ದನಗಳನ್ನು ಕದ್ದೊಯ್ಯುತ್ತಿದ್ದ ಮೂವರ ಬಂಧನ

| Published : Aug 03 2024, 12:38 AM IST

ಸಾರಾಂಶ

ಕಡೂರು: ಸರಕು ಸಾಗಾಣಿಕೆ ವಾಹನದಲ್ಲಿ ದನಗಳನ್ನು ಕದ್ದೊಯ್ಯುತ್ತಿದ್ದ ಮೂವರನ್ನು ದನಗಳ ಸಮೇತ ಕಡೂರು ಪೊಲೀಸರು ಬಂಧಿಸಿದ್ದಾರೆ.

ಕಡೂರು: ಸರಕು ಸಾಗಾಣಿಕೆ ವಾಹನದಲ್ಲಿ ದನಗಳನ್ನು ಕದ್ದೊಯ್ಯುತ್ತಿದ್ದ ಮೂವರನ್ನು ದನಗಳ ಸಮೇತ ಕಡೂರು ಪೊಲೀಸರು ಬಂಧಿಸಿದ್ದಾರೆ.

ಕಡೂರು ಪಟ್ಟಣದ ತಂಗಲಿ ಬೈಪಾಸ್ ರಸ್ತೆ ಸಮೀಪ ಸರಕು ಸಾಗಾಣಿಕೆ ವಾಹನದಲ್ಲಿ ಮೂರು ದನಗಳು ಹಾಗೂ ಒಂದು ಕರುವನ್ನು ಕಡೂರು ತಾಲೂಕಿನ ನಿಡಘಟ್ಟ ಗ್ರಾಮದಿಂದ ಕಳ್ಳತನ ಮಾಡಿಕೊಂಡು ಮಾರಾಟ ಮಾಡಲು ಸಾಗಿಸುವಾಗ ಪೊಲೀಸರು ವಾಹನ ಮತ್ತು ದನಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಜ್ಜಂಪುರ ಗ್ರಾಮದ ಉಮ್ಮರ್ ಫಾರುಕ್ ಖಾನ್, ಮುಬಾರಕ್ ಮತ್ತು ಉಮ್ಮರ್ ಫಾರುಖ್ ರನ್ನು ಬಂಧಿಸಿದ್ದಾರೆ. ಆರೋಪಿಗಳು ಕಡೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೂರು ಪ್ರಕರಣಗಳಲ್ಲಿ ಮತ್ತು ಸಕ್ರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಎರಡು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ 4.30 ಲಕ್ಷ ರು. ಮೌಲ್ಯದ ವಾಹನ, 90,000 ನಗದು, 1.10 ಲಕ್ಷ ರು. ಮೌಲ್ಯದ ದನಗಳು ಸೇರಿ ಒಟ್ಟಾರೆ 6.30 ಲಕ್ಷರು. ಗಳಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ಪಿಎಸ್ಐ ಪವನ್ ಕುಮಾರ್, ನವೀನ್, ಅ ಜರುದ್ದೀನ್, ಧನಂಜಯ ಮತ್ತು ಸಿಬ್ಬಂದಿ ಮಂಜುನಾಥ್, ಮಧುಕುಮಾರ್, ಹರೀಶ್, ಮೊಹಮ್ಮದ್ ರಿಯಾಜ್, ಶ್ರೀ ಸ್ವಾಮಿ, ಜಯಮ್ಮ ಪಾಲ್ಕೊಂಡಿದ್ದರು.

2ಕೆಕೆಡಿಯು3.