ಮೌಢ್ಯದ ಜಾಡು ಬಿಡಿಸಿದ ಕಲ್ಯಾಣದ ಶರಣರು- ಶಶಿಧರ ಶಾಸ್ತ್ರಿ

| Published : Apr 22 2025, 01:46 AM IST

ಮೌಢ್ಯದ ಜಾಡು ಬಿಡಿಸಿದ ಕಲ್ಯಾಣದ ಶರಣರು- ಶಶಿಧರ ಶಾಸ್ತ್ರಿ
Share this Article
  • FB
  • TW
  • Linkdin
  • Email

ಸಾರಾಂಶ

12ನೇ ಶತಮಾನದಲ್ಲಿ ಬಸವಣ್ಣನವರು ಕಲ್ಯಾಣದಲ್ಲಿ ಭಕ್ತರಿಗೆ ಪ್ರಸಾದ, ಸಂಸ್ಕಾರ, ಅರಿವು ನೀಡಿ ಸಮಾಜದಲ್ಲಿ ಭಕ್ತರನ್ನು ಉದ್ಧಾರ ಮಾಡಿದರೆಂದು ಶ್ರೀ ಪುಟ್ಟರಾಜ ಗವಾಯಿಗಳ ಶಿಷ್ಯರಾದ ಶಶಿಧರ ಶಾಸ್ತ್ರಿ ಹಿರೇಮಠ ಹೇಳಿದರು.

ನರಗುಂದ: 12ನೇ ಶತಮಾನದಲ್ಲಿ ಬಸವಣ್ಣನವರು ಕಲ್ಯಾಣದಲ್ಲಿ ಭಕ್ತರಿಗೆ ಪ್ರಸಾದ, ಸಂಸ್ಕಾರ, ಅರಿವು ನೀಡಿ ಸಮಾಜದಲ್ಲಿ ಭಕ್ತರನ್ನು ಉದ್ಧಾರ ಮಾಡಿದರೆಂದು ಶ್ರೀ ಪುಟ್ಟರಾಜ ಗವಾಯಿಗಳ ಶಿಷ್ಯರಾದ ಶಶಿಧರ ಶಾಸ್ತ್ರಿ ಹಿರೇಮಠ ಹೇಳಿದರು. ಅವರು ತಾಲೂಕಿನ ಶಿರೋಳ ಗ್ರಾಮದ ತೋಂಟದಾರ್ಯ ಶಾಖಾಮಠದ ಗದ್ದುಗೆ ಮತ್ತು ಶಿಲಾ ಮಂಟಪ ಲೋಕಾರ್ಪಣೆ ನಿಮಿತ್ತ ನಡೆದ 18ನೇ ದಿನದ ಬಸವ ಪುರಾಣ ಕಾರ್ಯಕ್ರಮದಲ್ಲಿ ಮಾತನಾಡಿ, ಕಾರುಣ್ಯ ಭೂಮಿ ಕಲ್ಯಾಣದಲ್ಲಿ ಅನ್ನ, ಅರಿವು, ಸಂಸ್ಕಾರ ನೀಡಿ ಶರಣರನ್ನು ನೆನೆಯುವ ಸ್ವಾರ್ಥ ರಹಿತ ನಿಸ್ವಾರ್ಥ ಸಹಿತ ಸೇವಾ ಮನೋಭಾವದ ಕಲ್ಯಾಣದ ಶರಣರು. ಪರಿಸರದಲ್ಲಿಯ ಪ್ರಾಣಿ ಪಕ್ಷಿ ಸಂಕುಲಗಳಲ್ಲಿರುವ ನಿಸ್ವಾರ್ಥ ಸೇವೆಯನ್ನು ಮನುಷ್ಯರಿಗೆ ವೈಚಾರಿಕತೆಯಿಂದ ತಿಳಿಸಿದ್ದಾರೆ. ಅಣ್ಣ ಬಸವಣ್ಣನವರೊಂದಿಗೆ ಕೂಡಿದ ಶರಣರಲ್ಲಿ ಆಂಧ್ರದ ಮೂಲದಿಂದ ಆಗಮಿಸಿದ ವೃತ್ತಿಯಲ್ಲಿ ಅಕ್ಕಸಾಲಿಗರಾದ ಬೊಮ್ಮಯ್ಯನವರು ಕಿನ್ನರಿ ನುಡಿಸುವ ಕಾಯಕ ಮೆಚ್ಚುವಂಥದ್ದು ಎಂದರು. ಇದೇ ಸಂದರ್ಭದಲ್ಲಿ ಗ್ರಾಮದ ಸದ್ಭಕ್ತರು ಪ್ರವಚನಕಾರ ಶಶಿಧರ ಶಾಸ್ತ್ರಿ ಅವರನ್ನು ಹಾಗೂ ದಾಸೋಹ ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶಾಂತಲಿಂಗ ಶ್ರೀಗಳು, ಲೋಕಪ್ಪ ಕರ್ಕಿಕಟ್ಟಿ, ನಾಗನಗೌಡ ತಿಮ್ಮನಗೌಡ್ರ, ಪ್ರಕಾಶಗೌಡ ತಿರಕನಗೌಡ್ರ, ಗುರುಬಸಪ್ಪ ಶೆಲ್ಲಿಕೇರಿ, ಪ್ರಭಾಕರ ಉಳ್ಳಾಗಡ್ಡಿ, ವೀರಯ್ಯ ದೊಡ್ಡಮನಿ, ದ್ಯಾಮಣ್ಣ ಕಾಡಪ್ಪನವರ, ಲಾಲಸಾಬ ಅರಗಂಜಿ, ಹನುಮಂತ ಕಾಡಪ್ಪನವರು, ಪ್ರಾಚಾಯ೯ ಬಿ.ಆರ್. ಸಾಲಿಮಠ ಇದ್ದರು.