ಸಾರಾಂಶ
ದತ್ತಪೀಠದಲ್ಲಿ ನಡೆಯತ್ತಿರುವ ಅನುಸೂಯಾ ಜಯಂತಿಯಲ್ಲಿ ಪಾಲ್ಗೊಳ್ಳಲು ಕಡೂರು ಕ್ಷೇತ್ರದಿಂದ ಸುಮಾರು 3 ಸಾವಿರ ಮಹಿಳೆಯರು ದತ್ತಪೀಠಕ್ಕೆ ಪಟ್ಟಣದ ಬಿಜೆಪಿ ಕಚೇರಿಯಿಂದ ಬಸ್ಸುಗಳ ಮೂಲಕ ತೆರಳಿದರು ಎಂದು ದೇವಾನಂದ್ ಹೇಳಿದರು.
ಕನ್ನಡಪ್ರಭ ವಾರ್ತೆ, ಕಡೂರು
ದತ್ತಪೀಠದಲ್ಲಿ ನಡೆಯತ್ತಿರುವ ಅನುಸೂಯಾ ಜಯಂತಿಯಲ್ಲಿ ಪಾಲ್ಗೊಳ್ಳಲು ಕಡೂರು ಕ್ಷೇತ್ರದಿಂದ ಸುಮಾರು 3 ಸಾವಿರ ಮಹಿಳೆಯರು ದತ್ತಪೀಠಕ್ಕೆ ಭಕ್ತಿಪೂರ್ವಕವಾಗಿ ತೆರಳುತ್ತಿದ್ದಾರೆ ಎಂದು ಬಿಜೆಪಿ ಮಂಡಲಾಧ್ಯಕ್ಷ ಬಿ.ಪಿ.ದೇವಾನಂದ್ ತಿಳಿಸಿದರು.ಭಾನುವಾರ ಅವರು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಹಿಳಾ ಭಕ್ತರು ಬಸ್ಸುಗಳ ಮೂಲಕ ತೆರಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಾಮೀಣ ಪ್ರದೇಶ ಹಾಗೂ ಕಡೂರು -ಬೀರೂರು ಪಟ್ಟಣಗಳ ಮಹಿಳೆಯರಿಗೆ ದತ್ತಪೀಠಕ್ಕೆ ತೆರಳಲು ಕ್ಷೇತ್ರದ ಮಾಜಿ ಶಾಸಕ ಬೆಳ್ಳಿಪ್ರಕಾಶ್ ಅವರ ಮಾರ್ಗದರ್ಶನದಲ್ಲಿ 42 ಬಸ್ಸುಗಳು, ಇತರೆ ಖಾಸಗಿ ವಾಹನಗಳು, ಮಿನಿ ಬಸ್‌ಗಳ ವ್ಯವಸ್ಥೆ ಕಲ್ಪಿಸಿಕೊಡಲಾಗಿತ್ತು. ಮಹಿಳೆಯರು ಸ್ವಇಚ್ಛೆಯಿಂದ ಅನಸೂಯಾ ಜಯಂತಿಯಲ್ಲಿ ಭಾಗವಹಿಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ದತ್ತಪೀಠದ ಜಯಂತಿ, ಉತ್ಸವಗಳಿಗೆ ಮಹಿಳೆಯರ ಸಂಖ್ಯೆ ಹೆಚ್ಚಿ ಸಂಘಟನೆ ಬಲಗೊಳ್ಳುತ್ತಿದೆ. ಮಂಗಳವಾರ ದತ್ತಪೀಠದಲ್ಲಿ ನಡೆಯಲಿರುವ ದತ್ತ ಜಯಂತಿಗೆ ಕಡೂರಿನ ಸಾವಿರಾರು ಭಕ್ತರು ದತ್ತ ಮಾಲಾಧಾರಿಗಳಾಗಿ ತೆರಳಲಿದ್ದಾರೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯೆ ಕಾವೇರಿ ಲಕ್ಕಪ್ಪ, ವನಮಾಲ ದೇವರಾಜ್, ಸುಧಾ ಉಮೇಶ್, ಸವಿತಾ ರಮೇಶ್, ಮಂಜುಳಾ ಚಂದ್ರು, ಮಲ್ಲಿಕಾರ್ಜುನ್ ( ಮಲ್ಲು) ಹೇಮಾವತಿ, ಜಿಗಣೇಹಳ್ಳಿ ನೀಲ ಕಂಠಪ್ಪ, ಮಲ್ಲಪ್ಪನಹಳ್ಳಿ ಶಶಿ, ಕಡೂರು ಎ.ಮಣಿ, ಬಳ್ಳೇಕೆರೆ ಶಶಿ, ಮಲ್ಲಿಕಾರ್ಜುನ್ ಮಲ್ಲು, ಸಿದ್ದಪ್ಪ, ಕೆ.ಆರ್.ಚಂದ್ರು, ಕುರುಬಗೆರೆ ಮಹೇಶ್, ಹುಲ್ಲೇಹಳ್ಳಿ ಲಕ್ಷ್ಮಣ್, ಬೀರೂರು ಸುದರ್ಶನ್, ಅರೇಹಳ್ಳಿ ಉಮೇಶ್ ಮತ್ತಿತರಿದ್ದರು. 24ಕೆಕೆಡಿಯು4.
ಕಡೂರು ಪಟ್ಟಣದ ಬಿಜೆಪಿ ಕಚೇರಿಯಿಂದ ಮಹಿಳಾ ಕಾರ್ಯಕರ್ತೆಯರು ಅನಸೂಯಾ ಜಯಂತಿ ಕಾರ್ಯಕ್ರಮಕ್ಕೆ ತೆರಳಿದರು. ಬಿಜೆಪಿ ಮಂಡಲಾಧ್ಯಕ್ಷ ಬಿ.ಪಿ. ದೇವಾನಂದ್ ಮತ್ತಿತರಿದ್ದರು.