ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಪಿಯುಸಿ ಫಲಿತಾಂಶದಲ್ಲಿ ರಾಜ್ಯಮಟ್ಟದಲ್ಲಿ 3 ರ್‍ಯಾಂಕ್‌ ಪಡೆಯುವುದರ ಮೂಲಕ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಕಲಾ ವಿಜ್ಞಾನ ಮತ್ತು ವಾಣಿಜ್ಯ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಸಾಕ್ಷಿ ಮಠಪತಿ 600 ಅಂಕಕ್ಕೆ 593 ಅಂಕಗಳನ್ನು ಪಡೆದು ರಾಜ್ಯಕ್ಕೆ 7ನೇ ಸ್ಥಾನ, ವೀಣಾ ಹಿರೇಮಠ 589 ಅಂಕಗಳಿಂದ ರಾಜ್ಯಕ್ಕೆ 11ನೇ ಸ್ಥಾನ ಮತ್ತು ಬಸವೇಶ್ವರ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದ ಅನುಷಾ ಅಕ್ಕೇರಿ 589 ಅಂಕಗಳಿಂದ ರಾಜ್ಯಕ್ಕೆ 11ನೇ ಸ್ಥಾನ ಪಡೆದುಕೊಂಡು ಬಿವಿವಿ ಸಂಘಕ್ಕೆ ಕೀರ್ತಿ ತಂದಿದ್ದಾರೆ.

ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಸಿ ಚರಂತಿಮಠ, ಗೌರವ ಕಾರ್ಯದರ್ಶಿ ಮಹೇಶ್ ಎನ್.ಅಥಣಿ, ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಆಡಳಿತ ಅಧಿಕಾರಿಗಳಾದ ವಿ.ಆರ್.ಶಿರೋಳ, ಡಾ.ವಿ.ಎಸ್.ಕಟಗಿಹಳ್ಳಿವ್ಮಠ, ಪದನಿಮಿತ್ತ ಕಾರ್ಯದರ್ಶಿಗಳಾದ ಡಾ.ಎಸ್.ಎಂ.ಗಾಂವ್ಕರ್ ಹಾಗೂ ಪ್ರಾಚಾರ್ಯರು ಮತ್ತು ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.ವಿದ್ಯಾಗಿರಿ ಪಿಯು ಕಾಲೇಜಿಗೆ ಅತ್ಯುತ್ತಮ ಫಲಿತಾಂಶ:

ವಿದ್ಯಾಗಿರಿಯ ಬಿಬಿವಿ ಸಂಘದ ಕಲಾ ವಿಜ್ಞಾನ ಹಾಗೂ ವಾಣಿಜ್ಯ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಶೇ.92.49, ವಾಣಿಜ್ಯ ವಿಭಾಗದಲ್ಲಿ ಶೇ.93.53 ಹಾಗೂ ಕಲಾ ವಿಭಾಗದಲ್ಲಿ ಶೇ.88.16 ರಷ್ಟು ಸೇರಿ ಒಟ್ಟಾರೆ ಶೇ.92 ರಷ್ಟು ಉತ್ತೀರ್ಣತೆಯೊಂದಿಗೆ ಅತ್ಯುತ್ತಮ ಫಲಿತಾಂಶ ಪಡೆದುಕೊಂಡಿದೆ.ವಿಜ್ಞಾನ ವಿಭಾಗದಲ್ಲಿ ಸಾಕ್ಷಿ ಮಠಪತಿ 593, ವೀಣಾ ಹಿರೇಮಠ 589, ಪೂಜಾ ಬೆಣ್ಣೂರ 582, ಕಲಾ ವಿಭಾಗದಲ್ಲಿ ಶ್ವೇತಾ ಹೊರೆಕೇರಿ 579, ರೇಖಾ ಲಮಾಣಿ 570, ವಿನೋದ ಲಮಾಣಿ 561, ತೇಜಸ್ವಿನಿ ಸಾಲಿಯಾನ 561, ವಾಣಿಜ್ಯ ವಿಭಾಗದಲ್ಲಿ ಕುಮಾರಿ ರಾಧಿಕಾ ಸುತಾರ 579, ಜಕ್ಕವ್ವ ಕೆಂಗಲಗುತ್ತಿ 577, ತೇಜಸ್ವಿನಿ ದೊರೆಗೋಳ 577, ಅಕ್ಷತಾ ಅಕ್ಕಿ 574 ಅಂಕಗಳಿಂದ ವಿದ್ಯಾರ್ಥಿಗಳು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹಾಗೆಯೇ ವಿಜ್ಞಾನ ವಿಭಾಗದಲ್ಲಿ 139 ವಾಣಿಜ್ಯ ವಿಭಾಗದಲ್ಲಿ 37 ಕಲಾ ವಿಭಾಗದಲ್ಲಿ 22 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.ಬಸವೇಶ್ವರ ಪ.ಪೂ ವಾಣಿಜ್ಯ ಮಹಾವಿದ್ಯಾಲಯಕ್ಕೆ ಶೇ.88.10:

