ವಿಪ್ರ ಸಂಸ್ಥೆಗಳ ನೆರವಿಗೆ ಬ್ರಾಹ್ಮಣ ಸಮಾಜ ಒಟ್ಟಾಗಿ ನಿಲ್ಲಲಿ: ಡಾ.ಮೀನಾ ಚಂದಾವರಕರ

| Published : Jul 29 2025, 01:52 AM IST

ವಿಪ್ರ ಸಂಸ್ಥೆಗಳ ನೆರವಿಗೆ ಬ್ರಾಹ್ಮಣ ಸಮಾಜ ಒಟ್ಟಾಗಿ ನಿಲ್ಲಲಿ: ಡಾ.ಮೀನಾ ಚಂದಾವರಕರ
Share this Article
  • FB
  • TW
  • Linkdin
  • Email

ಸಾರಾಂಶ

ದಿಟ್ಟ ಗುರಿ ಮತ್ತು ಒಗ್ಗಟ್ಟಿನೊಂದಿಗೆ ಬ್ರಾಹ್ಮಣ ಸಮುದಾಯದ ಸಂಸ್ಥೆಗಳನ್ನು ಗಟ್ಟಿಯಾಗಿ ಕಟ್ಟುವ ಕೆಲಸವಾಗಬೇಕಿದೆ ಎಂದು ವಿಜಯಪುರ ಮಹಿಳಾ ವಿವಿ ವಿಶ್ರಾಂತ ಕುಲಪತಿ ಡಾ.ಮೀನಾ ಚಂದಾವರಕರ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ದಿಟ್ಟ ಗುರಿ ಮತ್ತು ಒಗ್ಗಟ್ಟಿನೊಂದಿಗೆ ಬ್ರಾಹ್ಮಣ ಸಮುದಾಯದ ಸಂಸ್ಥೆಗಳನ್ನು ಗಟ್ಟಿಯಾಗಿ ಕಟ್ಟುವ ಕೆಲಸವಾಗಬೇಕಿದೆ ಎಂದು ವಿಜಯಪುರ ಮಹಿಳಾ ವಿವಿ ವಿಶ್ರಾಂತ ಕುಲಪತಿ ಡಾ.ಮೀನಾ ಚಂದಾವರಕರ ಹೇಳಿದರು.

