ಸಾರಾಂಶ
ಬಟ್ಟೆ ತೊಳೆಯಲು ಹೋಗಿದ್ದ ಸಹೋದರಿಯರು ಸೇರಿದಂತೆ ಮೂವರು ಮಹಿಳೆಯರು ಕೆರೆ ನೀರಿನಲ್ಲಿ ಮುಳುಗಿ ದುರಂತ ಸಾವು ಕಂಡ ಘಟನೆ ಚನ್ನಗಿರಿ ತಾಲೂಕಿನಲ್ಲಿ ಸಂಭವಿಸಿದೆ.
- ಬಟ್ಟೆ ತೊಳೆಯಲು ಹೋಗಿದ್ದ ದೀಪಾರಾಣಿ, ದಿವ್ಯಾ, ಚಂದನಾ ನೀರುಪಾಲು
- - -ಕನ್ನಡಪ್ರಭ ವಾರ್ತೆ ದಾವಣಗೆರೆ ಬಟ್ಟೆ ತೊಳೆಯಲು ಹೋಗಿದ್ದ ಸಹೋದರಿಯರು ಸೇರಿದಂತೆ ಮೂವರು ಮಹಿಳೆಯರು ಕೆರೆ ನೀರಿನಲ್ಲಿ ಮುಳುಗಿ ದುರಂತ ಸಾವು ಕಂಡ ಘಟನೆ ಚನ್ನಗಿರಿ ತಾಲೂಕಿನಲ್ಲಿ ಸಂಭವಿಸಿದೆ.
ದೀಪಾರಾಣಿ (30), ದಿವ್ಯಾ (26) ಹಾಗೂ ಚಂದನಾ (19) ಮೃತಪಟ್ಟ ದುರ್ದೈವಿಗಳು. ಪಟ್ಟಣಕ್ಕೆ ಸಮೀಪದ ಲಕ್ಷ್ಮೀಸಾಗರ- ದಿಗ್ಗೇನಹಳ್ಳಿ ಗ್ರಾಮದ ಮಧ್ಯೆಯ ಹೊಸಕೆರೆಯಲ್ಲಿ ಘಟನೆ ಸಂಭವಿಸಿದೆ. ಮೃತ ದಿವ್ಯಾ-ಚಂದನಾ ಸಹೋದರಿಯರಾಗಿದ್ದು, ದೀಪಾರಾಣಿ ನೆರೆಮನೆಯವರು. ಸೋಮವಾರ ಮಧ್ಯಾಹ್ನ ಬಟ್ಟೆ ತೊಳೆಯಲೆಂದು ದೀಪಾರಾಣಿ, ದಿವ್ಯಾ, ಚಂದ್ರನಾ ಕೆರೆಗೆ ಹೋಗಿದ್ದರು. ಆಗ ಚಂದನಾ ನೀರಿನಲ್ಲಿ ಈಜಲೆಂದು ಕೆರೆಗೆ ಇಳಿದಿದ್ದಾಗ ಕೆಸರಿನಲ್ಲಿ ಆಕೆಯ ಕಾಲು ಸಿಲುಕಿವೆ. ತಕ್ಷಣವೇ ರಕ್ಷಣೆಗೆ ಧಾವಿಸಿದ ಸಹೋದರಿ ದಿವ್ಯಾ ಸಹ ಕೆರೆ ನೀರಿನ ಕೆಸರಿನಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ.ದೀಪಾರಾಣಿಗೆ ಮೂರು ಮಕ್ಕಳಿದ್ದರೆ, ದಿವ್ಯಾಗೆ 1 ವರ್ಷದ ಮಗುವಿದೆ. ಚನ್ನಗಿರಿ ಅಗ್ನಿಶಾಮಕ ದಳದ ಅಧಿಕಾರಿ ಕುಮಾರ ಹಾಗೂ ಸಿಬ್ಬಂದಿ ಕೆರೆ ನೀರಿನಲ್ಲಿ ಮುಳುಗಿದ್ದ ಮೂವರ ಶವಗಳನ್ನು ತೀವ್ರ ಶೋಧದ ಬಳಿಕ ಹೊರತೆಗೆದರು. ತಹಸೀಲ್ದಾರ್ ಎನ್.ಜೆ.ನಾಗರಾಜ, ವೃತ್ತ ನಿರೀಕ್ಷಕ ಕೆ.ರವೀಶ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.
ಚನ್ನಗಿರಿ ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಮೂವರ ಶವಗಳನ್ನು ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಯಿತು. ಆಸ್ಪತ್ರೆ, ಕೆರೆ ಬಳಿ ಕುಟುಂಬ ವರ್ಗದ ಆಕ್ರಂದನ ಮುಗಿಲು ಮುಟ್ಟುವಂತಿತ್ತು.- - - -17ಕೆಡಿವಿಜಿ6: ಚನ್ನಗಿರಿ ಸಮೀಪದ ಲಕ್ಷ್ಮೀಸಾಗರ-ದಿಗ್ಗೇನಹಳ್ಳಿ ಬಳಿಯ ಹೊಸಕೆರೆಯಲ್ಲಿ ಮುಳುಗಿದ್ದ ಮೂವರ ಶವ ಹೊರ ತೆಗೆದ ವೇಳೆ ಪೊಲೀಸರು ಸ್ಥಳದಲ್ಲಿ ಹಾಜರಿದ್ದರು.
-17ಕೆಡಿವಿಜಿ7: ಚನ್ನಗಿರಿ ಸಮೀಪದ ಲಕ್ಷ್ಮೀಸಾಗರ-ದಿಗ್ಗೇನಹಳ್ಳಿ ಬಳಿಯ ಹೊಸಕೆರೆಯಲ್ಲಿ ಮುಳುಗಿದ್ದ ಮೂವರ ಶವಗಳನ್ನು ಹೊರತೆಗೆದ ಅಗ್ನಿಶಾಮಕ ಸಿಬ್ಬಂದಿ.