ಸಾರಾಂಶ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಕೊಡಮಾಡುವ 2022-23ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ‘ಕನ್ನಡಪ್ರಭ’ದ ಮೂವರು ಹಾಗೂ ‘ಏಷ್ಯಾನೆಟ್ ಸುವರ್ಣನ್ಯೂಸ್’ನ ಒಬ್ಬರು ಭಾಜನರಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಕೊಡಮಾಡುವ 2022-23ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ‘ಕನ್ನಡಪ್ರಭ’ದ ಮೂವರು ಹಾಗೂ ‘ಏಷ್ಯಾನೆಟ್ ಸುವರ್ಣನ್ಯೂಸ್’ನ ಒಬ್ಬರು ಭಾಜನರಾಗಿದ್ದಾರೆ.
‘ಕನ್ನಡಪ್ರಭ’ದ ಹಿರಿಯ ಪುಟ ವಿನ್ಯಾಸಕಾರ ಜಿ.ಎಂ.ಕೊಟ್ರೇಶ್‌ಗೆ ಅತ್ಯುತ್ತಮ ಪುಟ ವಿನ್ಯಾಸಕ, ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿಗೆ ಮೈಸೂರಿನ ಅನುರಾಗ್ ಬಸವರಾಜು, ಗ್ರಾಮೀಣ ಜನ-ಜೀವನದ ಅತ್ಯುತ್ತಮ ವರದಿಗಾಗಿ ಅರಸೀಕೆರೆಯ ಪಿ.ಶಾಂತಕುಮಾರ್‌ಗೆ ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ ದೊರಕಿದೆ.
ಇಸ್ರೇಲ್ ಯುದ್ಧಭೂಮಿಯಲ್ಲಿ ವೃತ್ತಿಪರತೆ ತೋರಿದ ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಕ್ಯಾಮೆರಾ ವಿಭಾಗದ ಮುಖ್ಯಸ್ಥ ಮೋಹನ್‌ರಾಜ್ ಅವರಿಗೆ ವಿದ್ಯುನ್ಮಾನ ಟಿವಿ ವಿಭಾಗದ ಪ್ರಶಸ್ತಿ ಘೋಷಣೆಯಾಗಿದೆ.
ಫೆ.3 ಮತ್ತು 4ರಂದು ದಾವಣಗೆರೆಯಲ್ಲಿ ನಡೆಯುವ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.
ಜಿ.ನಾರಾಯಣಸ್ವಾಮಿ ಪ್ರಶಸ್ತಿ: ಮಡಿಕೇರಿಯ ಸಣ್ಣವಂಡ ಕಿಶೋರ್ ನಾಚಪ್ಪ, ಮಂಗಳೂರಿನ ಸಂಶುದ್ದೀನ್ ಕೆ.ಎಣ್ಣೂರು,
ಪಟೇಲ್ ಭೈರಹನುಮಯ್ಯ ಪ್ರಶಸ್ತಿ: ಕೋಲಾರದ ಸಿ.ಎನ್.ಶಿವಶಂಕರ, ಮಂಡ್ಯದ ಎಂ.ಎನ್. ಯೋಗೇಶ್‌ಗೆ ದೊರಕಿದೆ.
ಗಿರಿಧರ್ ಪ್ರಶಸ್ತಿ: ತರೀಕೆರೆಯ ಡಿ.ಉಮೇಶ್ ನಾಯ್ಕ, ಬೆಂಗಳೂರಿನ ಎಲ್.ದೇವರಾಜ್ ಭಾಜನರಾಗಿದ್ದಾರೆ.
ಬಿ.ಎಸ್. ವೆಂಕಟರಾಂ ಪ್ರಶಸ್ತಿ: ಬೆಂಗಳೂರಿನ ಚಂದ್ರಹಾಸ ಹಿರೇಮಳಲಿ, ರಾಮನಗರದ ಎಸ್.ಶ್ರೀಧರ,
ಕೆ.ಎ.ನೆಟ್ಟಕಲ್ಲಪ್ಪ ಪ್ರಶಸ್ತಿ: ಜಾಬಗೆರೆ ಮಂಜುನಾಥ, ಬೆಂಗಳೂರಿನ ಇಬ್ರಾಹೀಂ ಖಲೀಲ್ ಬನ್ನೂರು,
ಖಾದ್ರಿ ಶಾಮಣ್ಣ ಪ್ರಶಸ್ತಿ: ಬೆಂಗಳೂರಿನ ಶಶಿಧರ ಹೆಗಡೆ, ಡಿ.ಎಚ್.ಸುಖೇಶ್,
ಮಂಗಳ ಎಂ.ಸಿ.ವರ್ಗಿಸ್ ಪ್ರಶಸ್ತಿ: ಕಾರಂತ ಪೆರಾಜೆ, ರಾಘವೇಂದ್ರ ತೊಗರ್ಸಿ ಅವರಿಗೆ ಲಭಿಸಿದೆ.