ನಗರದ ವಿದ್ಯಾಪ್ರಸಾರಕ ಮಂಡಳದ ಶಂಕ್ರಪ್ಪ ಸಕ್ರಿ ಹೈಸ್ಕೂಲಿನ ಸರಳಾಬಾಯಿ ಭಾಗವತ ಸಭಾಂಗಣದಲ್ಲಿ ಭಾನುವಾರ ಬಾಗಲಕೋಟೆ ಜಿಲ್ಲಾ ಬ್ರಾಹ್ಮಣ ಸಮಾಜದಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ, ಯಾವುದೇ ರ್‍ಯಾಂಕ್ ವಿಜೇತರನ್ನು ನೋಡಿದರೆ ಅವರು ಸಕ್ರಿ ಹೈಸ್ಕೂಲಿನ ವಿದ್ಯಾರ್ಥಿಗಳಾಗಿರುತ್ತಿದ್ದರು. ಈ ಸಂಸ್ಥೆ ನಾಡಿಗೆ ಅನೇಕ ಸಾಧಕರನ್ನು ಪರಿಚಯಿಸಿದೆ. ಸಂಸ್ಥೆ ಬೆಳವಣಿಗೆ ಹಿಂದೆ ಸಾಕಷ್ಟು ಜನರ ಶ್ರಮವಿದೆ. ಇಂಥ ಸಂಸ್ಥೆಗೆ ಮರಳಿ ವೈಭವ ನೀಡುವ ಕೆಲಸವಾಗಬೇಕಿದೆ ಎಂದು ಆಶಿಸಿದರು.ಕಡಿವಾಲ, ಎಸ್.ಟಿ. ಪುರಾಣಿಕ, ಎನ್.ಟಿ. ಪುರಾಣಿಕ, ಗಂಗಾವತಿ ಅವರಿಂದ ಹಿಡಿದು ಧಾರವಾಡಕರ, ಕೆ.ಎಸ್. ದೇಶಪಾಂಡೆ, ಸತ್ಯನಾರಾಯಣ, ಶಿರೂರ ಸೇರಿ ಅನೇಕರು ಸಂಸ್ಥೆ ಬೆಳವಣಿಗೆಗೆ ಸಾಕ್ಷಿಯಾಗಿದ್ದಾರೆ. ಈಗ ಶ್ರೀಲತಾ ಹೆರೆಂಜಲ್, ಡಾ.ಗಿರೀಶ ಮಸೂರಕ ನೇತೃತ್ವದಲ್ಲಿ ಸಂಸ್ಥೆ ಮುನ್ನಡೆಯುತ್ತಿದ್ದು, ಸಾಕಷ್ಟು ಬದಲಾವಣೆ ಕಂಡು ಬರುತ್ತಿದೆ. ಇದು ಮತ್ತಷ್ಟು ಎತ್ತರಕ್ಕೆ ಬೆಳೆಯಬೇಕು. ಅದಕ್ಕೆ ಸಮಾಜ ಒಟ್ಟಾಗಿ ಸಂಸ್ಥೆ ಜತೆಗೆ ನಿಲ್ಲಬೇಕು. ಪ್ರಾಮಾಣಿಕ ಸೇವೆ ಮತ್ತು ಒಗ್ಗಟ್ಟು ಇದ್ದಲ್ಲಿ ಸಂಸ್ಥೆ ಸುಲಭವಾಗಿಯೇ ಬೆಳೆಯುತ್ತದೆ. ಅದನ್ನು ಅರಿತು ಸಮಾಜ ಸಂಸ್ಥೆಯೊಂದಿಗೆ ನಿಲ್ಲಬೇಕೆಂದು ಕರೆ ನೀಡಿದರು.ಪಂ.ಭೀಮಸೇನಾಚಾರ್ಯ ಪಾಂಡುರಂಗಿ ಮಾತನಾಡಿ, ಎಲ್ಲ ಸಮಾಗಳೊಂದಿಗೆ ಬ್ರಾಹ್ಮಣ ಸಮುದಾಯ ಅವಿನಾಭಾವ ಸಂಬಂಧ ಹೊಂದಿದೆ. ಹಿಂದೂ ಧರ್ಮದ ಆಚರಣೆಗಳನ್ನು ಶ್ರದ್ಧಾ ಭಕ್ತಿಯಿಂದ ಮಾಡಿಕೊಂಡು ಬರುತ್ತಿದೆ. ದಿ.ಕೆ.ಎಸ್. ದೇಶಪಾಂಡೆ, ದಿ.ರಾಮ ಮನಗೂಳಿ ಸಮಾಜದ ಆಧಾರ ಸ್ತಂಭಗಳಾಗಿದ್ದರು. ಅವರ ಸೇವೆಯನ್ನು ಸಮಾಜ ನೆನೆಯುತ್ತದೆ. ಡಾ.ಗಿರೀಶ ಮಸೂರಕರ, ನರಸಿಂಹ ಆಲೂರ ಅವರು ಸಮಾಜದ ನೇತೃತ್ವ ವಹಿಸಿಕೊಂಡು ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಸಮಾಜ ಸಂಘಟನೆ ಕೆಲಸ ನಿರಂತರವಾಗಿ ನಡೆಯಲಿ ಎಂದು ಹೇಳಿದರು.

ಪಂ.ರಘೋತ್ತಮಾಚಾರ್ಯ ನಾಗಸಂಪಿಗೆ ಮಾತನಾಡಿ, ಬ್ರಾಹ್ಮಣರು ಎಂದು ಹೇಳಿಕೊಳ್ಳಲು ಹಿಂಜರಿಯಬಾರದು. ನಾವು ಹಿಂದೂ ಎಂಬುದನ್ನು ಹೆಮ್ಮೆಯಿಂದ ಹೇಳಿಕೊಂಡಷ್ಟೇ ಬ್ರಾಹ್ಮಣ ಎಂಬುದನ್ನೂ ಹೆಮ್ಮೆಯಿಂದ ಹೇಳಿಕೊಳ್ಳಬೇಕು. ಮನೆಯಲ್ಲಿ ಮಕ್ಕಳಿಗೆ ಸಮಾಜದ ಸಂಸ್ಕಾರ ನೀಡಬೇಕೆಂದು ಸಲಹೆ ಮಾಡಿದರು.

ಹುಬ್ಬಳ್ಳಿಯ ಉದ್ಯಮಿ ಜಯತೀರ್ಥ ಕಟ್ಟಿ ಮಾತನಾಡಿ, ಸಕ್ರಿ ಹೈಸ್ಕೂಲಿನ ದಿನಗಳನ್ನು ಮೆಲಕು ಹಾಕಿದರು. ಬ್ರಾಹ್ಮಣ ಸಮುದಾಯಕ್ಕೆ ಅವಕಾಶಗಳು ಇಲ್ಲದಿದ್ದರೂ ಸ್ವಯಂಪ್ರತಿಭೆಯಿಂದಲೇ ಎಲ್ಲ ಕ್ಷೇತ್ರಗಳಲ್ಲಿ ಮಿಂಚುತ್ತಿದ್ದಾರೆ ಎಂದರು.

