ಸಾರಾಂಶ
ಕನ್ನಡಪ್ರಭ ವಾರ್ತೆ ಅರಕಲಗೂಡು
ತಾಲೂಕಿನ ಕೊಣನೂರು ಬಿಎಂಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆದ ಬೃಹತ್ ಉದ್ಯೋಗಮೇಳದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗ ಆಕಾಂಕ್ಷಿಗಳು ಭಾಗವಹಿಸಿದ್ದರು.ಕೊಣನೂರು ಬಿಎಂಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅಭಿವೃದ್ಧಿ ಸಮಿತಿ, ಹಿರಿಯ ವಿದ್ಯಾರ್ಥಿ ಸಂಘ, ಉದ್ಯೋಗ ಮಾಹಿತಿ ಕೋಶದ ಸಹಯೋಗದೊಂದಿಗೆ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ ಹಾಸನ, ಕೊಡಗು, ಬೆಂಗಳೂರು, ಮೈಸೂರು ಸೇರಿದಂತೆ ದೂರದ ಊರುಗಳಿಂದ ಉದ್ಯೋಗ ಆಕಾಂಕ್ಷಿಗಳು ನೇರವಾಗಿ ತಮ್ಮ ವಿದ್ಯೆಗೆ ಅನುಗುಣವಾಗಿ ವಿವಿಧ ಕಂಪನಿಗಳ ಸಂದರ್ಶನ ಎದುರಿಸಿದರು.ಮೊದಲ ಬಾರಿಗೆ ಗ್ರಾಮೀಣ ಪ್ರದೇಶದ ಕಾಲೇಜು ಮೈದಾನದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಬೆಂಗಳೂರಿನ 40ಕ್ಕೂ ಹೆಚ್ಚಿನ ಪ್ರತಿಷ್ಠಿತ ಕಂಪನಿಗಳ ಮಾನವ ಸಂಪನ್ಮೂನ ವಿಭಾಗದ ಅಧಿಕಾರಿಗಳು, ಸಿಬ್ಬಂದಿಗಳು ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ಭರವಸೆಯನ್ನು ಸ್ಥಳದಲ್ಲಿಯೇ ನೀಡಿದರು. ಈ ಪೈಕಿ 600ಕ್ಕೂ ಹೆಚ್ಚಿನ ಮಂದಿಗೆ ಒಂದು ವಾರದಲ್ಲಿ ವಿದ್ಯೆ ಮತ್ತು ಅನುಭವಕ್ಕೆ ಅನುಗುಣವಾಗಿ ಉತ್ತಮ ವೇತನದೊಂದಿಗೆ ನೇಮಕಾತಿ ಪತ್ರ ದೊರೆಯಲಿದೆ.ಬೆಳಗ್ಗೆ 10 ಗಂಟೆಗೆ ಆರಂಭಗೊಂಡ ಉದ್ಯೋಗ ಮೇಳವು ಸಂಜೆ ನಾಲ್ಕರ ತನಕವೂ ನಡೆಯಿತು.ಕಾಲೇಜಿನ ಪ್ರಾಂಶುಪಾಲ ರಾಜೀವ್, ಕಾರ್ಯಕ್ರಮ ಸಂಯೋಜಕ ಸುನಿಲ್, ಸಿಡಿಸಿ ಉಪಾಧ್ಯಕ್ಷ ಚೌಡೇಗೌಡ ಇದ್ದರು.ಉದ್ಯೋಗ ಮೇಳದಲ್ಲಿ ಭಾಗವಹಿಸುವ ಆಕಾಂಕ್ಷಿಗಳಿಗೆ ಮೊದಲು ಆತ್ಮಸ್ಥೆರ್ಯ ಮತ್ತು ಭರವಸೆ ನೀಡುವುದು ಅತೀ ಮುಖ್ಯವಾಗಿದೆ. ಇದನ್ನು ಕೊಣನೂರು ಕಾಲೇಜು ವತಿಯಿಂದ ಆಯೋಜನೆ ಮಾಡಿದ್ದ ಉದ್ಯೋಗ ಮೇಳದಲ್ಲಿ ಸಹಕಾರಗೊಂಡಿದೆ. ನಾನು ಎಂಜಿನಿಯರ್ ಪದವೀಧರಳಾಗಿದ್ದು, ನನ್ನ ವಿದ್ಯೆಗೆ ಅನುಗುಣವಾಗಿ ಪ್ರತಿಷ್ಠಿತ ಕಂಪನಿಯಿಂದ ಕೆಲಸ ದೊರೆಯುವ ಭರವಸೆ ಸಿಕ್ಕಿದೆ. ಇದಕ್ಕಾಗಿ ಆಯೋಜಕರನ್ನು ಅಭಿನಂದಿಸುತ್ತೇನೆ.ಸಿಂಚನ ಬಿಇ ಪದವೀಧರೆ ಸೋಮವಾರಪೇಟೆಹಳ್ಳಿಗಾಡಿನಲ್ಲಿ ಉದ್ಯೋಗ ಮೇಳ ಆಯೋಜನೆ ಮಾಡಿರುವುದು ಗ್ರಾಮೀಣ ಭಾಗದ ನಿರುದ್ಯೋಗಿ ಮಕ್ಕಳಿಗೆ ಉತ್ತೇಜಿತವಾಗಿದೆ. ಇಲ್ಲಿ ನನ್ನ ಮಗಳು ಕೂಡ ಭಾಗಿಯಾಗಿದ್ದಾಳೆ. ಮೊದಲ ಬಾರಿಗೆ ಉದ್ಯೋಗ ನೀಡುವ ಕಂಪನಿಗಳಿಂದ ಹೆಚ್ಚಿನ ವೇತನ ನಿರೀಕ್ಷೆ ಮಾಡುವ ಬದಲು ಸಿಕ್ಕ ಕೆಲಸವನ್ನು ಕಣ್ಣಿಗೆ ಹಚ್ಚಿಕೊಂಡು ಮಾಡಿದರೆ ಮುಂದೆ ಅದೇ ದೊಡ್ಡಮಟ್ಟದಲ್ಲಿ ಫಲ ನೀಡಲಿದೆ.ಸೋಮೇಗೌಡ ಸಿದ್ದಾಪುರ