ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಮೂರುಸಾವಿರಮಠ ಅಧ್ಯಾತ್ಮದ ಕೇಂದ್ರವಾಗಿ ಶಾಂತಿಯುತ ಜೀವನಕ್ಕೆ ನಾಡಿಗೆ ಆಸರೆಯಾಗಿದೆ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ ಹೇಳಿದರು.ಪಟ್ಟಣದ ಹೊಸೂರ-ಬೈಲಹೊಂಗಲ ಮೂರುಸಾವಿರ ಮಠದ ಶ್ರೀ ನೀಲಕಂಠ ಮಹಾಶಿವಯೋಗೀಶ್ವರರ ಜಾತ್ರಾ ಮಹೋತ್ಸವ-೨೦೨೫ ಲಿಂ.ಗಂಗಾಧರ ಮಹಾಸ್ವಾಮೀಜಿ ೭೨ನೇ ಜಯಂತಿ ಮಹೋತ್ಸವ ಮತ್ತು ಮಹಾಶಿವರಾತ್ರಿ ಉತ್ಸವ ನಿಮಿತ್ತ ನಡೆದ ಧರ್ಮಸಭೆ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದ ಅವರು, ದೇಶ, ಜಗತ್ತು ನಿಂತಿರುವುದು ನಂಬಿಕೆ ಮೇಲೆ. ಅಧ್ಯಾತ್ಮದ ನಂಬಿಕೆಯಿಂದ ಎಲ್ಲರ ಬಾಳು ಸದಾ ಹಸನಾಗಲಿದೆ. 900 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಮಠವು ನಿರ್ವಿಕಲ್ಪ ಸಮಾಧಿಸ್ಥರು, ರಾಜ್ಯದ ಕೇಲವೆ ಕೆಲ ಮಹಾತ್ಮರಲ್ಲಿ ಮೊದಲಿಗರಾಗಿದ್ದ ನೀಲಕಂಠ ಪೂಜ್ಯರಿಂದ ಸ್ಥಾಪಿತವಾಗಿ, ಜಾಗೃತ ನೆಲೆಯಾಗಿದೆ. ಲಿಂ.ಗಂಗಾಧರ ಅಪ್ಪನವರ ಮಾರ್ಗದರ್ಶನದಲ್ಲಿ ಪ್ರಭುನೀಲಕಂಠ ಪೂಜ್ಯರು ಆಯುರ್ವೇದ ಮಹಾವಿದ್ಯಾಲಯ, ₹೩೦ ಕೋಟಿ ವೆಚ್ಚದ ಈಶಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಸೇರಿ ಅನೇಕ ಶಿಕ್ಷಣ ಸಂಸ್ಥೆಗಳಿಂದ ಮಾನಸಿಕ, ದೈಹಿಕ, ಆರೋಗ್ಯ ಶಿಕ್ಷಣ ನೀಡುತ್ತಾ ಸಾಮಾಜಿಕ ಸೇವೆ ಮಾಡುತ್ತಿರುವುದು ಶ್ಲಾಘನೀಯ. ಒಂದು ಕಾಲದಲ್ಲಿ ಶ್ರೀಮಠವನ್ನು ತಿಪ್ಪಿಮಠವೆಂದು ಕರೆಯಲಾಗುತಿತ್ತು. ಗಂಗಾಧರ ಅಪ್ಪನವರು ಉಪ್ಪರಿಗೆ ಮಠವನ್ನಾಗಿ ಪರಿವರ್ತಿಸಿದ್ದಾರೆ ಎಂದರು.
ಹುಬ್ಬಳ್ಳಿ-ಬೈಲಹೊಂಗಲ ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ ಮಾತನಾಡಿ, ಸದ್ಗುರುಗಳ ಮಾರ್ಗದರ್ಶನದ ಧರ್ಮದ ಹಾದಿಯಲ್ಲಿ ಸಾಗಿ ಧರ್ಮಯುತವಾದ ಸಂಪಾದನೆ ಮಾಡಿ, ದಾನ, ಧರ್ಮಗಳ ಮೂಲಕ ಸೇವೆ ಮಾಡುವುದು ಜೀವನದ ಉದ್ದೇಶವಾಗಿದೆ ಎಂದರು.ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಶ್ರೀ ಮಠವು ನಾಡಿನ ಶಾಂತಿಯ ತೋಟವಾಗಿದೆ ಅಲ್ಲದೆ ಸಮಾಜಮುಖಿ ಕಾರ್ಯಗಳ ಮೂಲಕ ನಾಡನ್ನು ಉದ್ದರಿಸುತ್ತಿದೆ ಎಂದರು. ಜಾತ್ರಾ ಸ್ವಾಗತ ಸಮಿತಿ ಅಧ್ಯಕ್ಷ, ಚಿತ್ರನಟ ಶಿವರಂಜನ ಬೋಳನ್ನವರ ಮಾತನಾಡಿ, ಸೂತ್ತೂರು ಮಠದಂತೆ ಶ್ರೀ ಮಠವು ಬೆಳೆದು ಉತ್ತರ ಕರ್ನಾಟಕ ಭಾಗವನ್ನು ಬೆಳಗಲಿದೆ ಎಂದರು. ಎಸಿ ಪ್ರಭಾವತಿ ಫಕೀರಪೂರ ಮಾತನಾಡಿ, ಆರೋಗ್ಯ, ಶಿಕ್ಷಣ ರಂಗದಲ್ಲಿ ಶ್ರೀಮಠದ ಸೇವೆ ಶ್ಲಾಘನೀಯ ಎಂದರು. ಶ್ರೀಮಠದ ಪೀಠಾಧಿಕಾರಿ ಪ್ರಭುನೀಲಕಂಠ ಸ್ವಾಮೀಜಿ ನೇತೃತ್ವ ವಹಿಸಿದ್ದರು.