ಬಂಡಾಪುರ ಮುನಿರಾಜು ಸ್ಮಾರಕ ಪ್ರಶಸ್ತಿ: ಕಡೂರಿನ ಕೆ.ಆರ್.ಯೋಗೀಶ, ಕಲಬುರಗಿಯ ತಾಜುದ್ದೀನ್ ಅಜಾದ್‌ಗೆ ಸಿಕ್ಕಿದೆ.
ಅತ್ಯುತ್ತಮ ಪೋಟೋಗ್ರಫಿ ಪ್ರಶಸ್ತಿ: ಬೆಳಗಾವಿಯ ಪಿ.ಕೆ.ಬಡಿಗೇರ, ಹಾಸನದ ನಟರಾಜ್,
ಆರ್.ಎಲ್. ವಾಸುದೇವರಾವ್ ಪ್ರಶಸ್ತಿ: ಹುಬ್ಬಳ್ಳಿಯ ಪ್ರಕಾಶ್ ಎಸ್.ಶೇಟ್, ರಾಯಚೂರಿನ ಅಮರೇಶ ದೇವದುರ್ಗ ಆಯ್ಕೆಯಾಗಿದ್ದಾರೆ.
ಆರ್.ಎಲ್.ವಾಸುದೇವರಾವ್ ಪ್ರಶಸ್ತಿ: ಶಿವಮೊಗ್ಗದ ಅಖಿಲೇಶ್ ಚಿಪ್ಪಲಿ,
ಬಿ.ಜಿ.ತಿಮ್ಮಪ್ಪಯ್ಯ ಪ್ರಶಸ್ತಿ: ಬೀದರ್ ಶಶಿಕಾಂತ್ ಎಸ್.ಶಂಬಳ್ಳಿ, ಬಾಗಲಕೋಟೆಯ ಪ್ರಕಾಶ್ ಬಾಳಕ್ಕನವರ್,
ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ ಕೋಲಾರದ ಎಚ್.ಕೆ.ರಾಘವೇಂದ್ರ,
ನಾಡಪ್ರಭು ಕೆಂಪೇಗೌಡ ಸ್ಮಾರಕ ಪ್ರಶಸ್ತಿ: ನಂಜುಂಡಪ್ಪ, ತೃಪ್ತಿ ಕುಂಬ್ರಗೋಡು, ಎಚ್.ಆರ್.ಅಶ್ವಿನಿ,
ಯಜಮಾನ್ ಟಿ.ನಾರಾಯಣಪ್ಪ ಸ್ಮಾರಕ ಪ್ರಶಸ್ತಿ: ಶಿರಾ ಬರಗೂರು ವಿರೂಪಾಕ್ಷಪ್ಪ, ಗದಗದ ಮಾಳಿಂಗರಾಯ ಪೂಜಾರ್‌ಗೆ ಸಿಕ್ಕಿದೆ.
ನಾಡಿಗೇರ ಕೃಷ್ಣರಾಯರ ಪ್ರಶಸ್ತಿ: ರಂಜಿತ್ ಅಶ್ವತ್, ಎನ್.ರಾಘವೇಂದ್ರ,
ಅತ್ಯುತ್ತಮ ಪುಟ ವಿನ್ಯಾಸ (ಡೆಸ್ಕ್): ಎಚ್.ಕೆ.ರವೀಂದ್ರನಾಥ ಹೊನ್ನೂರು,
ನ್ಯಾಯಾಲಯದ ಅತ್ಯುತ್ತಮ ವರದಿ: ಬೆಂಗಳೂರಿನ ಎಸ್.ಶ್ಯಾಮ್ ಪ್ರಸಾದ್,
ಸುಣ್ಣವಂಡ ಶ್ರೀನಿವಾಸ ಚಂಗಪ್ಪ ಪ್ರಶಸ್ತಿ: ಕೊಡಗಿನ ಅನುಕಾರ್ಯಪ್ಪ,
ಕೆ.ಎನ್.ಸುಬ್ರಮಣ್ಯ ಪ್ರಶಸ್ತಿ: ಉತ್ತರಕನ್ನಡದ ಪವನ್ ಕುಮಾರ್ ಎಚ್., ಕೊಡಗಿನ ಅಕ್ಷಯ ಪಿ.ವಿ.,
ಟಿ.ಕೆ.ಮಲಗೊಂಡ ಪ್ರಶಸ್ತಿ: ಹಾವೇರಿ ಸಿದ್ದು ಆರ್.ಜಿ.ಹಳ್ಳಿ, ಹಾವೇರಿ, ವಿಜಯಪುರದ ಶಶಿಕಾಂತ್ ಮೆಂಡೇಗಾರ ಭಾಜನರಾಗಿದ್ದಾರೆ.
