ಕೊಡಗು‌ ಜಿಲ್ಲೆಯಾದ್ಯಂತ ಮೂರುದಿನಗಳ ಕಲಾಯಾತ್ರೆ: ರಾಧಿಕಾ ಭಾರಧ್ವಜ್

| Published : Nov 14 2025, 03:30 AM IST

ಕೊಡಗು‌ ಜಿಲ್ಲೆಯಾದ್ಯಂತ ಮೂರುದಿನಗಳ ಕಲಾಯಾತ್ರೆ: ರಾಧಿಕಾ ಭಾರಧ್ವಜ್
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣದಲ್ಲಿ ಕಲೆಯ ವಿವಿಧ ಸಾಧ್ಯತೆಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕಲಾಯಾತ್ರೆಯ ಚಟುವಟಿಕೆಗಳು ಗಮನೀಯವಾಗಿದೆ ಎಂದು ಗಣ್ಯರು ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಶಾಲಾಶಿಕ್ಷಣದಲ್ಲಿ ಸ್ಥಳೀಯ ಕಲೆಗಳು ಅಂತರ್ಗತಗೊಳ್ಳಬೇಕಿದೆ, ಈ‌ ನಿಟ್ಟಿನಲ್ಲಿ ಅರಿವು ಮೂಡಿಸಲು ಇಂಡಿಯಾ ಫೌಂಡೇಶನ್ ಫಾರ್ ದ ಆರ್ಟ್ಸ್ ಸಂಸ್ಥೆ ಕೊಡಗು‌ ಜಿಲ್ಲೆಯಾದ್ಯಂತ ಮೂರುದಿನಗಳ ಕಲಾಯಾತ್ರೆಯನ್ನು ಆಯೋಜಿಸಿದೆ ಎಂದು ಐಎಫ್ ಎ ಯ ಕಲಾ ವಿಭಾಗದ ಕಾರ್ಯಕ್ರಮ ಅಧಿಕಾರಿ ರಾಧಿಕಾ ಭಾರಧ್ವಾಜ್ ಹೇಳಿದರು.

ಬೆಂಗಳೂರಿನ ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ ಸಂಸ್ಥೆಯ ವತಿಯಿಂದ ಕೊಡಗು‌ ಜಿಲ್ಲೆಯಲ್ಲಿ ಸೋಮವಾರ ಆರಂಭಗೊಂಡ ಮೂರು‌ದಿನಗಳ‌ ಕಲಾಯಾತ್ರೆಗೆ ಸೋಮವಾರಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಚಾಲನೆ‌ ನೀಡಿ ಮಾತನಾಡಿದರು.

ಸರ್ಕಾರಿ ಶಾಲೆಗಳ ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆ ತರುವ ಉದ್ದೇಶದಿಂದ ಐಎಫ್ ಎ ಸಂಸ್ಥೆ ಪ್ರತೀ ವರ್ಷ ಶಿಕ್ಷಕರು ಹಾಗೂ ಕಲಾವಿದರಿಗೆ ಕಲಿಕಲಿಸು ಯೋಜನೆಯನ್ವಯ ಅನುದಾನ ನೀಡುತ್ತಿದೆ ಎಂದರು. ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಮಂಜೇಶ್ ಎಂ.ವಿ. ಮಾತನಾಡಿ, ಶಿಕ್ಷಣದಲ್ಲಿ ಕಲೆಯ ವಿವಿಧ ಸಾಧ್ಯತೆಗಳನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಕಲಾಯಾತ್ರೆಯ ಚಟುವಟಿಕೆಗಳು ಗಮನೀಯವಾಗಿದೆ ಎಂದರು.

ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಗಿರೀಶ್ ಬಿ ಆರ್, ಪ್ರೇಮಾ ವಿ, ಪ್ರೌಢಶಾಲಾ ವಿಭಾಗದ ಪ್ರಭಾರ ಮುಖ್ಯ ಶಿಕ್ಷಕ ಶಶಿಧರ್, ಸಹಶಿಕ್ಷಕರಾದ ವಿಜಯ ಕುಮಾರ್, ರಾಜರತ್ನ, ಐಎಫ್ ಎ ಸಂಪನ್ಮೂಲ‌ ವ್ಯಕ್ತಿಗಳಾದ ಭಾರತಿ ಕೊಪ್ಪ, ಪ್ರಶಾಂತ್ ಮೈಸೂರು, ಪ್ರವೀಣ್ ಬೆಳ್ಳಿ, ಮೌನೇಶ ವಿಶ್ವಕರ್ಮ, ರಾಣಿ ಮೈಸೂರು, ದೀಪಾ‌ ಮೈಸೂರು ಮೊದಲಾದವರು ಉಪಸ್ಥಿತರಿದ್ದರು. ಮೊದಲ ದಿನದಲ್ಲಿ ಆರುಮಂದಿ ಸಂಪನ್ಮೂಲ ವ್ಯಕ್ತಿಗಳು, ತಾಲೂಕಿನ‌10 ಶಾಲೆಗಳಲ್ಲಿ ಕಲಾ ಚಟುವಟಿಕೆಗಳನ್ನು ಪ್ರಾತ್ಯಕ್ಷಿಕೆ ಮೂಲಕ‌ ನಡೆಸಿಕೊಟ್ಟರು. ಬುಧವಾರ ಮಡಿಕೇರಿ‌ ತಾಲೂಕು ಹಾಗೂ ಗುರುವಾರ ವಿರಾಜಪೇಟೆ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಕಲಾಯಾತ್ರೆಯ ಚಟುವಟಿಕೆಗಳು ನಡೆಯಲಿದೆ.