ವೇದಿಕೆಯ ಮೇಲೆ ದೊಡವಾಡ ಜಡಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಮುತ್ನಾಳ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಹಳೆಕೋಟೆ ಸಿದ್ದಬಸವ ಸ್ವಾಮೀಜಿ, ಶಿವಾಪೂರ ಅಡವಿಸಿದ್ದರಾಮ ಸ್ವಾಮೀಜಿ, ಶಾಸಕ ಬಾಬಾಸಾಹೇಬ ಪಾಟೀಲ, ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ರವೀಂದ್ರ ಪಾಟೀಲ, ಹಿರಿಯರಾದ ಶಂಕರೆಪ್ಪ ಸಿದ್ನಾಳ, ಸಹಕಾರ ಸಂಘಗಳ ಸಹಾಯಕ ನಿಬಂಧಕಿ, ಶಾಹಿನ ಅಕ್ತರ, ಪುರಸಭೆ ಮಾಜಿ ಅಧ್ಯಕ್ಷರಾದ ರಾಜು ಜನ್ಮಟ್ಟಿ, ಬಾಬು ಕುಡಸೋಮಣ್ಣವರ, ಮಾಜಿ ಉಪಾಧ್ಯಕ್ಷ ಮಹಾಂತೇಶ ತುರಮರಿ, ಪ್ರಕಾಶ ಬಾಳೆಕುಂದರಗಿ, ಮಹಾಂತೇಶ ಮತ್ತಿಕೊಪ್ಪ, ಕಾಶೀನಾಥ ಬಿರಾದಾರ, ಶಂಕರೆಪ್ಪ ತಲ್ಲೂರ, ಕಾರ್ತಿಕ ಪಾಟೀಲ, ರಾಚಪ್ಪ ಬೋಳತ್ತಿನ, ಪ್ರಶಾಂತ ಜಕಾತಿ ಇದ್ದರು. ಶ್ರೀಮಠದ ಎಸ್.ಎನ್.ವಿ.ವಿ.ಎಸ್. ಸಂಸ್ಥೆಯ ಉಪಾಧ್ಯಕ್ಷ ಬಿ.ಎಸ್.ಗುರನವರ, ಕಾರ್ಯದರ್ಶಿ ಯು.ಕೆ.ಬಟಿಗೇರ, ನಿರ್ದೇಶಕರಾದ ಎಸ್.ಸಿ.ಮೆಟಗುಡ್ಡ, ವೀರುಪಾಕ್ಷಯ್ಯ ಕೋರಿಮಠ, ಶಿವಪ್ರಸಾದ ಹುಲೆಪ್ಪನವರಮಠ, ರಾಜೇಂದ್ರ ಹಿರೇಮಠ, ಬಿ.ಎಸ್.ಹೊಂಡೇದ, ಸಿ.ಎಸ್.ಕುಸಲಾಪೂರ, ಸಿ.ಎಸ್. ಬಾಂವಿಹಾಳ, ಪರವಯ್ಯ ಪೂಜೇರ, ಸಾವಿರಾರು ಸದ್ಭಕ್ತರು ಇದ್ದರು.ನೇಗಿಲಯೋಗಿ ರಾಜ್ಯ ರೈತ ಸಂಘದ ಪದಾಧಿಕಾರಿಗಳು, ಹೊಸೂರ ಸದ್ಭಕ್ತರು ಪ್ರಭುನೀಲಕಂಠ ಶ್ರೀಗಳನ್ನು ಸನ್ಮಾನಿಸಿದರು. ಪ್ರಾಚಾರ್ಯ ಎಂ.ಎಸ್ ಚಿಲಮೂರ ನಿರೂಪಿಸಿ, ವಂದಿಸಿದರು.
ಕಳೆದ ಎರಡು ವರ್ಷಗಳಿಂದ ಮಹಾಶಿವರಾತ್ರಿ ನಿಮಿತ್ತ ಧಾರ್ಮಿಕ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ ಸೇರಿ ಅನೇಕ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ವೈಭವಪೂರ್ಣವಾಗಿ ಜಾತ್ರೆ ಆಯೋಜಿಸೋಣ. ನಾಡಿನ ಪೂಜ್ಯರ ಆಶೀರ್ವಾದ, ಭಕ್ತರ ಸಹಕಾರದಿಂದ ಶ್ರೀಮಠವು ಸಮಾಜ ಸೇವೆಯ ಮೂಲಕ ಉತ್ಸುಂಗಕ್ಕೆ ಏರುತ್ತಿದೆ. ಬೆಂಗಳೂರಿನಲ್ಲಿ ನೀಲಕಂಠೇಶ್ವರ ಸಂಸ್ಥೆಯಿಂದ ಪಿಯು ಕಾಲೇಜ ಪ್ರಾರಂಭಿಸಲಾಗಿದೆ.ಪ್ರಭುನೀಲಕಂಠ ಸ್ವಾಮೀಜಿ, ಹೊಸೂರ-ಬೈಲಹೊಂಗಲ ಮೂರುಸಾವಿರ ಮಠ