ಥ್ರೋಬಾಲ್‌: ಇಂದು ಜಿಲ್ಲಾಮಟ್ಟದ ಬಿಎಸ್‌ವೈ ಕಪ್‌ ಪಂದ್ಯಾವಳಿ

| Published : Feb 27 2024, 01:36 AM IST

ಥ್ರೋಬಾಲ್‌: ಇಂದು ಜಿಲ್ಲಾಮಟ್ಟದ ಬಿಎಸ್‌ವೈ ಕಪ್‌ ಪಂದ್ಯಾವಳಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ ಜಿಲ್ಲಾ ಥ್ರೋ ಬಾಲ್ ಅಸೋಸಿಯೇಷನ್ ವತಿಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನಾಚರಣೆ ಅಂಗವಾಗಿ ಫೆ.27ರಂದು ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾಮಟ್ಟದ ಹೊನಲು ಬೆಳಕಿನ ಬಿ.ಎಸ್‌.ವೈ ಕಪ್‌ ಥ್ರೋಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ. ಬೆಳಗ್ಗೆ 10 ಗಂಟೆಗೆ ಕೇಕ್‌ ಕತ್ತರಿಸುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಲಾಗುವುದು. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಉಪಸ್ಥಿತಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಪಂದ್ಯಾವಳಿ ಉದ್ಘಾಟಿಸುವರು. ಎಂದು ಕುವೆಂಪು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಸಂತೋಷ್ ಬಳ್ಳೆಕೆರೆ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲಾ ಥ್ರೋ ಬಾಲ್ ಅಸೋಸಿಯೇಷನ್ ವತಿಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನಾಚರಣೆ ಅಂಗವಾಗಿ ಫೆ.27ರಂದು ನೆಹರೂ ಕ್ರೀಡಾಂಗಣದಲ್ಲಿ ಜಿಲ್ಲಾಮಟ್ಟದ ಹೊನಲು ಬೆಳಕಿನ ಬಿ.ಎಸ್‌.ವೈ ಕಪ್‌ ಥ್ರೋಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಸಂತೋಷ್ ಬಳ್ಳೆಕೆರೆ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ಬೆಳಗ್ಗೆ 10 ಗಂಟೆಗೆ ಕೇಕ್‌ ಕತ್ತರಿಸುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಲಾಗುವುದು. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಉಪಸ್ಥಿತಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಪಂದ್ಯಾವಳಿ ಉದ್ಘಾಟಿಸುವರು. ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಶಾಸಕ ಎಸ್‌.ಎನ್‌.ಚನ್ನಬಸಪ್ಪ, ವಿಧಾನ ಪರಿಷತ್ತು ಸದಸ್ಯ ಎಸ್‌.ರುದ್ರೇಗೌಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್‌ ಭಾಗವಹಿಸಲಿದ್ದು, ವಿಧಾನ ಪರಿಷತ್ತು ಸದಸ್ಯ ಡಿ.ಎಸ್‌.ಅರುಣ್‌ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.

ಇದೇ ದಿನ ಸಂಜೆ 6.30ಕ್ಕೆ ಪಂದ್ಯಾವಳಿ ಸಮರೋಪ ನಡೆಯಲಿದ್ದು, ಸೂಡಾ ಮಾಜಿ ಅಧ್ಯಕ್ಷ ಎಸ್‌.ಎಸ್‌. ಜ್ಯೋತಿಪ್ರಕಾಶ್‌, ದೇವರಾಜ ಅರಸು ಹಿಂದುಳಿದ ವರ್ಗದ ಮಾಜಿ ನಿರ್ದೇಶಕ ಸಿ.ಎಚ್‌. ಮಾಲತೇಶ್‌, ರಾಜ್ಯ ವಾಲಿಬಾಲ್‌ ಸಂಸ್ಥೆ ಖಜಾಂಚಿ ಕೆ.ಎಸ್‌.ಶಶಿ, ದೈಹಿಕ ಶಿಕ್ಷಣ ಅಧಿಕಾರಿ ಬಿ.ಎಚ್‌. ನಿರಂಜನ್‌ ಮೂರ್ತಿ, ಜಿಲ್ಲಾ ಅನುದಾನರಹಿತ ಶಾಲಾ ದೈಹಿಕ ಶಿಕ್ಷಕರ ಸಂಘ ಅಧ್ಯಕ್ಷ ರಾಮಚಂದ್ರಪ್ಪ ಎಚ್‌.ತಿಮ್ಮೇನಹಳ್ಳಿ, ಜಿಲ್ಲಾ ಥ್ರೋಬಾಲ್‌ ಅಸೋಸಿಯೇಷನ್‌ ಕಾರ್ಯದರ್ಶಿ ಕೆ.ಜಿ.ಮಠಪತಿ ಇರುವರು. ವಿಧಾನ ಪರಿಷತ್ತು ಸದಸ್ಯ ಡಿ.ಎಸ್‌.ಅರುಣ್‌ ಅಧ್ಯಕ್ಷತೆ ವಹಿಸುವರು ಎಂದು ಮಾಹಿತಿ ನೀಡಿದರು.

ಪಂದ್ಯಾವಳಿಯಲ್ಲಿ ಮಹಿಳಾ ಮತ್ತು ಪುರುಷರ ಪ್ರತ್ಯೇಕ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಪ್ರವೇಶ ಶುಲ್ಕ ಉಚಿತವಾಗಿದೆ. ತಲಾ 15 ತಂಡಗಳಿಗೆ ಮಾತ್ರ ಅವಕಾಶ ಇರಲಿದೆ. ವಿಜೇತ ತಂಡಗಳಿಗೆ ₹10 ಸಾವಿರು ಪ್ರಥಮ ಬಹುಮಾನ, ₹8 ಸಾವಿರ ದ್ವಿತೀಯ ಬಹುಮಾನ, ₹5 ಸಾವಿರ ತೃತೀಯ ಬಹುಮಾನ, ₹300 ಸಾವಿರ ನಗದು ಬಹುಮಾನಗಳನ್ನು ನೀಡಲಾಗುವುದು. ಹಗಲು ಹಾಗೂ ಹೊನಲು ಬೆಳಕಿನಲ್ಲಿ ಪಂದ್ಯಾವಳಿಗಳು ನಡೆಯಲಿವೆ ಎಂದರು.

ಮಹಿಳಾ ಮತ್ತು ಪುರುಷ ವಿಭಾಗಗಳಿಗೆ ಪ್ರತ್ಯೇಕ 2 ಥ್ರೋಬಾಲ್‌ ಅಂಕಣದ ವ್ಯವಸ್ಥೆಯನ್ನು ಮಾಡಲಾಗಿದೆ. ಜಿಲ್ಲೆಯ 18 ವರ್ಷ ಮೇಲ್ಪಟ್ಟ ಕ್ರೀಡಾಪಟುಗಳನ್ನು ಒಳಗೊಂಡ ಜಿಲ್ಲೆಯ ಪುರಷ ಹಾಗೂ ಮಹಿಳಾ ತಂಡಗಳು ಪಂದ್ಯಾವಳಿಯಲ್ಲಿ ಭಾಗಹಿಸಬಹುದು ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ.ಎಸ್.ಶಶಿ, ರಾಮಚಂದ್ರಪ್ಪ ಎಚ್‌. ತಿಮ್ಮೇನಹಳ್ಳಿ, ಕೆ.ಜಿ.ಮಠಪತಿ, ಸೋಮಶೇಖರ್, ರಾಮೇಶ್ವರಿ ಮತ್ತಿತರರು ಇದ್ದರು.

- - -

ಕೋಟ್‌ಆಟಗಾರರ ಅನುಕೂಲಕ್ಕಾಗಿ ಉತ್ತಮ ಅಂಕಣವನ್ನು ಸಿದ್ದಪಡಿಸಲಾಗಿದೆ. ರಾಜ್ಯಮಟ್ಟದ ನುರಿತ ಥ್ರೋಬಾಲ್‌ ತೀರ್ಪುಗಾರರು ಆಗಮಿಸಲಿದ್ದಾರೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಬರುವ ಎಲ್ಲ ಕ್ರೀಡಾಪಟುಗಳಿಗೂ ಊಟದ ವ್ಯವಸ್ಥೆ ಮಾಡಲಾಗಿದೆ

- ಸಂತೋಷ್‌ ಬಳ್ಳೆಕೆರೆ, ಸಿಂಡಿಕೇಟ್‌ ಸದಸ್ಯ, ಕುವೆಂಪು ವಿವಿ

- - - (ಸಾಂದರ್ಭಿಕ ಚಿತ್ರ.)

-ಥ್ರೋಬಾಲ್‌.ಜೆಪಿಜಿ: