ಸಂತರ ಚಿಂತನೆಗಳ ಅನುಷ್ಠಾನಕ್ಕೆ ತರಬೇಕು: ಶಾಸಕ ರಮೇಶ

| Published : Jan 17 2024, 01:48 AM IST

ಸಾರಾಂಶ

ಶಿವಯೋಗಿ ಸಿದ್ದರಾಮೇಶ್ವರ 852ನೇ ಜಯಂತಿಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಮಾತನಾಡಿ, ಅವರ ಚಿಂತನೆಗಳನ್ನು ಅನುಷ್ಠಾನಕ್ಕೆ ತರಬೇಕು ಎಂದಿದ್ದಾರೆ.

ಕನ್ನಡಪ್ರಭ ವಾರ್ತೆ ಗೋಕಾಕ

ಸಂತರ ವಿಚಾರ ಹಾಗೂ ಸಾಧನೆಗಳನ್ನು ಪ್ರತಿಯೊಬ್ಬ ಯುವಕರು ಅಳವಡಿಸಿಕೊಂಡು ಯುವ ಪೀಳಿಗೆಗೆ ಪರಿಚಯಸಲು ಮುಂದಾಗಬೇಕು ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಸೋಮವಾರ ಹಮ್ಮಿಕೊಂಡ ಶಿವಯೋಗಿ ಸಿದ್ದರಾಮೇಶ್ವರ 852ನೇ ಜಯಂತಿಯ ಕಾರ್ಯಕ್ರಮದಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಅಧ್ಯಾತ್ಮ ಪರಂಪರೆ ಹೊಂದಿರುವ ದೇಶದಲ್ಲಿ ದಿವ್ಯಜ್ಞಾನಿಗಳನ್ನು ಮುಂದಿನ ಜನಾಂಗಕ್ಕೆ ಪರಿಚಯಿಸಲು ಅವರ ಚಿಂತನೆಗಳನ್ನು ಅನುಷ್ಠಾನಕ್ಕೆ ತರಬೇಕು ಎಂದು ತಿಳಿಸಿದರು.

ಇದೇ ಸಂಧರ್ಭದಲ್ಲಿ ಬೋವಿ ವಡ್ಡರ ಸಮಾಜದ ವತಿಯಿಂದ ಶಾಸಕರನ್ನು ಸತ್ಕರಿಸಿ, ಗೌರವಿಸಲಾಯಿತು. ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ತುಕಾರಾಮ ಕಾಗಲ, ಮಾರುತಿ ಮನವಡ್ಡರ, ಬಸವರಾಜ್ ವಡ್ಡರ್, ಪರಶುರಾಮ್ ವಡ್ಡರ್, ಎಲ್.ಜಿ.ಗಾಡಿವಡ್ಡರ ಶಟ್ಟೆಪ್ಪ ಗಾಡಿವಡ್ಡರ ಪರಶುರಾಮ್ ವಡ್ಡರ, ಸಂಜೆಯ ವಡ್ಡರ್ ಬರಮಣ್ಣ ಗಾಡಿವಡ್ಡರ, ಎಂ.ಬಿ.ಗಾಡಿವಡ್ಡರ, ಗೋವಿಂದ್ ಗಾಡಿವಡ್ಡರ, ಹನುಮಂತ್ ಮನವಡ್ಡರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.