ಆಲೂರಿನ ರಾಧಮ್ಮ ಜನಸ್ಪಂದನ ವೇದಿಕೆ ವತಿಯಿಂದ ಐದನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಂಘಟನೆಯಲ್ಲಿ, ಒಗ್ಗಟ್ಟು ಇದ್ದಾಗ ಸಮಾಜಮುಖಿ ಕೆಲಸ ಮಾಡಬಹುದು. ಹೇಮಂತ್ ಕುಮಾರ್ ತಮ್ಮ ತಾಯಿ ದಿ. ರಾಧಮ್ಮ ಹೆಸರಿನಲ್ಲಿ ಸಾಮಾಜಿಕ ಕಾರ್ಯ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುತ್ತಿರುವುದು ಶ್ಲಾಘನೀಯ ಎಂದರು. ಶಾಸಕ ಸಿಮೆಂಟ್ ಮಂಜು ಮಾತನಾಡಿ, ಈಗಿನ ಕಾಲದಲ್ಲಿ ಯಾವುದೆ ಫಲಾಪೇಕ್ಷೆ ಇಲ್ಲದೆ ಇಂತಹ ಕೆಲಸ ಮಾಡುವವರು ವಿರಳ. ಜನಸ್ಪಂದನ ವೇದಿಕೆ ವತಿಯಿಂದ ಹಲವು ಜನೋಪಯೋಗಿ ಕೆಲಸಗಳನ್ನು ಮಾಡುತ್ತಿರುವುದು ಸಂತಸವಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಆಲೂರುಸಮಯ ಪ್ರಜ್ಞೆ ಮತ್ತು ನೈತಿಕತೆ ಬದುಕಿನ ಗುರಿ ತಲುಪಲು ರಹದಾರಿ ಎಂದು ವಿಧಾನ ಪರಿಷತ್ ಉಪಸಭಾಪತಿ ಎಂ. ಕೆ. ಪ್ರಾಣೇಶ್ ತಿಳಿಸಿದರು.ಆಲೂರಿನ ರಾಧಮ್ಮ ಜನಸ್ಪಂದನ ವೇದಿಕೆ ವತಿಯಿಂದ ಐದನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಸಂಘಟನೆಯಲ್ಲಿ, ಒಗ್ಗಟ್ಟು ಇದ್ದಾಗ ಸಮಾಜಮುಖಿ ಕೆಲಸ ಮಾಡಬಹುದು. ಹೇಮಂತ್ ಕುಮಾರ್ ತಮ್ಮ ತಾಯಿ ದಿ. ರಾಧಮ್ಮ ಹೆಸರಿನಲ್ಲಿ ಸಾಮಾಜಿಕ ಕಾರ್ಯ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡುತ್ತಿರುವುದು ಶ್ಲಾಘನೀಯ ಎಂದರು. ಶಾಸಕ ಸಿಮೆಂಟ್ ಮಂಜು ಮಾತನಾಡಿ, ಈಗಿನ ಕಾಲದಲ್ಲಿ ಯಾವುದೆ ಫಲಾಪೇಕ್ಷೆ ಇಲ್ಲದೆ ಇಂತಹ ಕೆಲಸ ಮಾಡುವವರು ವಿರಳ. ಜನಸ್ಪಂದನ ವೇದಿಕೆ ವತಿಯಿಂದ ಹಲವು ಜನೋಪಯೋಗಿ ಕೆಲಸಗಳನ್ನು ಮಾಡುತ್ತಿರುವುದು ಸಂತಸವಾಗಿದೆ ಎಂದರು.ಬೇಲೂರು ಶಾಸಕ ಎಚ್. ಕೆ. ಸುರೇಶ್, ಆರೋಗ್ಯ ರಕ್ಷಾ ಸದಸ್ಯತ್ವಕ್ಕೆ ಚಾಲನೆ ನೀಡಿದರು. ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಶಾಸಕ ಎ. ಟಿ. ರಾಮಸ್ವಾಮಿ ಮಾತನಾಡಿ, ಮಕ್ಕಳಿಗೆ ವಿದ್ಯೆ ಜೊತೆ ಸಂಸ್ಕಾರ ಕಲಿಸದಿದ್ದರೆ ಬದುಕಿನ ತಾಳ, ಮೇಳ ತಪ್ಪುತ್ತದೆ ಎಂದು ಎಚ್ಚರಿಸಿದರು. ಭಾರತ ತ್ಯಾಗ, ಬಲಿದಾನದಿಂದ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಹೋರಾಟ ನಡೆಸಿ ಗಳಿಸಿದ ಸ್ವಾತಂತ್ರ್ಯವನ್ನು ಇಂದು "ಈಟ್ ಇಂಡಿಯಾ ಕಂಪನಿಯವರು ಆಳುತ್ತಿದ್ದಾರೆ " ಎಂದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಮಾತನಾಡಿ, ಕೂಡು ಕುಟುಂಬ ವಿಭಜನೆ ಆಗಿದೆ. ಕೆರೆಕಟ್ಟೆಗಳು ಒತ್ತುವರಿ ಆಗಿವೆ ಎಂದು ಬೇಸರ ವ್ಯಕ್ತಪಡಿಸಿದರು. ಮನುಷ್ಯ ರಾತ್ರೋರಾತ್ರಿ ಶ್ರೀಮಂತರಾಗಬೇಕು. ತಮ್ಮ ಮಕ್ಕಳನ್ನು ವೈದ್ಯರು, ಎಂಜಿನಿಯರ್ ಮಾಡಬೇಕು ಎಂಬ ಚಿಂತನೆ ಹೊರತಾಗಿ, ಸುಸಂಸ್ಕೃತ ಮಕ್ಕಳನ್ನಾಗಿ ಮಾಡಬೇಕು ಎಂಬ ಚಿಂತನೆ ಕಡಿಮೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಒಕ್ಕಲಿಗರ ಸಂಘದ ನಿರ್ದೇಶಕ ಬಾಗೂರು ಮಂಜೇಗೌಡ ಮಾತನಾಡಿ, ಮಕ್ಕಳ ಅಭಿರುಚಿಗೆ ತಕ್ಕಂತೆ ಶಿಕ್ಷಣ ಕೊಡಿಸಬೇಕು. ವಿದೇಶಿ ವ್ಯಾಮೋಹದಿಂದ ಮಕ್ಕಳು ಖಿನ್ನತೆಗೆ ಒಳಗಾಗುತ್ತಿದ್ದಾರೆ ