ಹುಲಿ ಹೆಜ್ಜೆ ಗುರುತು ಪತ್ತೆ; ಆತಂಕದಲ್ಲಿ ಚಿಕ್ಕರಂಗಶೆಟ್ಟಿ ದೊಡ್ಡಿ ಗ್ರಾಮಸ್ಥರು

| Published : Aug 25 2025, 01:00 AM IST

ಸಾರಾಂಶ

ಅರಣ್ಯದಂಚಿನ ರೈತರ ಜಮೀನುಗಳ ಬಳಿ ಸೋಲಾರ್ ಬೇಲಿ ಹಾಗೂ ಕಂದಕ ನಿರ್ಮಾಣ ಮಾಡುವ ಮೂಲಕ ಹುಲಿ ಗ್ರಾಮದ ಬಳಿ ಬರುವುದನ್ನು ತಪ್ಪಿಸಲು ಅರಣ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.

ಹನೂರು: ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮ ಅರಣ್ಯ ಪ್ರದೇಶಕ್ಕೆ ಸೇರಿದ ಚಿಕ್ಕರಂಗಶೆಟ್ಟಿ ದೊಡ್ಡಿ ಗ್ರಾಮದ ದೇವಾಲಯದ ಬಳಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದೆ. ಇದರಿಂದ ಗ್ರಾಮಸ್ಥರು ಹಾಗೂ ರೈತರು ಭಯದ ವಾತಾವರಣದಲ್ಲಿ ತಮ್ಮ ಜಮೀನಿಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಅರಣ್ಯದಂಚಿನ ರೈತರ ಜಮೀನುಗಳ ಬಳಿ ಸೋಲಾರ್ ಬೇಲಿ ಹಾಗೂ ಕಂದಕ ನಿರ್ಮಾಣ ಮಾಡುವ ಮೂಲಕ ಹುಲಿ ಗ್ರಾಮದ ಬಳಿ ಬರುವುದನ್ನು ತಪ್ಪಿಸಲು ಅರಣ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು. ಅರಣ್ಯದಂಚಿನಲ್ಲಿ ರೈತರು, ವಯಸ್ಸಾದವರು, ಮಕ್ಕಳು ಹಾಗೂ ದಿನನಿತ್ಯ ಸಂಚರಿಸುವ ನೂರಾರು ವಾಹನಗಳ ಸವಾರರು ಆತಂಕರಹಿತವಾಗಿ ಓಡಾಡಲು ಸೂಕ್ತ ರಕ್ಷಣೆ ನೀಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.