ವಿದ್ಯಾಪ್ರಸಾರಕ ಮಂಡಳದ ಕಾರ್ಯಾಧ್ಯಕ್ಷೆ ಶ್ರೀಲತಾ ಹೆರೆಂಜಲ, ಗೌರವ ಕಾರ್ಯದರ್ಶಿ ಡಾ.ಗಿರೀಶ ಮಸೂರಕರ, ನಗರಸಭೆ ಉಪಾಧ್ಯಕ್ಷೆ ಶೋಭಾ ರಾವ್, ಹಿರಿಯರಾದ ಟಿ.ಎಚ್.ಕುಲಕರ್ಣಿ, ಶ್ರೀಹರೀಂದ್ರ ಪಾಟೀಲ, ಬ್ರಾಹ್ಮಣ ಸಮಾಜದ ಜಿಲ್ಲಾಧ್ಯಕ್ಷ ನರಸಿಂಹ ಆಲೂರ, ಮಹಿಳಾ ಘಟಕದ ಅಧ್ಯಕ್ಷೆ ಶುಭದಾ ದೇಶಪಾಂಡೆ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಎನ್.ಆರ್.ಕುಲಕರ್ಣಿ, ಜಿಲ್ಲಾ ಉಪಾಧ್ಯಕ್ಷರಾದ ಅಡವೀಂದ್ರ ಇನಾಂದಾರ, ಸತೀಶ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ, ಹುನಗುಂದ ಘಟಕದ ಅಧ್ಯಕ್ಷ ಪ್ರಶಾಂತ ದೇಸಾಯಿ ಮತ್ತಿತರರು ವೇದಿಕೆಯಲ್ಲಿದ್ದರು.

ಎಸ್.ಕೆ. ಕುಲಕರ್ಣಿ, ವಿನಾಯಕ ತಾಳಿಕೋಟಿ, ಸಂತೋಷ ಗದ್ದನಕೇರಿ, ಗಿರೀಶ ಆಶ್ರೀತ, ಕೆ.ವಿಜಯಕುಮಾರ, ರಾಘವೇಂದ್ರ ಗುಮಾಸ್ತೆ, ಕೇಶವ ಕುಲಕರ್ಣಿ, ನರಸಿಂಹ ಮನಗೂಳಿ ವ ಮುಧೋಳದ ಅಣ್ಣಾರಾವ್ ಕುಲಕರ್ಣಿ, ಪ್ರಸನ್ನ ಚಾಟೆ ಮತ್ತಿತರರು ನೇತೃತ್ವ ವಹಿಸಿದ್ದರು.

ಸರ್ವೇ ಜನ ಸುಖಿನೋ ಭವಂತು ಎಂದು ಸಕಲ ಸಮಾಜಗಳ ಹಿತ ಬಯಸಿದವರು ಬ್ರಾಹ್ಮಣರು. ಶಂಕರಾಚಾರ್ಯರು, ರಾಮಾನುಜಾಚಾರ್ಯರು, ಮಧ್ವಾಚಾರ್ಯರು ಇಡೀ ಮನಕುಲದ ಒಳಿತಿಗಾಗಿ ಶ್ರಮಿಸಿದ್ದಾರೆ. ಮುಂದೆ ಟೀಕಾರಾಯರು, ವಾದಿರಾಜರು, ಪ್ರಹ್ಲಾದರಾಯರು, ಮಂತ್ರಾಲಯ ರಾಘವೇಂದ್ರ ಸ್ವಾಮಿಗಳವರೆಗೆ ಎಲ್ಲರೂ ಮನಕುಲಕ್ಕೆ ಕೊಡುಗೆ ನೀಡಿದವರಾಗಿದ್ದಾರೆ. ಭಾರತದ ಸ್ವಾತಂತ್ರ್ಯ ಚಳವಳಿಯಲ್ಲೂ ಅನೇಕ ಬ್ರಾಹ್ಮಣರು ನೇತೃತ್ವವಹಿಸಿ ಪ್ರಾಣತ್ಯಾಗ ಮಾಡಿದ್ದಾರೆ. ನಮಗೆ ಸಮಾಜದ ಬಗ್ಗೆ ಹೆಮ್ಮೆಯಿಂದ ಇರಬೇಕು.

- ಡಾ.ಮೀನಾ ಚಂದಾವರಕರ ವಿಜಯಪುರ ಮಹಿಳಾ ವಿವಿ ವಿಶ್ರಾಂತ ಕುಲಪತಿ