ಅಪ್ಪಾಜಿಗೌಡ ಪ್ರಶಸ್ತಿ: ಬೆಂಗಳೂರಿನ ಅರುಣ್ ಕುಮಾರ, ಬಬಿತಾ ಎಸ್., ತ
ಗಡೂರು ಕಮಲಮ್ಮ ವೀರೇಗೌಡ ಪ್ರಶಸ್ತಿ: ಚನ್ನರಾಯಪಟ್ಟಣದ ಬಿ.ಸಿ.ಚನ್ನೇಗೌಡ, ಬೀದರ್‌ನ ಗುರುರಾಜ್ ಕುಲಕರ್ಣಿ,
ಬದರೀನಾಥ್ ಹೊಂಬಾಳೆ ಪ್ರಶಸ್ತಿ: ಕೆ.ಎನ್.ಪುಟ್ಟಲಿಂಗಯ್ಯ, ಗದಗದ ವೆಂಕಟೇಶ್ ಬಿ. ಇಮ್ರಾಪುರ,
ಅಭಿಮಾನಿ ಪ್ರಕಾಶನ ಪ್ರಶಸ್ತಿ: ಚಿಕ್ಕೋಡಿಯ ವಿರೂಪಾಕ್ಷ ಕೆ. ಕವಟಗಿ, ಲಿಂಗಸೂಗೂರು ಶಿವರಾಜ್ ಕೆಂಭಾವಿ,
ಗುಡಿಹಳ್ಳಿ ನಾಗರಾಜ್ ಪ್ರಶಸ್ತಿ: ಚಿತ್ರದುರ್ಗದ ಎಂ.ಎನ್.ಅಹೋಬಳಪತಿ, ಶ್ರೀಧರ್ ನಾಯಕ್‌ಗೆ ದೊರೆತಿದೆ.
ರವಿ ಬೆಳಗೆರೆ ಪ್ರಶಸ್ತಿ: ಟಿ.ಗುರುರಾಜ್, ಜಗದೀಶ್ ಬೆಳ್ಳಿಯಪ್ಪ,
ಅತ್ಯುತ್ತಮ ತನಿಖಾ ವರದಿ: ನ್ಯೂಸ್ ಫಸ್ಟ್ ಆಯ್ಕೆಯಾಗಿದೆ.
ವಿದ್ಯುನ್ಮಾನ ಟಿವಿ ವಿಭಾಗದಲ್ಲಿ ಹರೀಶ್ ನಾಗರಾಜ್, ನಮಿತಾ ಜೈನ್, ರಾಚಪ್ಪ, ದಶರಥ, ಮನೋಜ್ ಕುಮಾರ್ ಹಾಗೂ
ಕೆಯುಡಬ್ಲೂಜೆ ವಿಶೇಷ ಪ್ರಶಸ್ತಿಗೆ ನಿರ್ಮಲ ಎಲಿಗಾರ್, ಪಿ.ಬಿ.ಹರೀಶ್ ರೈ, ಪ್ರಕಾಶ್ ಮಸ್ಕಿ, ಕೆ.ಎಸ್.ಭಾಸ್ಕರ ಶೆಟ್ಟಿ, ರಾಧಾಕೃಷ್ಣ ಭಟ್ ಭಟ್ಕಳ, ವೆಂಕಟೇಶ್ ಮೂರ್ತಿ, ಅರವಿಂದ ನಾವಡ, ರಾಜಶೇಖರ ಜೋಗಿನ್ಮನೆ, ರಮೇಶ್ ಪಾಳ್ಯ ಆಯ್ಕೆಯಾಗಿದ್ದಾರೆ.