ್ಲಿಗೂ ಏನು ಸಂಬಂಧ?. ಭಾರತದಲ್ಲಿ ಆರಾಮಾಗಿದ್ದಾರೆ‌. ಆರಾಮಾಗಿರಿ. ಅಲ್ಲಿ ಸತ್ತಿದ್ದಕ್ಕೆ ಇಲ್ಲಿ ಹೋರಾಟ ಮಾಡುತ್ತಿರಿ ಏಕೆ? ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿಯಾದಾಗ ಏಕೆ ಹೋರಾಟ ಮಾಡಲಿಲ್ಲ?. ಪಹಲ್ಗಾಮ್‌ನಲ್ಲಿ ಹಿಂದೂಗಳ ಕೊಲೆಯಾದಾಗ ನಿಮಗೆ ಕಣ್ಣೀರು ಬರೋದಿಲ್ಲ. ನಿಮಗೆ ಈ ದೇಶಕ್ಕೆ ನಿಷ್ಠೆ ಇಲ್ಲ. ಈ ದೇಶದ ಅನ್ನ ತಿಂದು, ಈ ದೇಶದ ನೀರು ಕುಡಿದು ಯಾವುದೋ ದೇಶದಲ್ಲಿ ಸತ್ತರೆ ಇಲ್ಲಿ ಏಕೆ ಪ್ರತಿಭಟನೆ ಎಂದು ಪ್ರಶ್ನಿಸಿದರು.ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ರಿಜಿಸ್ಟ್ರೇಷನ್ ಆಗಿದೆಯಾ ಎಂದು ಪ್ರಿಯಾಂಕ ಖರ್ಗೆ ಕೇಳ್ತಾರೆ. ಈಗ ಇವರು ಅಳುವುದಕ್ಕೆ ಹಾಗೂ ಆ ದೇಶನ ನಾಯಕ ಚೇಲಾಗಳಾಗಲು ಯಾವುದಕ್ಕಾದರೂ ರಿಜಿಸ್ಟ್ರೇಷನ್ ಮಾಡಿದ್ದಾರಾ?. ಇದರ ಬಗ್ಗೆ ಸಿದ್ದರಾಮಯ್ಯ, ಪ್ರಿಯಾಂಕ ಖರ್ಗೆ ಉತ್ತರ ಕೊಡಬೇಕು. ಭಾರತದಲ್ಲಿ ಪ್ರತಿಭಟನೆ ಮಾಡಿ ಅಶಾಂತಿ ಮೂಡಿಸಬಾರದು. ಒಂದು ವೇಳೆ ಮಾಡಿದರೇ ಅವರ ಮೇಲೆ ಗುಂಡಿನದಾಳಿ ಮಾಡಿ ಮುಗಿಸಬೇಕು. ಇವರು ದೇಶದ್ರೋಹಿಗಳು ಹೊರತು ದೇಶಪ್ರೇಮಿಗಳಲ್ಲ. ಭಾರತಕ್ಕೆ ಅನ್ಯಾಯವಾದಾಗ, ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡಿದಾಗ ಖಂಡಿಸೋದಿಲ್ಲ. ಭಾರತ ಪಾಕಿಸ್ತಾನದ ವಿರುದ್ಧ ಗೆದ್ದಾಗ ಇವರು ಸಂಭ್ರಮಿಸೋದಿಲ್ಲ. ಆದರೆ, ಈಗ ಬಹಳ ದುಃಖವಾಗಿದೆ, ಕಣ್ಣೀರು ಹಾಕ್ತಿದ್ದಾರೆ. ಆದಷ್ಟು ಕಣ್ಣೀರು ಹಾಕುತ್ತ, ಆತ್ಮಹತ್ಯೆ ಮಾಡಿಕೊಳ್ಳುತ್ತ ಹೋಗಲಿ, ಅವರೂ ಸಹ ಸ್ವರ್ಗಕ್ಕೆ ಸೇರಬಹುದು ಎಂದು ಕಿಡಿಕಾರಿದರು.ಈ ದೇಶದಲ್ಲಿರುವವರು ಜೈ ಭಾರತ ಎನ್ನಬೇಕು. ಕನ್ನಡಿಗರು ಇಡಿ ಜಗತ್ತಿನ ತುಂಬ ಇದ್ದಾರೆ. ಇವತ್ತು ಅಕಸ್ಮಾತಾಗಿ ಅವರು ಸಿಲುಕಿಕೊಂಡಿದ್ದಾರೆ. ಎಷ್ಟೋ ಜನ ಪ್ರವಾಸಕ್ಕೆ ಹೋದವರೂ, ಜೀವನ ನಡೆಸಲು ಹೋದವರು ಸಿಲುಕಿದ್ದಾರೆ. ಈಗಾಗಲೇ ಭಾರತ ಸರ್ಕಾರ ಎಲ್ಲೆಡೆ ಅಲರ್ಟ್ ಮಾಡಿದೆ. ನಮ್ಮದು ಹಾಗೂ ಯುಐಎ, ದುಬೈ, ಸೌದಿ ಅರೇಬಿಯಾ ಜೊತೆಗೆ ಒಳ್ಳೆಯ ಸಂಬಂಧವಿದೆ. ನಮ್ಮ ಪ್ರಧಾನ ಮಂತ್ರಿಗಳ ಮೇಲೆ ಎಲ್ಲರಿಗೂ ಸಾಕಷ್ಟು ಅಭಿಮಾನವಿದೆ. ಭಾರತೀಯರಿಗೆ ಇಡಿ ಜಗತ್ತಿನಲ್ಲಿ ಎಂದೂ ಏನೂ ಆಗುವುದಿಲ್ಲ. ಯುಕ್ರೇನ್‌ನಲ್ಲಿ ಯುದ್ಧವಾದಾಗ ಪಾಕಿಸ್ತಾನದವರು ಸಹ ಭಾರತದ ಧ್ವಜ ಇಟ್ಟುಕೊಂಡು ಓಡಿ ಬಂದರು. ಅಂದರೆ ಭಾರತ ಜಗತ್ತಿನಲ್ಲೇ ಎಲ್ಲರದಲ್ಲೂ ಪ್ರೀತಿಯನ್ನು ನರೇಂದ್ರ ಮೋದಿಯವರು ಬಯಸಿದ್ದಾರೆ. ಈಗಲಾದರೂ ಈ ದೇಶದಲ್ಲಿದ್ದು, ಈ ದೇಶದ ಅನ್ನ ತಿನ್ನುವವರು ಜೈ ಭಾರತ ಎನ್ನಬೇಕು. ಪಾಕಿಸ್ತಾನ ಜಿಂದಾಬಾದ್ ಎನ್ನುವವರಿಗೆ ಹೊಡೆಯಬೇಕು, ಇಷ್ಟೆ ನನ್ನ ಅನಿಸಿಕೆ ಎಂದು ಕಿಡಿಕಾರಿದರು.