ಚಿಕ್ಕಮಗಳೂರುಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯಲಿರುವ ಹುಲಿ ಗಣತಿ ಕಾರ್ಯ ದೇಶದಲ್ಲಿ ಸೋಮವಾರ (ಜನವರಿ 5) ದಿಂದ ಆರಂಭಗೊಂಡಿದೆ.
ಭಾರತ ದೇಶದಲ್ಲಿ ಹುಲಿಗಳ ಸಂಖ್ಯೆ 3682 । ಕರ್ನಾಟಕದಲ್ಲಿ ಗಣತಿಗೆ 9276 ಸಿಬ್ಬಂದಿ ನಿಯೋಜನೆ । 2230 ಕ್ಯಾಮೆರಾ ಟ್ರ್ಯಾಪ್‌ಗಳ ಬಳಕೆ
ಆರ್.ತಾರಾನಾಥ್ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ಪ್ರತಿ ನಾಲ್ಕು ವರ್ಷಕ್ಕೊಮ್ಮೆ ನಡೆಯಲಿರುವ ಹುಲಿ ಗಣತಿ ಕಾರ್ಯ ದೇಶದಲ್ಲಿ ಸೋಮವಾರ (ಜನವರಿ 5) ದಿಂದ ಆರಂಭಗೊಂಡಿದೆ.ರಾಷ್ಟ್ರೀಯ ಹುಲಿ ಸ್ಥಿತಿಗತಿ ಮೌಲ್ಯಮಾಪನ ಈವರೆಗೆ ಐದು ಬಾರಿ ಅಂದರೆ, 2006 ರಿಂದ 2022 ರವರೆಗೆ ನಡೆದಿದೆ. ದೇಶದಲ್ಲಿ 2022ರ ಅಖಿಲ ಭಾರತ ಹುಲಿ ಗಣತಿ ವರದಿ ಪ್ರಕಾರ 3682 ಇದ್ದು, ವಿಶ್ವದ ಒಟ್ಟು ವನ್ಯ ಹುಲಿಗಳ ಸಂಖ್ಯೆಯಲ್ಲಿ ಶೇ. 70 ರಷ್ಟು ಭಾರತ ದೇಶದಲ್ಲಿವೆ. 2018ರ ಅವಧಿಯಲ್ಲಿ 524 ಹುಲಿಗಳೊಂದಿಗೆ ಕರ್ನಾಟಕ ಎರಡನೇ ಸ್ಥಾನದಲ್ಲಿತ್ತು.. ಪ್ರಸ್ತುತ, ಕರ್ನಾಟಕ 563 ಹುಲಿಗಳನ್ನು ಹೊಂದಿದ್ದು, ಮಧ್ಯಪ್ರದೇಶದ ನಂತರ ಭಾರತದಲ್ಲಿ ಎರಡನೇ ಅತಿದೊಡ್ಡ ವನ್ಯ ಹುಲಿಗಳ ಸಂಖ್ಯೆ ಹೊಂದಿದೆ.
ಸಮೀಕ್ಷೆ ಹೇಗೆ ?ಮಾಂಸಾಹಾರಿ ಪ್ರಾಣಿಗಳ ಕುರುಹುಗಳ ಸಮೀಕ್ಷೆಯನ್ನು ಪ್ರತಿದಿನ ಅರಣ್ಯ ರಸ್ತೆಗಳಲ್ಲಿ ಕಾಲು ಹಾದಿಗಳಲ್ಲಿ ಕನಿಷ್ಠ 5 ಕಿ.ಮೀ. ನಡೆಯುವ ಮೂಲಕ 3 ದಿನಗಳ ಕಾಲ ನಡೆಸಲಾಗುತ್ತದೆ. ಪರೋಕ್ಷ ಕುರುಹುಗಳ ಮೂಲಕ ಒಂದು ಪ್ರದೇಶದಲ್ಲಿ ಮಾಂಸಾ ಹಾರಿ ಪ್ರಾಣಿಗಳ ಉಪಸ್ಥಿತಿ ಪತ್ತೆ ಹಚ್ಚಲು ಮತ್ತು ದಾಖಲಿಸಲು ಈ ಸಮೀಕ್ಷೆ ನಡೆಸಲಾಗುತ್ತದೆ.
