ಸಾರಾಂಶ
ಮಡಿಕೇರಿ: ಹುಲಿಯೊಂದು ಮರಿಗಳೊಂದಿಗೆ ಟೀ ಎಸ್ಟೇಟ್ ಒಳಗಡೆ ಪ್ರತ್ಯಕ್ಷವಾದ ಘಟನೆ ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನಲ್ಲಿ ನಡೆದಿದೆ.ಪೊನ್ನಂಪೇಟೆ ಬಿ. ಶೆಟ್ಟಿಗೇರಿಯ ವ್ಯಾಪ್ತಿಯಲ್ಲಿನ ಟಿ. ಎಸ್ಟೇಟ್ ನಲ್ಲಿ ಹುಲಿಯೊಂದು ಪ್ರತ್ಯಕ್ಷವಾಗಿದ್ದು, ತನ್ನ ನಾಲ್ಕು ಮರಿಗಳೊಂದಿಗೆ ಟಿ. ಎಸ್ಟೇಟಿಗೆ ನುಗ್ಗಿದ ಪ್ರಸಂಗ ಕಂಡುಬಂದಿದೆ. ರಸ್ತೆ ದಾಟಿ ಟಿ ಎಸ್ಟೇಟ್ ಒಳಗೆ ಹುಲಿ ಮರಿಗಳೊಂದಿಗೆ ಹೋಗುವುದನ್ನು ಸ್ಥಳೀಯರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಹುಲಿ ಮರಿಗಳೊಂದಿಗೆ ಪ್ರತ್ಯಕ್ಷವಾಗಿರುವುದನ್ನು ಕಂಡು ಆತಂಕಗೊಂಡಿರುವ ಸ್ಥಳೀಯರು ಕೂಡಲೇ ಕಾರ್ಯಾಚರಣೆ ನಡೆಸಿ ಹುಲಿ ಓಡಿಸುವಂತೆ ಇಲಾಖೆಗೆ ಆಗ್ರಹಿಸಿದ್ದಾರೆ.-----------------------------
ಕೊಡಗಿನಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಮಡಿಕೇರಿ : ಹೃದಯಾಘಾತದಿಂದ ಮಡಿಕೇರಿಯಲ್ಲಿ ವ್ಯಕ್ತಿ ಯೋರ್ವರು ಸಾವನ್ನಪ್ಪಿರುವ ಘಟನೆ ನಡೆದಿದೆ.ಮಡಿಕೇರಿ ನಗರದ ಅಬ್ದುಲ್ ಕಲಾಂ ಲೇಔಟ್ ನಿವಾಸಿಯಾದ ಮಹಮ್ಮದ್ ರಫೀಕ್ (50) ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿ.ನಿನ್ನೆ ತಡರಾತ್ರಿ ಮನೆಯಲ್ಲಿರುವಾಗಲೇ ಹೃದಯಾಘಾತವಾಗಿದ್ದು, ಕೂಡಲೇ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ರಫೀಕ್ ಕೊನೆಯುಸಿರೆಳೆದಿದ್ದಾರೆ.