2023ರ ಚುನಾವಣೆಯ ಎಲ್ಲಾ 12 ಅಭ್ಯರ್ಥಿಗಳಿಗೆ ನೋಟಿಸ್ ।
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಎಣಿಕೆಗೆ ಮುಹೂರ್ತ ನಿಗದಿಯಾಗಿದ್ದು, ಮೇ 2 ರಂದು ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ಎಣಿಕೆ ಕಾರ್ಯ ನಡೆಯಲಿದೆ.
ಈ ಸಂಬಂಧ ಶೃಂಗೇರಿ ವಿಧಾನಸಭಾ ಕ್ಷೇತ್ರದ 2023ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಎಲ್ಲಾ 12 ಅಭ್ಯರ್ಥಿಗಳಿಗೆ ಈಗಾಗಲೇ ಚುನಾವಣೆ ವಿಭಾಗದಿಂದ ನೋಟಿಸ್ ಜಾರಿಗೊಳಿಸಲಾಗಿದೆ. ಇನ್ನು ಚುನಾವಣಾಧಿಕಾರಿಯಾಗಿ ಜಿಲ್ಲಾ ಪಂಚಾಯಿತಿ (ಆಡಳಿತ) ಉಪ ಕಾರ್ಯದರ್ಶಿ ಗೌರವ ಕುಮಾರ್ ಶೆಟ್ಟಿ ಅವರನ್ನು ನೇಮಕ ಮಾಡಿ ಆದೇಶಿಸಲಾಗಿದೆ. ಮತ ಎಣಿಕೆಗೆ ಬೇಕಾದ ಸಿದ್ಧತೆ ಮಾಡಿಕೊಳ್ಳುತ್ತಿರುವ ಚುನಾವಣಾ ವಿಭಾಗದ ಅಧಿಕಾರಿಗಳು. ಮೇ 2 ರಂದು ಬೆಳಗ್ಗೆ 9ಕ್ಕೆ ಮತ ಎಣಿಕೆ ಕಾರ್ಯ ಆರಂಭಿಸಲು ತೀರ್ಮಾನಿಸಲಾಗಿದೆ.ಮತ ಎಣಿಕೆ ಕಾರ್ಯಕ್ಕೆ ಒಟ್ಟು ನಾಲ್ವರು ಎಆರ್‌ಓ ನೇಮಕ ಮಾಡಲಾಗಿದೆ. ಮತ ಎಣಿಕೆ ಮತ್ತು ಮೇಲ್ವಿಚಾರಣೆ ಕಾರ್ಯಕ್ಕೆ ಮೂವರು ಅಧಿಕಾರಿಗಳು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಸಿಸಿಟಿವಿ ಕ್ಯಾಮರಾ ಕಣ್ಗಾವಲಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.
ಏನಿದು ಪ್ರಕರಣ
2023ರಲ್ಲಿ ನಡೆದ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಚಲಾವಣೆಯಾಗಿರುವ 1811 ಅಂಚೆ ಮತಗಳ ಪೈಕಿ ತಿರಸ್ಕೃತಗೊಂಡ 279 ಅಂಚೆ ಮತಗಳನ್ನು ಮರು ಪರಿಶೀಲಿಸಿ ನಂತರ ಎಲ್ಲ ಅಂಚೆ ಮತಗಳನ್ನು ಎಣಿಕೆ ಮಾಡಿ ಹೊಸದಾಗಿ ಫಲಿತಾಂಶ ಪ್ರಕಟಿಸಬೇಕು ಎಂದು ಹೈಕೋರ್ಟ್ ಕಳೆದ ಏ.6 ರಂದು ಆದೇಶಿಸಿತ್ತು.
ಶಾಸಕ ರಾಜೇಗೌಡ ಮನವಿ ಮೇರೆಗೆ ಆಕ್ಷೇಪಣೆ ಸಲ್ಲಿಸುವುದಕ್ಕೆ ಎರಡು ವಾರ ಅವಕಾಶ ನೀಡಿತ್ತು. ಆಕ್ಷೇಪಣೆ ಸಲ್ಲಿಸುವ ಅವಧಿ ಏ.20ಕ್ಕೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಇದೀಗ ಜಿಲ್ಲಾ ಚುನಾವಣಾಧಿಕಾರಿ ಕ್ರಮ ಕೈಗೊಂಡಿದ್ದಾರೆ.ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಒಟ್ಟು 1811 ಅಂಚೆ ಮತ ಚಲಾವಣೆ ಆಗಿದ್ದವು. ಈ ಪೈಕಿ 201 ಮತದಿಂದ ಕಾಂಗ್ರೆಸ್‌ನ ರಾಜೇಗೌಡ ಗೆಲುವು ಸಾಧಿಸಿದ್ದರು. ಪರಾಜಿತಗೊಂಡ ಬಿಜೆಪಿ ಅಭ್ಯರ್ಥಿ ಜೀವರಾಜ್ ಮತ ಎಣಿಕೆ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದರು.
-- ಬಾಕ್ಸ್ --ಮೊದಲ ಬಾರಿ ಅಂಚೆ ಮತ ಎಣಿಕೆ?