ಪ್ರಮುಖ ಮಾಂಸಾಹಾರಿಗಳಾದ ಹುಲಿ, ಚಿರತೆ, ಕಾಡುನಾಯಿ, ನರಿ, ತೋಳಗಳು ಮತ್ತು ಬೃಹತ್ ಸಸ್ಯಹಾರಿಗಳಾದ ಆನೆ ಮತ್ತು ಕಾಟಿಗಳ ಪರೋಕ್ಷ ಕುರುಹುಗಳನ್ನು ದಾಖಲಿಸಲಾಗುತ್ತದೆ. ರಾಜ್ಯದಲ್ಲಿ ಈ ಸಮೀಕ್ಷೆಯನ್ನು 54 ಅರಣ್ಯ ವಿಭಾಗ ಗಳಲ್ಲಿ (ವನ್ಯಜೀವಿ ಮತ್ತು ಪ್ರಾದೇಶಿಕ ಅರಣ್ಯ ವಿಭಾಗಗಳು ಎರಡೂ ಸೇರಿ) ಎರಡು ಹಂತಗಳಲ್ಲಿ ಆಯೋಜಿಸಲಾಗಿದೆ. ಜ. 5 ರಿಂದ 7 ರವರೆಗೆ 38 ಅರಣ್ಯ ವಿಭಾಗಗಳಲ್ಲಿ, ಜ. 15 ರಿಂದ 17 ರವರೆಗೆ 14 ಅರಣ್ಯ ವಿಭಾಗಗಳಲ್ಲಿ, ಜ. 27 ರಿಂದ 30 ರವರೆಗೆ 10 ಅರಣ್ಯ ವಿಭಾಗಗಳಲ್ಲಿ ನಡೆಸಲಾಗುತ್ತದೆ. ಫೆಬ್ರವರಿ 2 ರಿಂದ 5 ರವರೆಗೆ 7 ಅರಣ್ಯ ವಿಭಾಗಗಳಲ್ಲಿ ಸಮೀಕ್ಷೆ ನಡೆಯಲಿದ್ದು, ಈ ಕಾರ್ಯಕ್ಕಾಗಿ ಸುಮಾರು 9276 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.ಕ್ಯಾಮೆರಾ ಟ್ರ್ಯಾಪ್ ಬಳಕೆ:ಕ್ಯಾಮೆರಾ ಟ್ರಾಪ್‌ಗಳನ್ನು ಬಳಸಿ ಸಮೀಕ್ಷೆ ನಡೆಸಲಾಗುತ್ತಿದೆ. ಅರಣ್ಯ ಪ್ರದೇಶವನ್ನು 2x2 ಚದರ ಕಿ.ಮೀ. ವಿಸ್ತೀರ್ಣದಲ್ಲಿ ಹುಲಿಗಳ ಸಂಚಾರವಿರುವ ಹಾಗೂ ಅವುಗಳ ಛಾಯಾಚಿತ್ರ ಪಡೆಯಲು ಸಾಧ್ಯವಿರುವ ಅತ್ಯಂತ ಸೂಕ್ತವಾದ ಒಂದು ಸ್ಥಳ ವನ್ನು ನಿಗದಿಪಡಿಸಲಾಗುವುದು. ಮಾಂಸಾಹಾರಿ ಪ್ರಾಣಿಗಳ ಕುರುಹುಗಳ ಸಮೀಕ್ಷೆ ದತ್ತಾಂಶವನ್ನು ಬಳಸಿ ಅತ್ಯಂತ ಸೂಕ್ತ ವಾದ ಸ್ಥಳ ಗುರುತಿಸಲಾಗುವುದು ಮತ್ತು ರಸ್ತೆ/ಕಾಲು ಹಾದಿಯ ಎರಡೂ ಬದಿಗಳಲ್ಲಿ ತಲಾ ಒಂದು ಕ್ಯಾಮೆರಾದಂತೆ ಒಟ್ಟು 2 ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಕರ್ನಾಟಕದ 5 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಒಟ್ಟು 2230 ಕ್ಯಾಮೆರಾ ಟ್ರ್ಯಾಪ್‌ಗಳು ಕಾರ್ಯ ನಿರ್ವಹಿಸಲಿವೆ. ಮುಂದಿನ ಒಂದು ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳಲಿದೆ.--- ಬಾಕ್ಸ್ ---ಎಲ್ಲಲ್ಲಿ ಎಷ್ಟು ಕ್ಯಾಮೆರಾ ಟ್ರ್ಯಾಪ್‌ಗಳು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ - 600
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ - 550ಬಿ.ಆರ್.ಟಿ ಹುಲಿ ಸಂರಕ್ಷಿತ ಪ್ರದೇಶ - 300
ಭದ್ರಾ ಹುಲಿ ಸಂರಕ್ಷಿತ ಪ್ರದೇಶ - 330ಕಾಳಿ ಹುಲಿ ಸಂರಕ್ಷಿತ ಪ್ರದೇಶ - 450
----ಭಾರತ ದೇಶದಲ್ಲಿರುವ ಹುಲಿಗಳ ಸಂಖ್ಯೆ
--------------------------------------ವರ್ಷ ಹುಲಿಗಳ ಸಂಖ್ಯೆ
2006-14112010-1706
2014 - 22262018 -2967
2022-3682-----------------------------------ಕರ್ನಾಟಕದಲ್ಲಿರುವ ಹುಲಿಗಳ ಸಂಖ್ಯೆ
ವರ್ಷಹುಲಿಗಳ ಸಂಖ್ಯೆ------------------------------------2006 - 2902010-3002014 -4062018 -5242022-563
--