ಮುನ್ನೂರು ಕಾಪು ಸಮಾಜ ಇತರರಿಗೆ ಆದರ್ಶ

| Published : Jun 23 2024, 02:00 AM IST

ಸಾರಾಂಶ

ಮುನ್ನೂರು ಕಾಪು ಸಮಾಜ ಕೃಷಿ ಪಾರಂಪರಿಕ ಕಾರ ಹುಣ್ಣಿಮೆ ನಿಮಿತ್ತ ನಡೆಸುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬವನ್ನು ಜನ ಆಕರ್ಷಿಸುವ ರೀತಿಯಲ್ಲಿ ಆಯೋಜನೆ ಮಾಡುವುದರ ಮೂಲಕ ರೈತರನ್ನು ಖುಷಿ ಪಡುಸುವುದರ ಜೊತೆಗೆ ಇತರೆ ಸಮಾಜಗಳಿಗೆ ಆದರ್ಶ ಪ್ರಾಯವಾಗಿದೆ ಎಂದು ಹರಿಹರಪುರದ ಆದಿ ಶಂಕರಾಚಾರ್ಯ ಶಾರದಾಲಕ್ಷ್ಮೀನರಸಿಂಹ ಪೀಠಾಧೀಶ್ವರರಾದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ನುಡಿದರು.

ಎರಡನೇ ದಿನದ ಹಬ್ಬದಲ್ಲಿ ಆದಿಶಂಕರಾಚಾರ್ಯ ಶಾರದಾಲಕ್ಷ್ಮೀ ನರಸಿಂಹ ಪೀಠಾಧೀಶ್ವರರ ಶ್ಲಾಘನೆ

ಕನ್ನಡಪ್ರಭ ವಾರ್ತೆ ರಾಯಚೂರು

ಮುನ್ನೂರು ಕಾಪು ಸಮಾಜ ಕೃಷಿ ಪಾರಂಪರಿಕ ಕಾರ ಹುಣ್ಣಿಮೆ ನಿಮಿತ್ತ ನಡೆಸುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬವನ್ನು ಜನ ಆಕರ್ಷಿಸುವ ರೀತಿಯಲ್ಲಿ ಆಯೋಜನೆ ಮಾಡುವುದರ ಮೂಲಕ ರೈತರನ್ನು ಖುಷಿ ಪಡುಸುವುದರ ಜೊತೆಗೆ ಇತರೆ ಸಮಾಜಗಳಿಗೆ ಆದರ್ಶ ಪ್ರಾಯವಾಗಿದೆ ಎಂದು ಹರಿಹರಪುರದ ಆದಿ ಶಂಕರಾಚಾರ್ಯ ಶಾರದಾಲಕ್ಷ್ಮೀನರಸಿಂಹ ಪೀಠಾಧೀಶ್ವರರಾದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ನುಡಿದರು.

ಸ್ಥಳೀಯ ರಾಜೇಂದ್ರ ಗಂಜ್ ಆವರಣದಲ್ಲಿ ಮುನ್ನೂರು ಕಾಪು (ಬಲಿಜ) ಸಮಾಜದಿಂದ ಮೂರು ದಿನಗಳ ಕಾಲ ನಡೆಯುತ್ತಿರುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಎರಡನೇ ದಿನ ಜೋಡೆತ್ತುಗಳಿಂದ ಎರಡು ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ಧೆಗೆ ಚಾಲನೆ ನೀಡಿ ಆಶೀರ್ವಚನ ನೀಡಿದ ಶ್ರೀಗಳು ಭಾರತ ಕೃಷಿ ಪ್ರಧಾನ ದೇಶ. ಇಲ್ಲಿ ರೈತರು ಸುಖವಾಗಿದ್ದರೆ ಮಾತ್ರ ದೇಶ ಸುಭದ್ರವಾಗಲಿದೆ ಎಂದರು. ಭಾರತ ದೇಶದಲ್ಲಿ ಶೇ.60 ರಷ್ಟು ರೈತರು ಇದ್ದಾರೆ. ಪ್ರಸ್ತುತ ಕಾಲಘಟ್ಟದಲ್ಲಿ ಕೃಷಿ ಮರೀಚಿಕೆಯಾಗುತ್ತಿದೆ ಎಂದು ವಿಷಾದಿಸಿದರು.

