ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ಡಿಸಿ ಜಿಲ್ಲಾ ಪ್ರವೇಶಕ್ಕೆ ನರ್ಬಂಧ ಹೇರಿದ್ದಾರೆ. ಇದನ್ನು ಖಂಡಿಸುತ್ತೇನೆ. ಕಲ್ಲೆಸೆದವರಿಗೆ ಗಡಿಪಾರು ಮಾಡೋದಿಲ್ಲ, ದೇಶವನ್ನು ಒಗ್ಗೂಡಿಸುವವರಿಗೆ ಗಡಿಪಾರು ಮಾಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರು.

ಬಾಗಲಕೋಟೆ ರೈಲು ನಿಲ್ದಾಣಕ್ಕೆ ಭಾನುವಾರ ಬೆಳಗ್ಗೆ ಬಂದ ಅವರಿಗೆ ಪೊಲೀಸರು ಅವರಿಗೆ ನಿರ್ಬಂಧದ ಮಾಹಿತಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಇದು ನಾಚಿಗೇಡಿನ ಸಂಗತಿ, ಸ್ವಾತಂತ್ರ್ಯ ಹರಣ ಮಾಡಲಾಗುತ್ತಿದೆ. ನಾನು ತಪ್ಪು ಮಾತನಾಡಿದರೆ ಕೇಸ್ ಹಾಕಲಿ, ಮಾತನಾಡೋಕೆ ಅವಕಾಶ ಕೊಡಲ್ಲ ಅಂದರೆ ಕಾಂಗ್ರೆಸ್ ನವರು ಸಂವಿಧಾನ ವಿರೋಧಿ. ಡಾ.ಅಂಬೇಡ್ಕರ್ ಮಾತನಾಡುವ ಸ್ವಾತಂತ್ರ್ಯ ಕೊಟ್ಟಿದ್ದಾರೆ. ಕಲ್ಲೆಸೆಯುವ ತಂತ್ರ ತಡೆಯುವ ಪ್ರಯತ್ನ ಮಾಡುತ್ತಿಲ್ಲ, ಪಾಕಿಸ್ತಾನ ಜಿಂದಾಬಾದ್ ಅನ್ನೋವ್ರನ್ನ ತಡೆಯುತ್ತಿಲ್ಲ, ವೋಟ್ ಬ್ಯಾಂಕ್ ನಿರ್ಮಾಣ ಮಾಡಿ, ಅಧಿಕಾರ ದಾಹದಿಂದ ಈ ದೇಶವನ್ನು ಬರ್ಬಾದ್‌ ಮಾಡುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಾಗಲಕೋಟೆಯಲ್ಲಿ ಹಿಂದೂ ಕಾರ್ಯಕರ್ತರ ಅರೆಸ್ಟ್ ಮಾಡಿದ್ದಕ್ಕೆ ಕಿಡಿಕಾರಿದ ಮುತಾಲಿಕ್, ಇದು ಕಾಂಗ್ರೆಸ್‌ ನೀತಿ, ಮುಸ್ಲಿಮರಿಗೆ ಬಂಧನ ಮಾಡಿದ್ದನ್ನು ಬ್ಯಾಲೆನ್ಸ್ ಮಾಡೋ ಸಲುವಾಗಿ ಹಿಂದೂ ಕಾರ್ಯಕರ್ತರನ್ನು ಅರೆಸ್ಟ್ ಮಾಡುತ್ತಾರೆ, ಇದು ಸರಿಯಲ್ಲ, ಹಿಂದೂಗಳನ್ನ ಯಾಕೆ ಅರೆಸ್ಟ್ ಮಾಡ್ತೀರಿ, ತಳ್ಳುವ ಗಾಡಿಗೆ ಮುಸ್ಲಿಮರೇ ಬೆಂಕಿ ಹಚ್ಚಿದ್ದಾರೆ. ಈ ಕೇಸ್ ಡೈವರ್ಟ್‌ ಮಾಡಲು ಮುಸ್ಲಿಮರೇ ಬೆಂಕಿ ಹಚ್ಚಿದ್ದಾರೆ. ತಮ್ಮದಕ್ಕೆ ತಾವೇ ಬೆಂಕಿ ಹಚ್ಚಿ ಪರಿಹಾರ ತಗೋಳ್ಳೋದು ಅವರ ಉದ್ದೇಶವಾಗಿದೆ. ಪರಿಹಾರ ಇರೋದೆ ₹5 ಸಾವಿರ ತೆಗೆದುಕೊಳ್ಳೋದು ಲಕ್ಷಗಟ್ಟಲೆ ಇದೆಲ್ಲ ಇವರ ನಾಟಕ ಎಂದು ದೂರಿದರು.