ಜಿಲ್ಲೆಯಲ್ಲಿ ಕಳೆದ ಎರಡು ದಶಕದಿಂದ ಇದೇ ಮೊದಲ ಬಾರಿಗೆ ಮತ ಮರು ಎಣಿಕೆ ಕಾರ್ಯವನ್ನು ಮೇ 2 ರಂದು ನಡೆಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅದರಲ್ಲೂ ಅಂಚೆ ಮತಗಳ ಮರು ಎಣಿಕೆ ಮೊದಲ ಬಾರಿಗೆ ನಡೆಸ ಲಾಗುತ್ತಿದೆ. ಹಾಗಾಗಿ, ಸಿದ್ಧತೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ನಿಗಾ ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.12 ಅಭ್ಯರ್ಥಿಗಳಿಗೂ ನೋಟಿಸ್ :ಶೃಂಗೇರಿ ವಿಧಾನಸಭಾ ಕ್ಷೇತ್ರದ 2023ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ ಎಲ್ಲ 11 ಅಭ್ಯರ್ಥಿಗಳಿಗೆ ಅಂಚೆ ಮತ ಎಣಿಕೆ ನಡೆಯುವ ದಿನ ಆಗಮಿಸುವಂತೆ ನೋಟಿಸ್ ನೀಡಲಾಗಿದೆ.
ಕಾಂಗ್ರೆಸ್ ನಿಂದ ಟಿ.ಡಿ.ರಾಜೇಗೌ (201 ಮತದಿಂದ ಗೆಲುವು), ಬಿಜೆಪಿಯಿಂದ ಡಿ.ಎನ್.ಜೀವರಾಜ್ (ಪರಾಜಿತ), ಜೆಡಿಎಸ್‌ನಿಂದ ಸುಧಾಕರ ಎಸ್. ಶೆಟ್ಟಿ, ಆಮ್ ಆದ್ಮಿ ಪಾರ್ಟಿಯಿಂದ ರಾಜಾನ್ ಗೌಡ ಎಚ್.ಎಸ್. ಬಿಎಸ್.ಪಿಯಿಂದ ಕೆ.ಎಂ. ಗೋಪಾಲ್, ಸ್ವತಂತ್ರ ಅಭ್ಯರ್ಥಿಗಳಾದ ನಾರಾಯಣ, ಉಮೇಶ್ ಬಿ.ಎ, ಅಬ್ರಾಂ, ಭಾರತಿ, ಹಿಲಿಯಾಜ್ ಅಹ್ಮದ್, ಎಂ.ಕೆ.ದಯಾನಂದ ಮಾವಿನಕೆರೆ ಹಾಗೂ ಕೆ.ಆರ್. ಕುಸುಮಾ ಸ್ಪರ್ಧೆ ಮಾಡಿದ್ದರು.--- ಬಾಕ್ಸ್ ----ಮತ ಎಣಿಕೆ ಹೇಗೆ ನಡೆಯಲಿದೆ
ಮೇ 2 ರಂದು ಬೆಳಗ್ಗೆ 9ಕ್ಕೆ ಅಂಚೆ ಮತ ಎಣಿಕೆ ಕಾರ್ಯ ಆರಂಭಗೊಳ್ಳಲಿದೆ. ಮೊದಲು ತಿರಸ್ಕೃತಗೊಂಡ 279 ಅಂಚೆ ಮತ ಗಳನ್ನು ಮೊದಲು ಪರಿಶೀಲನೆ ನಡೆಸಲಾಗುತ್ತದೆ. ಆ ಬಳಿಕ ಎಲ್ಲ ಅಂಚೆ ಮತಗಳನ್ನು ಎಣಿಕೆ ಮಾಡಿ ಫಲಿತಾಂಶ ಪ್ರಕಟಿಸಲಾಗುತ್ತದೆ.- ಕೋಟ್ --ಶೃಂಗೇರಿ ವಿಧಾನಸಭಾ ಕ್ಷೇತ್ರ ಅಂಚೆ ಮತ ಎಣಿಕೆಗೆ ಸಂಬಂಧಿಸಿದಂತೆ ಎಲ್ಲ ಸಿದ್ಧತೆ ಆಗಿದೆ. ಸಾಮಾನ್ಯವಾಗಿ ಅಂಚೆ ಮತ ಏಣಿಕೆ ಸಂದರ್ಭದಲ್ಲಿ ಅನುಸರಿಸುವ ಮಾರ್ಗಸೂಚಿಯನ್ನು ಮರು ಎಣಿಕೆ ವೇಳೆಯೂ ಪಾಲನೆ ಮಾಡಲಾಗುವುದು. ಎನ್.ಎಂ. ನಾಗರಾಜ್, ಜಿಲ್ಲಾಧಿಕಾರಿ, ಚಿಕ್ಕಮಗಳೂರು
( ಫೋಟೋ ಬಳಸಿ)ಸೂಕ್ತ ಫೋಟೋ ಬಳಕೆ ಮಾಡಿಕೊಳ್ಳಿ