ಸಾರಾಂಶ
ಗುಂಡ್ಲುಪೇಟೆ-ಶಿವಪುರ ರಸ್ತೆಯ ಕೋಡಹಳ್ಳಿ ಮಹದೇಶ್ವರ ದೇವಸ್ಥಾನ ಬಳಿ ಹುಲಿ ಹಾದು ಹೋಗುವಾಗ ಗೂಡ್ಸ್ ಆಟೋದ ಲೈಟ್ ಬೆಳಕಿನ ನಡುವೆ ರಸ್ತೆ ದಾಟಿದೆ, ಆಟೋದಲ್ಲಿದ್ದವರು ಕೆಲ ಕಾಲ ಅವಕ್ಕಾಗಿದ್ದಾರೆ.
ಗುಂಡ್ಲುಪೇಟೆ:
ತಾಲೂಕಿನ ಕೋಡಹಳ್ಳಿ ಗ್ರಾಮದ ಬಳಿಯ ಕೋಡಹಳ್ಳಿ ಮಹದೇಶ್ವರ ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ ಹುಲಿಯೊಂದು ಕಳೆದ ಗುರುವಾರ ರಾತ್ರಿ ಹಾದು ಹೋಗಿದೆ.ಗುಂಡ್ಲುಪೇಟೆ-ಶಿವಪುರ ರಸ್ತೆಯ ಕೋಡಹಳ್ಳಿ ಮಹದೇಶ್ವರ ದೇವಸ್ಥಾನ ಬಳಿ ಹುಲಿ ಹಾದು ಹೋಗುವಾಗ ಗೂಡ್ಸ್ ಆಟೋದ ಲೈಟ್ ಬೆಳಕಿನ ನಡುವೆ ರಸ್ತೆ ದಾಟಿದೆ, ಆಟೋದಲ್ಲಿದ್ದವರು ಕೆಲ ಕಾಲ ಅವಕ್ಕಾಗಿದ್ದಾರೆ. ಹುಲಿ ರಸ್ತೆ ದಾಟುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ರಸ್ತೆಯಲ್ಲಿ ಸಂಚರಿಸುವ ಜನರು ಭಯ ಬೀತರಾಗಿದ್ದಾರೆ ಎಂದು ಗ್ರಾಮಸ್ಥರು ಹೇಳಿಕೊಂಡಿದ್ದಾರೆ.
ಗುಂಡ್ಲುಪೇಟೆ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಸುರೇಶ್ ಮಾತನಾಡಿ, ಕೋಡಹಳ್ಳಿ ಮಹದೇಶ್ವರ ದೇವಸ್ಥಾನದ ಬಳಿ ಹುಲಿ ಹಾದು ಹೋಗಿದೆ. ಹುಲಿ ರಸ್ತೆ ದಾಟಿ ಹೋದ ಹಿನ್ನಲೆ ಅರಣ್ಯ ಸಿಬ್ಬಂದಿ ಸ್ಥಳಕ್ಕಾಗಮಿಸಿ ಕೂಂಬಿಂಗ್ ನಡೆಸಿದ್ದಾರೆ ಎಂದು ಸ್ಪಷ್ಟಪಡಿಸಿದರು.-------------
12ಜಿಪಿಟಿ9ಗುಂಡ್ಲುಪೇಟೆ-ಶಿವಪುರ ರಸ್ತೆಯ ಕೋಡಹಳ್ಳಿ ಮಹದೇಶ್ವರ ದೇವಸ್ಥಾನದ ಬಳಿ ಹುಲಿ ರಸ್ತೆ ದಾಟುವ ದೃಶ್ಯ.
---------