ಡಾ. ಡಿ. ವೀರೇಂದ್ರ ಹೆಗ್ಗಡೆಯವರ 79ನೇ ಜನ್ಮದಿನ ಹಾಗೂ 59ನೇ ಪಟ್ಟಾಭಿಷೇಕದ ವರ್ಧಂತಿ ನಿಮಿತ್ತ ನ. 19, 20 ಹಾಗೂ 21ರಂದು ಮೂರು ದಿನ ಸಂಸ್ಥೆಯ ಆವರಣದಲ್ಲಿ ರಾಜ್ಯಮಟ್ಟದ ಕಾಲೇಜುಗಳ ಪುರುಷರ ಕುಸ್ತಿ ಸ್ಪರ್ಧೆ ಸಂಘಟಿಸಿದೆ.
ಧಾರವಾಡ:
ಇಲ್ಲಿಯ ವಿದ್ಯಾಗಿರಿಯ ಜನತಾ ಶಿಕ್ಷಣ ಸಮಿತಿಯು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆ ಅಲ್ಲದೇ ಕ್ರೀಡೆಗೂ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದು, ಪ್ರಸ್ತುತ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 79ನೇ ಜನ್ಮದಿನ ಹಾಗೂ 59ನೇ ಪಟ್ಟಾಭಿಷೇಕದ ವರ್ಧಂತಿ ನಿಮಿತ್ತ ನ. 19, 20 ಹಾಗೂ 21ರಂದು ಮೂರು ದಿನ ಸಂಸ್ಥೆಯ ಆವರಣದಲ್ಲಿ ರಾಜ್ಯಮಟ್ಟದ ಕಾಲೇಜುಗಳ ಪುರುಷರ ಕುಸ್ತಿ ಸ್ಪರ್ಧೆ ಸಂಘಟಿಸಿದೆ.ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಸ್ಥೆಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ, ಈ ಸ್ಪರ್ಧೆಗೆ ರಾಜ್ಯದ ವಿವಿಧ ಮೂಲೆಗಳಿಂದ 900 ಕುಸ್ತಿ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ವಿವಿಧ ತೂಕದಲ್ಲಿ ಫ್ರೀ- ಸ್ಟೈಲ್, ಗ್ರಿಕೋ, ರೋಮನ್ ಸ್ಟೈಲ್ನ ಕುಸ್ತಿ ಇರಲಿದೆ. ಭಾಗವಹಿಸುವ ಕ್ರೀಡಾಪಟುಗಳಿಗೆ ಸಂಸ್ಥೆಯಲ್ಲಿಯೇ ವಸತಿ ವ್ಯವಸ್ಥೆ, ಊಟದ ವ್ಯವಸ್ಥೆ, ತುರ್ತು ಸಂದರ್ಭದಲ್ಲಿ ವೈದ್ಯಕೀಯ ಸೇವೆ ಸಹ ನೀಡಲಾಗುತ್ತಿದೆ. ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸಲು 50ಕ್ಕೂ ಹೆಚ್ಚು ಸಿಬ್ಬಂದಿಯ ವಿವಿಧ ಸಮಿತಿಗಳನ್ನು ರಚಿಸಲಾಗಿದೆ ಎಂದರು.
20ರಂದು ಉದ್ಘಾಟನೆ:ನ. 19ರಂದು ಸ್ಫರ್ಧೆಗೆ ಬರುವ ಅಭ್ಯರ್ಥಿಗಳ ನೋಂದಣಿ ಮತ್ತು ತೂಕ ತಪಾಸಣೆ ನಡೆಯಲಿದ್ದು, ನ. 20ರಂದು ಬೆಳಗ್ಗೆ 10ಕ್ಕೆ ಉದ್ಘಾಟನೆಯೊಂದಿಗೆ ಸ್ಪರ್ಧೆ ಪ್ರಾರಂಭವಾಗಲಿದೆ. ಹೊನಲು ಬೆಳಕಿನ ಪಂದ್ಯ ಸಹ ನಡೆಯಲಿದ್ದು, ಉತ್ತಮ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಸುಸಜ್ಜಿತ ಕುಸ್ತಿ ಮ್ಯದಾನವನ್ನು ತಜ್ಞರ ಮಾರ್ಗದರ್ಶನದಲ್ಲಿ ತಯಾರು ಮಾಡಲಾಗಿದೆ. ಸುಮಾರು 2000 ಪ್ರೇಕ್ಷಕರಿಗೆ ಕುಳಿತುಕೊಳ್ಳಲು ಗ್ಯಾಲರಿಯ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಸ್ಪರ್ಧೆಯನ್ನು ಜಿಲ್ಲಾ ಉಸ್ತುವಾರಿ ಸಂತೋಷ ಲಾಡ್ ಉದ್ಘಾಟಿಸಲಿದ್ದು ವಿಪ ಸಭಾಪತಿ ಸಲಿಂ ಅಹಮ್ಮದ್ ಹಾಗೂ ಕೇಂಂದ್ರ ಸಚಿವ ಪ್ರಹ್ಲಾದ ಜೊಶಿ ಭಾಗವಹಿಸುವರು. ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಲಿದ್ದು ನ. 21ರಂದು ಸಂಜೆ 4ಕ್ಕೆ ಬಹುಮಾನ ವಿತರಣೆ ನಡೆಯಲಿದ್ದು, ವಿಜೇತರಿಗೆ ಮೆಡಲ್ ಹಾಗೂ ಪ್ರಮಾಣಪತ್ರ ಮತ್ತು ಭಾಗವಹಿಸಿದ ಅಭ್ಯರ್ಥಿಗಳಿಗೂ ಪ್ರಮಾಣಪತ್ರ ವಿತರಿಸಲಾಗುವುದು ಎಂದರು.ಸುದ್ದಿಗೋಷ್ಠಿಯಲ್ಲಿ ಆಡಳಿತಾಧಿಕಾರಿ ಅರಿಹಂತ ಪ್ರಸಾದ, ಮಹಾವೀರ ಉಪಾದ್ಯೆ, ಡಾ. ಸೂರಜ್ ಜೈನ್, ಜಿನ್ನಪ್ಪ ಕುಂದಗೊಳ, ಭಾರತಿ ಶಾನಬಾಗ ಇದ್ದರು. ಡಾ. ಅಜಿತ ಪ್ರಸಾದ