ಸಾರಾಂಶ
ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಕೊಡೇರಿ ಗ್ರಾಮದ ಹೊಸಹಿತ್ಲು ಸಮುದ್ರತೀರದಲ್ಲಿ ನಡೆದಿದೆ.
ಬೈಂದೂರು ಕಿರಿಮಂಜೇಶ್ವರ ಕೊಡೇರಿ ಗ್ರಾಮದ ಹೊಸಹಿತ್ಲು ಸಮುದ್ರತೀರದಲ್ಲಿ ದುರ್ಘಟನೆಕುಂದಾಪುರ: ಮಂಗಳವಾರ ಸಂಜೆ ಈಜಲು ತೆರಳಿದ್ದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಕೊಡೇರಿ ಗ್ರಾಮದ ಹೊಸಹಿತ್ಲು ಸಮುದ್ರತೀರದಲ್ಲಿ ನಡೆದಿದೆ.ಬೈಂದೂರು ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಂಕೇತ್ (18), ಕಿರಿಮಂಜೇಶ್ವರ ಪ್ರೌಢ ಶಾಲೆಯ ಎಸೆಸ್ಸೆಲ್ಸಿ ವಿದ್ಯಾರ್ಥಿ ಸೂರಜ್ (16), ಕಿರಿಮಂಜೇಶ್ವರ ಪ್ರೌಢ ಶಾಲೆಯ ಒಂಭತ್ತನೆ ತರಗತಿ ವಿದ್ಯಾರ್ಥಿ ಆಶಿಶ್ (15) ಮೃತ ವಿದ್ಯಾರ್ಥಿಗಳು.ಸ್ಥಳೀಯರು ಹಾಗೂ ಈಜುಪಟುಗಳ ಸಹಾಯದಿಂದ ಮೃತದೇಹಗಳನ್ನು ಮೇಲಕ್ಕೆತ್ತಲಾಗಿದ್ದು ಬೈಂದೂರಿಗೆ ಸಮುದಾಯ ಆರೋಗ್ಯಕೇಂದ್ರಕ್ಕೆ ಸಾಗಿಸಲಾಗಿದೆ. ಸ್ಥಳಕ್ಕೆ ಬೈಂದೂರು ಪಿಎಸ್ಐ ತಿಮ್ಮೇಶ್ ಭೇಟಿ ನೀಡಿದ್ದಾರೆ.