ಡಾ.ಪುನಿತ್‌ರಾಜ್‌ಕುಮಾರ್‌ ಅವರ 50 ನೇ ಹುಟ್ಟು ಹಬ್ಬ : 28 ಅಡಿ ಅಪ್ಪು ಪುತ್ಥಳಿ ಸ್ಥಾಪನೆಗೆ ಚಿಂತನೆ

| N/A | Published : Mar 18 2025, 12:35 AM IST / Updated: Mar 18 2025, 12:42 PM IST

ಡಾ.ಪುನಿತ್‌ರಾಜ್‌ಕುಮಾರ್‌ ಅವರ 50 ನೇ ಹುಟ್ಟು ಹಬ್ಬ : 28 ಅಡಿ ಅಪ್ಪು ಪುತ್ಥಳಿ ಸ್ಥಾಪನೆಗೆ ಚಿಂತನೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಕ್ಯಾತ್ಸಂದ್ರದ ಪುನಿತ್‌ ರಾಜ್‌ಕುಮಾರ್ ಬಡಾವಣೆಯಲ್ಲಿ ಇಲ್ಲಿನ ನಾಗರಿಕ ಹಿತರಕ್ಷಣಾ ಸಮಿತಿಯಿಂದ ಸೋಮವಾರ ನಟ ದಿ.ಡಾ.ಪುನಿತ್‌ರಾಜ್‌ಕುಮಾರ್‌ ಅವರ 50 ನೇ ಹುಟ್ಟು ಹಬ್ಬಆಚರಿಸಲಾಯಿತು.

 ತುಮಕೂರು : ನಗರದ ಕ್ಯಾತ್ಸಂದ್ರದ ಪುನಿತ್‌ ರಾಜ್‌ಕುಮಾರ್ ಬಡಾವಣೆಯಲ್ಲಿ ಇಲ್ಲಿನ ನಾಗರಿಕ ಹಿತರಕ್ಷಣಾ ಸಮಿತಿಯಿಂದ ಸೋಮವಾರ ನಟ ದಿ.ಡಾ.ಪುನಿತ್‌ರಾಜ್‌ಕುಮಾರ್‌ ಅವರ 50 ನೇ ಹುಟ್ಟು ಹಬ್ಬಆಚರಿಸಲಾಯಿತು.

ಮುಖಂಡರು ಪುನಿತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು. ವೇಳೆ ಮಾತನಾಡಿದ ನಾಗರಿಕ ಸಮಿತಿ ಅಧ್ಯಕ್ಷ ಪ್ರತಾಪ್ ಮದಕರಿ, ಪುನಿತ್‌ ರಾಜ್‌ಕುಮಾರ್‌ ಅವರು ಕೇವಲ ನಟನಾಗಿ ಮಾತ್ರವಲ್ಲದೆ ಮಾತೃ ಹೃದಯಿಯಾಗಿ ಸಮಾಜ ಸೇವೆಯಲ್ಲಿ ತೊಡಗಿಕೊಂಡು ಕನ್ನಡ ನಾಡಿನ ಹೆಮ್ಮೆಯ ಪುತ್ರರಾಗಿ ಬಾಳಿದರು. ಇವರು ಮತ್ತೊಮ್ಮೆ ನಾಡಿನಲ್ಲಿ ಹುಟ್ಟಿಬರಬೇಕು ಎಂಬುದು ಅವರ ಕೋಟ್ಯಂತರ ಅಭಿಮಾನಿಗಳ ಪ್ರಾರ್ಥನೆಯಾಗಿದೆ ಎಂದರು.

ಈ ಪುನಿತ್‌ರಾಜ್‌ಕುಮಾರ್ ಬಡಾವಣೆಯ ಎಲ್ಲಾ ರಸ್ತೆಗಳಿಗೂ ಕನ್ನಡ ಚಿತ್ರರಂಗದ ಕಲಾವಿದರ ಹೆಸರನ್ನು ನಾಮಕರಣ ಮಾಡಲಾಗಿದೆ. ಇಲ್ಲಿ ಪುನಿತ್‌ ಅವರ 28 ಅಡಿ ಎತ್ತರದ ಪುತ್ಥಳಿ ಸ್ಥಾಪನೆ ಮಾಡಲು ಯೋಜಿಸಲಾಗಿದೆ. ಬಡಾವಣೆಯ ರಸ್ತೆಗಳಿಗೆ ನಾಗರಿಕರು ಇಟ್ಟಿರುವ ಕಲಾವಿದರ ಹೆಸರುಗಳನ್ನು ನಗರಪಾಲಿಕೆ ಅನುಮೋದನೆ ಮಾಡಿ ಅಧಿಕೃತಗೊಳಿಸಬೇಕು ಎಂದು ಪ್ರತಾಪ್ ಮದಕರಿ ಮನವಿ ಮಾಡಿದರು.ಸಮಿತಿ ಕಾರ್ಯದರ್ಶಿ ಸಂಪತ್‌ಕುಮಾರ್, ಸಹ ಕಾರ್ಯದರ್ಶಿ ಮಂಜುನಾಥ್, ಗುರುರಾಜ್ ಹಾಗೂ ನಾಗರೀಕ ಮುಖಂಡರು ಭಾಗವಹಿಸಿದ್ದರು.ಇದರ ಅಂಗವಾಗಿ ಸಾರ್ವಜನಿಕರಿಗೆಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.