ಹಿಂದೂ ಕಾರ್ಯಕರ್ತರು ಅರೆಸ್ಟ್ ಆದರೆ ಇದು ರಿವರ್ಸ್‌ ಆಗುತ್ತೆ. ಇದರ ವಿರುದ್ಧ ಮತ್ತೆ ಹಿಂದೂ ಸಮಾಜವನ್ನ ಎಬ್ಬಿಸಿ ಹೋರಾಟ ಮಾಡಬೇಕಾಗುತ್ತೆ ಎಂದು ಮುತಾಲಿಕ್ ಎಚ್ಚರಿಸಿದರು.


ಬ್ಯಾನ್ ಮಾಡುವುದರಿಂದ ನಾಯಕರನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಇದರ ಹತ್ತು ಪಟ್ಟು ಹಿಂದು ಸಮಾಜ ಜಾಗೃತ ಆಗುತ್ತದೆ, ನಾಳೆ ಕಾರ್ಯಕ್ರಮ ಆಗುತ್ತೆ, ಆಗಿಯೇ ಆಗುತ್ತದೆ, ನಾನು ಬಂದೇ ಬರುತ್ತೇನೆ, ಏನಾಗುತ್ತದೋ ನೋಡೋಣ ಎಂದು ಸವಾಲು ಹಾಕಿದರು.

ಹೋರಾಟಗಾರರನ್ನು ಹತ್ತಿಕ್ಕುವ ಕೆಲಸ ಗುತ್ತಿದೆಯಾ ಎಂಬ ಎಂಬ ಪ್ರಶ್ನೆಗೆ ಕಾಂಗ್ರೆಸ್ ನವರಿಗೆ ಹಿಂದುಗಳು ಬೇಡವಾಗಿದ್ದಾರೆ. ಮುಸ್ಲಿಮರ ವೋಟ್ ಮಾತ್ರ ಬೇಕಾಗಿದೆ, ಮುಸ್ಲಿಮರಿಂದಲೇ ನಾವು ಗೆದ್ದಿದ್ದೀವಿ ಎಂಬ ಭ್ರಮೆ ಬಿಡಿಸಬೇಕಿದೆ. ಇಡೀ ದೇಶದಲ್ಲಿ ಕಾಂಗ್ರೆಸ್ ಧೂಳಿಪಟ ಆಗಿದೆ. ಎಲ್ಲೋ ಅಲ್ಲಿ, ಇಲ್ಲಿ ಬದುಕುತ್ತಿದ್ದಾರೆ, ಇಂತಹ ತುಷ್ಟೀಕರಣದಿಂದ ಕಸದ ಡಬ್ಬಿಗೆ ಹೋಗ್ತಿದಿರಿ, ಶಿವಾಜಿ ಮಹಾರಾಜರ ಮೆರವಣಿಗೆ ಮೇಲೆ ಕಲ್ಲು, ಚಪ್ಪಲಿ ಎಸೆಯುತ್ತಾರೆಂದರೆ ಎಷ್ಟು ಸೊಕ್ಕು ಬಂದಿದೆ. ಎಸೆದವರ ಕೈ ಕತ್ತರಿಸಬೇಕು, ದೇಶ ಉಳಿದಿದ್ದರೆ ಅದು ಶಿವಾಜಿ ಮಹಾರಾಜರಿಂದ. ಶಿವಾಜಿ ಮಹಾರಾಜರನ್ನು ಅಪಮಾನ ಮಾಡಿದರೆ ನಾವು ಸುಮ್ಮನೆ ಇರಬೇಕಾ? ಕಾಂಗ್ರೆಸ್ ನ ಕುಮ್ಮಕ್ಕಿನ ನೀತಿ ಪರಿಣಾಮದಿಂದ ಮುಸ್ಲಿಂ ಗೂಂಡಾಗಳು, ಕಿಡಿಗೇಡಿಗಳು ಎದ್ದು ಕುಣಿತಿದ್ದಾರೆ, ಅವರ ಕೇಸ್ ಗಳನ್ನು ವಾಪಸ್ ಪಡೆದು ಬಚಾವ್ ಮಾಡುತ್ತಿದೆ. ಈ ರೀತಿಯ ಪ್ರವೃತ್ತಿ ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

ಮಸೀದಿ ಒಳಗೆ ಅವರು ಸೇರಿದ್ದೇಕೆ? ಸೇರ್ತಿರೋದು ಏಕೆ? ಹಬ್ಬ ಇದ್ದರೆ ಬೇರೆ ಮಸೀದಿಗಳಿವೆ. ಅಲ್ಲಿಗೆ ಹೋಗಿ, ಮೆರವಣಿಗೆ ಗೊತ್ತಿದ್ದರೂ ಹೀಗಾಗುತ್ತೆ ಅಂದ್ರೆ, ಇದೊಂದು ಪೂರ್ವನಿಯೋಜಿತ ಸಂಚು. ಎರಡ ಕಲ್ಲೋ, ಸಣ್ಣ ಕಲ್ಲೋ ಕಲ್ಲು ಕಲ್ಲೇ, ಚಪ್ಪಲಿ ಎಸೆದಿದ್ದಾರೆ. ಪೊಲೀಸರ ಮೇಲೆ ಕಲ್ಲೆಸೆದಿದ್ದಾರೆ ಅಂದ್ರೆ ಸಮಾನ್ಯ ಜನರ ಕತೆಯೇನು? ತಕ್ಷಣ ಕ್ರಮ ಕೈಗೊಳ್ಳಬೇಕಿದ್ದಿದ್ದು ನೂರಕ್ಕೆ ನೂರು ಸತ್ಯ, ಹಿಂದು ಸಮಾಜ ಕೇವಲ ಪ್ರತಿಭಟನೆ ಮಾಡ್ತಾ ಕೂತರೆ ಆಗಲ್ಲ, ಇನ್ಮೇಲೆ ನುಗ್ಗಬೇಕು, ಯಾರ ಮೇಲೆ ಕಲ್ಲು ಎಸೆದಿದ್ದಾರೆ, ಯಾಕೆ ಎಸೆಯಬೇಕು? ಸೊಕ್ಕಾ? ಈ ದೇಶದ ಅನ್ನ ತಿಂದು ಈ ದೇಶದ ಮಹಾನ್‌ ಪುರುಷರ, ದೇವತೆಗಳ ಮೇಲೆ ಕಲ್ಲು ಎಸೆಯುತ್ತೀರಾ? ಏನಾಗಿದೆ ನಿಮಗೆ? ಗೌರವ ಕೊಡುವುದನ್ನು ಕಲಿಯಬೇಕು, ಮುಂದಿನ ದಿನಗಳಲ್ಲಿ ಹೊಕ್ಕು ಹೊಡೆಯುತ್ತೇವೆ ಎಂದು ಎಚ್ಚರಿಸಿದರು.

ಮಸೀದಿ ಇರಲಿ, ಮನೆ ಇರಲಿ, ದರ್ಗಾ ಇರಲಿ ಒಳ ಹೊಕ್ಕು ಹೊಡೆಯುತ್ತೇವೆ, ಎಂದಾದರೂ ನಿಮ್ಮ ಮೆರವಣಿಗೆ ಮೇಲೆ ಕಲ್ಲು ಎಸೆದಿದ್ದೇವಾ? ನಿಮ್ಮ ಮೆರವಣಿಗೆಗೆ ತೊಂದರೆ ಕೊಟ್ಟಿದ್ದೇವಾ?ಯಾಕೆ ಮೇಲಿಂದ ಮೇಲೆ ಕೆಣಕುತ್ತಿದ್ದೀರಿ, ಈ ಆಟ ಮುಂದೆ ನಡೆಯುವುದಿಲ್ಲ ಎಂದರು.