ಸಾರಾಂಶ
ಯಾರು ಜ್ಞಾನಕ್ಕಾಗಿ ಪರಿತಪಿಸುತ್ತಾರೆ ಅವರೇ ಜ್ಞಾನಿಗಳು ಎಂದು ಶ್ರೀಮದ್ ಜಗದ್ಗುರು ಕೂಡಲೀ ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನದ ಶ್ರೀಮದ್ ಜಗದ್ಗುರು ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮಿ ಹೇಳಿದ್ದಾರೆ.
ಶ್ರೀಮದ್ ಜಗದ್ಗುರು ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮಿಗಳು
ಕನ್ನಡಪ್ರಭ ವಾರ್ತೆ, ತರೀಕೆರೆಯಾರು ಜ್ಞಾನಕ್ಕಾಗಿ ಪರಿತಪಿಸುತ್ತಾರೆ ಅವರೇ ಜ್ಞಾನಿಗಳು ಎಂದು ಶ್ರೀಮದ್ ಜಗದ್ಗುರು ಕೂಡಲೀ ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನದ ಶ್ರೀಮದ್ ಜಗದ್ಗುರು ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮಿ ಹೇಳಿದ್ದಾರೆ.
ಬ್ರಾಹ್ಮಣ ಸೇವಾ ಸಮಿತಿಯಿಂದ ಶುಕ್ರವಾರ ಪಟ್ಟಣದ ಮಹಾಮಹಿಮ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ ದೇವಸ್ಥಾನದ ಆವರಣದಲ್ಲಿ ಧೂಳಿಪಾದಪೂಜೆ ನಂತರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಇರುವ ಜಾಗವೇ ಮಠ, ಗ್ರಂಥಗಳ ಪ್ರಕಾಶನ, ಪಂಚಾಂಗ ಪ್ರಕಾಶಿಸಬೇಕು, ವಿದ್ಯಾದಾನ, ವೇದಾಧ್ಯಯನ ಆಗಬೇಕು, ಜ್ಞಾನವೇ ಬಹಳ ಮುಖ್ಯ. ತರೀಕೆರೆಯಲ್ಲಿ ವೇದ ಸಂಸ್ಕೃತ ಪಾಠಶಾಲೆ ಪ್ರಾರಂಭವಾಗಬೇಕು, ತರೀಕೆರೆ ವಾತಾವರಣ ನೋಡಿ ತುಂಬಾ ಸಂತೋಷವಾಯಿತು. ಒಳ್ಳೆಯ ಕೆಲಸಗಳು ಆಗಬೇಕು ಎಂದು ಹೇಳಿದರು.ಇದಕ್ಕೂ ಮುನ್ನಾ ಪಟ್ಟಣದ ಗಣಪತಿ ದೇವಸ್ಥಾನದ ಬಳಿ ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು.
ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಎಚ್.ಸಿ.ಗೋಪಾಲಕೃಷ್ಣ ದಂಪತಿ ಧೂಳಿಪಾದಪೂಜೆ ನೆರವೇರಿಸಿದರು. ವೇ.ಬ್ರ.ಶ್ರೀ ಕೆ.ಟಿ.ಲಕ್ಷ್ಮೀನಾರಾಯಣ ಭಟ್ , ಸಮಿತಿ ಉಪಾಧ್ಯಕ್ಷ ರಘು ಭಾರದ್ವಾಜ್, ಕಾರ್ಯದರ್ಶಿ ಆರ್.ಎನ್.ಶ್ರೀಧರ್, ಖಜಾಂಚಿ ಡಿ.ಸಿ.ಶ್ರೀನಿವಾಸಮೂರ್ತಿ, ಹಿರಿಯ ನಿರ್ದೇಶಕ ಆರ್.ಎನ್.ಶ್ರೀನಿವಾಸ್, ಸಮಿತಿ ನಿರ್ದೇಶಕರು, ಸದಸ್ಯರು, ಶ್ರೀವತ್ಸ ಭಜನಾ ಮಂಡಳಿ ಸದಸ್ಯೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.8ಕೆಟಿಆರ್.ಕೆ.2ಃಕೂಡಲೀ ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನದ ಶ್ರೀ ಅಭಿನವ ಶಂಕರ ಭಾರತೀ ಮಹಾಸ್ವಾಮಿ ಸನ್ನಿಧಿಯಲ್ಲಿ ತರೀಕೆರೆಯಲ್ಲಿ ಬ್ರಾಹ್ಮಣ ಸೇವಾ ಸಮಿತಿಯಿಂದ ಅಧ್ಯಕ್ಷ ಎಚ್.ಸಿ.ಗೋಪಾಲಕೃಷ್ಣ ದಂಪತಿ ಧೂಳಿ ಪಾದಪೂಜೆ ನೆರವೇರಿಸಿದರು.