26ರಂದು ಶ್ರೀ ಸುಬ್ರಮಣ್ಯಸ್ವಾಮಿ ಮಹಾ ರಥೋತ್ಸವ ಹಾಗೂ ಎರಡನೇ ತುಳು ಸೃಷ್ಟಿ ಮಹಾ ರಥೋತ್ಸವ ನಂತರ ಮಾರನೇ ದಿವಸ ಮುಕ್ತಾಯದ ಶ್ರೀ ಪ್ರಸನ್ನ ಸುಬ್ರಮಣ್ಯ ಸ್ವಾಮಿಯವರ ದೇವಾಲಯದ ಸಭಾಂಗಣದಲ್ಲಿರುವ ಶಕ್ತಿ ದೇವತೆಯಾದ ಹೊಸಳಿಗಮ್ಮನವರಿಗೆ ಈ ಹಿಂದಿನ ಎಲ್ಲಾ ಕಾರ್ಯಗಳು ಸುಸೂತ್ರವಾಗಿ ನಡೆದಿರುವುದಕ್ಕೆ ಭಕ್ತರು ಸುಮಾರು 2 ಸಾವಿರ ತೆಂಗಿನಕಾಯಿ ಹಾಕಿದರು. ಹೊಸಳಿಗಮ್ಮ ಅವರಿಗೆ ದೇವಸ್ಥಾನದವರು ಹಾಗೂ ಭಕ್ತರು ಸೇರಿ ಸಾವಿರಾರು ತೆಂಗಿನ ಕಾಯಿಗಳನ್ನು ಈಡುಗಾಯಿ ಹಾಕಿದರು.
ರಾಮನಾಥಪುರ: ಇಲ್ಲಿನ ಪ್ರಸನ್ನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಸನ್ನಿಧಿಯಲ್ಲಿರುವ ಶಕ್ತಿ ದೇವತೆಯಾದ ಹೊಸಳಿಗಮ್ಮ ಅವರಿಗೆ ದೇವಸ್ಥಾನದವರು ಹಾಗೂ ಭಕ್ತರು ಸೇರಿ ಸಾವಿರಾರು ತೆಂಗಿನ ಕಾಯಿಗಳನ್ನು ಈಡುಗಾಯಿ ಹಾಕಿದರು. 26ರಂದು ಶ್ರೀ ಸುಬ್ರಮಣ್ಯಸ್ವಾಮಿ ಮಹಾ ರಥೋತ್ಸವ ಹಾಗೂ ಎರಡನೇ ತುಳು ಸೃಷ್ಟಿ ಮಹಾ ರಥೋತ್ಸವ ನಂತರ ಮಾರನೇ ದಿವಸ ಮುಕ್ತಾಯದ ಶ್ರೀ ಪ್ರಸನ್ನ ಸುಬ್ರಮಣ್ಯ ಸ್ವಾಮಿಯವರ ದೇವಾಲಯದ ಸಭಾಂಗಣದಲ್ಲಿರುವ ಶಕ್ತಿ ದೇವತೆಯಾದ ಹೊಸಳಿಗಮ್ಮನವರಿಗೆ ಈ ಹಿಂದಿನ ಎಲ್ಲಾ ಕಾರ್ಯಗಳು ಸುಸೂತ್ರವಾಗಿ ನಡೆದಿರುವುದಕ್ಕೆ ಭಕ್ತರು ಸುಮಾರು 2 ಸಾವಿರ ತೆಂಗಿನಕಾಯಿ ಹಾಕಿದರು.
ಈ ಸಂದರ್ಭದಲ್ಲಿ ಬ್ರಹ್ಮಶ್ರೀ ತಂತ್ರಸಾರ ಅಗಮ ಕುಶಲ ಭಾರತೀರಮಣ, ಪಾರುಪತ್ತೇಗಾರ್ ರಮೇಶ್ ಭಟ್, ಅರ್ಚಕರಾದ ರಾಘವೇಂದ್ರ ಭಟ್, ಶ್ರೀನಾಥ್, ಕಾರ್ತಿಕ್ ಸೋಮಯಾಜಿ, ತ್ರಿವಿಕ್ರಮ್, ಪ್ರಹ್ನದ್, ಸುಮಿತ, ಪ್ರಸನ್ನ, ಶ್ರೀವಿಷ್ಣು, ರಾಮಚಂದ್ರಭಟ್, ನಾಗರಾಜು ಮುಂತಾದವರು ವಿಶೇಷ ಪೂಜೆಯಲ್ಲಿ ಭಾಗವಾಗಿದ್ದರು. ಬಂದಂತಹ ಸಾವಿರಾರು ಭಕ್ತರುಗಳಿಗೆ ಪ್ರಸಾದದ ವ್ಯವಸ್ಥೆ ಮಾಡಿದ್ದರು.