ಸಾರಾಂಶ
ಸರಸ್ವತಿ ಪುರಂಲ್ಲಿ ಗುರುವಾರ ಮುಂಜಾನೆ ಸುಮಾರು ೪.೩೫ ರಲ್ಲಿ ಚಲಿಸುತ್ತಿದ್ದ ಕಾರನ್ನು ಅಡ್ಡಗಟ್ಟಿದ ಪುಡಿರೌಡಿಗಳು, ಗ್ಲಾಸ್ ಒಡೆದು ಚಾಲಕನಿಗೆ ಬೆದರಿಕೆ ಹಾಕಿದ್ದಾರೆ. ಪುನೀತ್ ಎಂಬುವರು ಅಡ್ಲಿಮನೆಯಿಂದ ಟಯೋಟ ಇಟಿಯೋಸ್ ಕಾರಿನಲ್ಲಿ ಎಂ.ಜಿ. ರಸ್ತೆಗೆ ಪಿಕಪ್ ಮಾಡಲು ವೇಗವಾಗಿ ತೆರಳುತ್ತಿದ್ದರು. ಈ ವೇಳೆ ಮೊದಲೇ ಒಂದೇ ಬೈಕ್‌ನಲ್ಲಿ ಬಂದು ಹೊಂಚು ಹಾಕಿ ಕಾಯುತ್ತಿದ್ದ ಮೂವರು ಪುಂಡರು ಕಾರು ತಮ್ಮ ಬಳಿ ಬರುತ್ತಿದ್ದಂತೆ ಏಕಾಏಕಿ ಅಡ್ಡ ಹಾಕಿ ಚಾಲಕನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಕಾರಿನ ಗ್ಲಾಸ್ ಒಡೆದು ಗೂಂಡಾವರ್ತನೆ ತೋರಿದ್ದಾರೆ.
ಹಾಸನ: ನಗರದಲ್ಲಿ ಮುಂದುವರಿದ ಪುಂಡರ ಹಾವಳಿಯಲ್ಲಿ ಬೈಕಿನಲ್ಲಿ ಬಂದ ಮೂವರು ಯುವಕರು ಕಾರಿನ ಗಾಜು ಒಡೆದು ಬೆದರಿಕೆ ಹಾಕಿದ ಘಟನೆ ಗುರುವಾರ ಬೆಳ್ಳಂಬೆಳಿಗ್ಗೆ ನಗರದ ಸರಸ್ವತಿ ಪುರಂನಲ್ಲಿ ನಡೆದಿದ್ದು, ಚಾಲಕ ತನ್ನ ಸಮಯ ಪ್ರಜ್ಞೆಯಿಂದ ಬಚಾವ್ ಆಗಿದ್ದಾರೆ.
ನಗರದ ಸರಸ್ವತಿ ಪುರಂಲ್ಲಿ ಗುರುವಾರ ಮುಂಜಾನೆ ಸುಮಾರು ೪.೩೫ ರಲ್ಲಿ ಚಲಿಸುತ್ತಿದ್ದ ಕಾರನ್ನು ಅಡ್ಡಗಟ್ಟಿದ ಪುಡಿರೌಡಿಗಳು, ಗ್ಲಾಸ್ ಒಡೆದು ಚಾಲಕನಿಗೆ ಬೆದರಿಕೆ ಹಾಕಿದ್ದಾರೆ. ಪುನೀತ್ ಎಂಬುವರು ಅಡ್ಲಿಮನೆಯಿಂದ ಟಯೋಟ ಇಟಿಯೋಸ್ ಕಾರಿನಲ್ಲಿ ಎಂ.ಜಿ. ರಸ್ತೆಗೆ ಪಿಕಪ್ ಮಾಡಲು ವೇಗವಾಗಿ ತೆರಳುತ್ತಿದ್ದರು. ಈ ವೇಳೆ ಮೊದಲೇ ಒಂದೇ ಬೈಕ್‌ನಲ್ಲಿ ಬಂದು ಹೊಂಚು ಹಾಕಿ ಕಾಯುತ್ತಿದ್ದ ಮೂವರು ಪುಂಡರು ಕಾರು ತಮ್ಮ ಬಳಿ ಬರುತ್ತಿದ್ದಂತೆ ಏಕಾಏಕಿ ಅಡ್ಡ ಹಾಕಿ ಚಾಲಕನ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಕಾರಿನ ಗ್ಲಾಸ್ ಒಡೆದು ಗೂಂಡಾವರ್ತನೆ ತೋರಿದ್ದಾರೆ. ಇದರಿಂದ ಗಾಬರಿಗೊಂಡ ಚಾಲಕ ಎಡಬದಿಯಿಂದ ಅತಿವೇಗದಲ್ಲಿ ಕಾರು ಚಲಾಯಿಸಿಕೊಂಡು ಮುಂದಕ್ಕೆ ಹೋಗಿದ್ದಾರೆ. ಆದರೂ ಬಿಡದ ಪುಂಡರು, ಟೂಲ್ಸ್, ಕಲ್ಲು ಹಿಡಿದು ಕಾರನ್ನು ಬೆನ್ನಟ್ಟುವ ಪ್ರಯತ್ನ ಮಾಡಿದ್ದಾರೆ. ಆದರೆ ಚಾಲಕ ಇವರ ಕೈಗೆ ಸಿಗದೆ ಕಾರು ಚಲಾಯಿಸಿಕೊಂಡು ಅಲ್ಲಿಂದ ಕಣ್ಮರೆ ಆಗಿದ್ದಾರೆ. ಪುಂಡರ ಈ ದೃಶ್ಯ ಕೃತ್ಯ ಮನೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಗರದ ಪೆನ್‌ಷನ್‌ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.