ಮುನ್ನೂರು ಕಾಪು ಸಮಾಜ ಜಾನಪದ ಕೃಷಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉಳಿಸುವ ಬೆಳೆಸುವ ನಿಟ್ಟಿನಲ್ಲಿ ರಾಯಚೂರು ಜಿಲ್ಲೆಯಲ್ಲಿ ಅತ್ಯಂತ ಅದ್ದೂರಿಯಾಗಿ ಆಯೋಜನೆ ಮಾಡುವುದರ ಮೂಲಕ ಎ.ಪಾಪಾರೆಡ್ಡಿ ನೇತೃತ್ವದ ಮುನ್ನೂರು ಕಾಪು ಸಮಾಜ ಇತರೆ ಸಮಾಜಗಳಿಗೆ ಮಾದರಿಯಾಗಿದೆ ಎಂದರು.

ಸಂಸದ ಕುಮಾರ ನಾಯಕ ಮಾತನಾಡಿ, ಮೂರು ದಿನಗಳ ಕಾಲ ಅಚ್ಚುಕಟ್ಟಾಗಿ ನಡೆಯುವ ಸಾಂಸ್ಕೃತಿಕ ಹಬ್ಬವು ದಿನೇ ದಿನೆ ಜನಪ್ರಿಯತೆ ಪಡೆಯುತ್ತಿದೆ. ಗ್ರಾಮೀಣ ಭಾಗದ ಕ್ರೀಡೆಗಳನ್ನು ಪ್ರೋತ್ಸಾಹಿಸುವುದರ ಜೊತೆಗೆ ಕಲಾವಿದರು ಮತ್ತು ಕಲೆಯನ್ನು ಸ್ಥಳೀಯರಿಗೆ ಪರಿಚಯಿಸುವ ಕೆಲಸವನ್ನು ಸಮಾಜ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

ಈ ಸಂದರ್ಭದಲ್ಲಿ ನವಲಕಲ್ ಬ್ರಹ್ಮಮಠ ಅಭಿನವ ಶಿವಾಚಾರ್ಯರು, ಹಬ್ಬದ ರೂವಾರಿ ಮಾಜಿ ಶಾಸಕ ಎ. ಪಾಪಾರೆಡ್ಡಿ, ಮುಖಂಡರಾದ ರವಿ ಬೋಸರಾಜು, ಕೆ.ಶಾಂತಪ್ಪ, ಜಯಣ್ಣ, ಬೆಲ್ಲಂ ನರಸರೆಡ್ಡಿ, ಶಿವಬಸಪ್ಪ ಮಾಲಿಪಾಟೀಲ್, ಆರ್.ಕೆ. ಅಂಬರೀಷ್‌, ಕೃಷ್ಣಮೂರ್ತಿ ವೆಂಕಟರೆಡ್ಡಿ, ಬಸವರಾಜ ರೆಡ್ಡಿ ಸೇರಿದಂತೆ ವಿವಿಧ ರೈತರು ಸಾರ್ವಜನಿಕರು ಇದ್ದರು.---------------------

22ಕೆಪಿಆರ್‌ಸಿಆರ್‌ 01ರಾಯಚೂರಿನ ಎಪಿಎಂಸಿ ಆವರಣದಲ್ಲಿ ನಡೆಯುತ್ತಿರುವ ಮುಂಗಾರು ಸಾಂಸ್ಕೃತಿಕ ರಾಯಚೂರು ಹಬ್ಬದ ಎರಡನೇ ದಿನದ ಕಾರ್ಯಕ್ರಮದಲ್ಲಿ ಹರಿಹರಪುರದ ಆದಿ ಶಂಕರಾಚಾರ್ಯ ಶಾರದಾಲಕ್ಷ್ಮೀನರಸಿಂಹ ಪೀಠಾಧೀಶ್ವರರಾದ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿದರು.