ಮೂವರು ಸುರೇಶ್, ಐವರು ಮಂಜುನಾಥ್ ಹೆಸರಿನವರ ಸ್ಪರ್ಧೆ!

| Published : Apr 06 2024, 12:47 AM IST

ಮೂವರು ಸುರೇಶ್, ಐವರು ಮಂಜುನಾಥ್ ಹೆಸರಿನವರ ಸ್ಪರ್ಧೆ!
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಜಿದ್ದಾಜಿದ್ದಿನ ಕಣವಾಗಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸುರೇಶ್ ಹೆಸರಿನ ಮೂವರು ಹಾಗೂ ಮಂಜುನಾಥ್ ಹೆಸರಿನ ಐವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ರಾಮನಗರ: ಜಿದ್ದಾಜಿದ್ದಿನ ಕಣವಾಗಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸುರೇಶ್ ಹೆಸರಿನ ಮೂವರು ಹಾಗೂ ಮಂಜುನಾಥ್ ಹೆಸರಿನ ಐವರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಬಿಜೆಪಿಯ ಡಾ. ಮಂಜುನಾಥ್ ಮತ್ತು ಕಾಂಗ್ರೆಸ್‌ನ ಡಿ.ಕೆ.ಸುರೇಶ್ ಅವರ ಹೆಸರಿನ ಕುರಿತು ಮತದಾರರಲ್ಲಿ ಗೊಂದಲ ಮೂಡಿಸಿ, ಎದುರಾಳಿಗಳ ವಿರುದ್ಧ ಲಾಭ ಪಡೆಯುವುದಕ್ಕಾಗಿ ಒಂದೇ ರೀತಿಯ ಹೆಸರಿನವರನ್ನು ಕರೆತಂದು ನಾಮಪತ್ರ ಸಲ್ಲಿಸಲಾಗಿದೆ ಎಂಬ ಆರೋಪ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ.

ಈ ಸುರೇಶ್ ಮತ್ತು ಮಂಜುನಾಥ್ ಹೆಸರಿನ ಅಭ್ಯರ್ಥಿಗಳ ಪದನಾಮದಲ್ಲಿ ಅಲ್ಪಸ್ವಲ್ಪ ಬದಲಾವಣೆ ಇರುವುದನ್ನು ಹೊರತು ಪಡಿಸಿದರೆ ಉಳಿದಂತೆ ಹೆಸರು ಒಂದೇ ರೀತಿಯಲ್ಲಿ ಇದೆ.

ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ. ಸುರೇಶ್ ನಾಮಪತ್ರ ಸಲ್ಲಿಸಿದ್ದರೆ, ಅದೇ ಹೆಸರಿನಲ್ಲಿ ಕರುನಾಡು ಪಾರ್ಟಿಯಿಂದ ಆನೇಕಲ್ ತಾಲೂಕಿನ ಮುತ್ತಾನಲ್ಲೂರಿನ ಎಸ್ . ಸುರೇಶ್ , ಪಕ್ಷೇತರರಾಗಿ ಕನಕಪುರ ತಾಲೂಕಿನ ಮರಳೆ ಗ್ರಾಮದ ಎಂ.ಎನ್ . ಸುರೇಶ್ ಉಮೇದುವಾರಿಕೆ ಸಲ್ಲಿಸಿದ್ದಾರೆ.

ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಡಾ. ಸಿ.ಎನ್. ಮಂಜುನಾಥ್ ನಾಮಪತ್ರ ಸಲ್ಲಿಸಿದರೆ, ಅದೇ ಹೆಸರಿನ ಇತರ ನಾಲ್ವರು ಉಮೇದುವಾರಿಕೆ ಸಲ್ಲಿಸಿರುವುದು ವಿಶೇಷವಾಗಿದೆ.

ಬಹುಜನ್ ಭಾರತ್ ಪಾರ್ಟಿ ಅಭ್ಯರ್ಥಿಯಾಗಿ ಸಿ.ಎನ್. ಮಂಜುನಾಥ , ಪಕ್ಷೇತರರಾಗಿ ಸಿ.ಮಂಜುನಾಥ್ ,ಎನ್. ಮಂಜುನಾಥ್ ಹಾಗೂ ಕೆ.ಮಂಜುನಾಥ್ ಎಂಬುವರು ನಾಮಪತ್ರ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ.

ಈ ಪೈಕಿ ಸಿ.ಎನ್ . ಮಂಜುನಾಥ್ ಅವರು ಡಾ. ಮಂಜುನಾಥ್ ಅವರ ಸ್ವಂತ ಊರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನವರು. ಪಕ್ಷೇತರರಾದ ಸಿ.ಮಂಜುನಾಥ್ ಬೆಂಗಳೂರಿನ ಮೂಡಲಪಾಳ್ಯದವರಾದರೆ, ಎನ್ .ಮಂಜುನಾಥ್ ರಾಜಾಜಿನಗರ ಹಾಗೂ ಕೆ.ಮಂಜುನಾಥ್ ಪಾಪರೆಡ್ಡಿಪಾಳ್ಯದವರು.

5ಕೆಆರ್ ಎಂಎನ್ 9,10,11,12,13,14,15,16.ಜೆಪಿಜಿ

9.ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ 10.ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್ .ಮಂಜುನಾಥ್ 11.ಪಕ್ಷೇತರ ಅಭ್ಯರ್ಥಿ ಎಂ.ಎನ್ .ಸುರೇಶ್ 12.ಕರುನಾಡು ಪಾರ್ಟಿ ಅಭ್ಯರ್ಥಿ ಎಸ್ .ಸುರೇಶ್ 13.ಬುಹಜನ್ ಭಾರತ್ ಪಾರ್ಟಿ ಅಭ್ಯರ್ಥಿ ಸಿ.ಎನ್ .ಮಂಜುನಾಥ್ 14.ಪಕ್ಷೇತರ ಸಿ.ಮಂಜುನಾಥ್ 15.ಪಕ್ಷೇತರ ಕೆ.ಮಂಜುನಾಥ್ 16.ಪಕ್ಷೇತರ ಎನ್ .ಮಂಜುನಾಥ್