ವೃತ್ತಿ ಬೋಧಕರಿಗೆ, ಸಿಬ್ಬಂದಿಗೆ ಬಲವರ್ಧನ ತರಬೇತಿ

| Published : Mar 21 2025, 12:30 AM IST

ಸಾರಾಂಶ

ಈಗಾಗಲೇ ತಮ್ಮ ತಮ್ಮ ಕಾರ್ಯಕ್ಷೇತ್ರದಲ್ಲಿ ತೊಡಗಿಕೊಂಡಿರುವ ವೃತ್ತಿ ಬೋಧಕರು ಹಾಗೂ ಸಿಬ್ಬಂದಿಗಳು ಕಾಲ ಕಾಲಕ್ಕೆ ಬದಲಾಗುವ ಅನೇಕ ಮಾಹಿತಿಗಳನ್ನು ತಿಳಿದುಕೊಳ್ಳುವುದು,

ಕನ್ನಡಪ್ರಭ ವಾರ್ತೆ ಮೈಸೂರುಜೆಎಸ್ಎಸ್ ಜನ ಶಿಕ್ಷಣ ಸಂಸ್ಥೆಯು ಮಾ. 22ರವರೆಗೆ ಮೂರು ದಿನಗಳ ಕಾಲ ಶ್ರೀ ಕ್ಷೇತ್ರ ಸುತ್ತೂರಿನಲ್ಲಿ ತನ್ನ ವೃತ್ತಿ ಬೋಧಕರಿಗೆ ಹಾಗೂ ಸಿಬ್ಬಂದಿಗೆ ಬಲವರ್ಧನ ತರಬೇತಿ ಕಾರ್ಯಕ್ರಮವನ್ನು ಗುರುವಾರ ಜೆಎಸ್ಎಸ್ ಮಹಾವಿದ್ಯಾಪೀಠ ಶಾಲಾ ಶಿಕ್ಷಣ ವಿಭಾಗದ ನಿರ್ದೇಶಕ ಬಿ.ಎ. ರಾಜಶೇಖರ ಉದ್ಘಾಟಿಸಿದರು.ನಂತರ ಅವರು ಮಾತನಾಡಿ, ಈಗಾಗಲೇ ತಮ್ಮ ತಮ್ಮ ಕಾರ್ಯಕ್ಷೇತ್ರದಲ್ಲಿ ತೊಡಗಿಕೊಂಡಿರುವ ವೃತ್ತಿ ಬೋಧಕರು ಹಾಗೂ ಸಿಬ್ಬಂದಿಗಳು ಕಾಲ ಕಾಲಕ್ಕೆ ಬದಲಾಗುವ ಅನೇಕ ಮಾಹಿತಿಗಳನ್ನು ತಿಳಿದುಕೊಳ್ಳುವುದು, ಅನೇಕ ವಿಷಯಗಳ ಬಗ್ಗೆ ಮಾಹಿತಿ ಪಡೆದು, ಹೊಸ ಹೊಸ ಆವಿಷ್ಕಾರಗಳನ್ನು ಮಾಡುವ ನಿಟ್ಟಿನಲ್ಲಿ ಜನ ಶಿಕ್ಷಣ ಸಂಸ್ಥೆಯ ಹಾಗೂ ವೃತ್ತಿ ಬೋಧಕರಿಗೆ ಮೂರು ದಿನದ ಬಲವರ್ಧನಾ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಈ ರೀತಿಯ ಕಾರ್ಯಗಾರದ ಮೂಲಕ ನೀವು ಜ್ಞಾನವನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ, ಸಮಾಜದ ಹಲವರನ್ನು ಮುಖ್ಯ ವಾಹಿನಿಗೆ ತರುವುದು ಹಾಗೂ ಆ ಮೂಲಕ ಸಮಾಜದ ವಿವಿಧ ಸ್ತರದ ಜನರು ಸ್ವಾಭಿಮಾನದಿಂದ ಸ್ವಾವಲಂಬನೆ ಸಾಧಿಸಲು ನೆರವಾಗುವುದು ಹಾಗೂ ಮಹಿಳೆಯರು ಸಮಾಜದಲ್ಲಿ ಸದೃಢವಾಗಿ ಬೆಳೆಯಬಹುದೆಂದು ಅವರು ತಿಳಿಸಿದರು.ಜೆಎಸ್ಎಸ್ ಮಹಾವಿದ್ಯಾಪೀಠ ಶಾಲಾ ಶಿಕ್ಷಣ ವಿಭಾಗದ ವಿಷಯ ಪರಿವೀಕ್ಷಕರಾದ ಎಚ್‌.ಎಸ್‌. ನಾಗರಾಜು, ಚನ್ನಬಸವಣ್ಣ, ಜನ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಸಿ. ರಮೇಶ, ಜನ ಶಿಕ್ಷಣ ಸಂಸ್ಥೆಯ ಸಿಬ್ಬಂದಿ, ವೃತ್ತಿ ಬೋಧಕರು ಹಾಗೂ ಹಲವು ಮಂದಿ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದ್ದರು.