2025-26ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿಯ ಫಲಿತಾಂಶ ಪ್ರಕಟವಾಗಿದ್ದು, ಮಹಾವಿದ್ಯಾಲಯದ ಕುಮಾರ ಮಂಥನ ಮಹಾವೀರ ಪೋರವಾಲ 580 (ಶೇಕಡಾ 96.67%) ಅಂಕಗಳನ್ನು ಪಡೆದು ಮಹಾವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, ಮಹಾವಿದ್ಯಾಲಯದ ಶೇಕಡಾವಾರು ಫಲಿತಾಂಶ ಶೇ.88.10 ಆಗಿದ್ದು, ಒಟ್ಟು 168 ವಿದ್ಯಾರ್ಥಿಗಳಲ್ಲಿ 148 ವಿದ್ಯಾರ್ಥಿಗಳು ತೇರ್ಗಡೆಗೊಂಡಿದ್ದು, 34 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 69 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 39 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಮತ್ತು 6 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಪಾಸಾಗಿದ್ದಾರೆ. ನಮ್ಮ ಮಹಾವಿದ್ಯಾಲಯದಲ್ಲಿ ಗರಿಷ್ಠ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು, ಮಂಥನ ಮಹಾವೀರ ಪೋರವಾಲ ಶೇ.96.67, ಲೆಕ್ಕಶಾಸ್ತ್ರಕ್ಕೆ 100/100 ಅಂಕ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ, ಶೃತಿ ರಮೇಶ ಕಂಬಾರ ಶೇ.96.3 ದ್ವಿತೀಯ, ಕ್ರಿಷಾ ರಾಜೇಶ ಪಟೇಲ್ ಶೇ.96 ತೃತೀಯ, ಲಕ್ಷ ಶಿವಕುಮಾರ ಅಗರವಾಲ ಶೇ.96 ತೃತೀಯ, ರಂಜಿತಾ ತೇಜುನಾಥ ದೊಡಮನಿ ಶೇ.95.67, ಶ್ರಾವಣಿ ಎಂ.ಅಂಗಡಿ ಶೇ.95.17 ರಷ್ಟು ಅಂಕ ಪಡೆದಿದ್ದಾರೆ.ಬಿವಿವಿಎಸ್ ಸಂಯುಕ್ತ ಪಿಯು ಕಾಲೇಜಿಗೆ ಶೇ.87.22:


2025-26ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿಯ ಫಲಿತಾಂಶ ಪ್ರಕಟವಾಗಿದ್ದು, ಬಸವೇಶ್ವರ ಸಂಯುಕ್ತ ಪ.ಪೂ ಮಹಾವಿದ್ಯಾಲಯದ ಕಲಾ ವಿಭಾಗ್ ಐಶ್ವರ್ಯ ಛಲವಾದಿ 573, ವಾಣಿಜ್ಯ ವಿಭಾಗದ ಸೌಮ್ಯ ಸೊನ್ನದ 573 ಅಂಕ, ವಿಜ್ಞಾನ ವಿಭಾಗದ ಸಂಜಯ ಓಘಿ 568 ಅಂಕ ಪಡೆದು ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ.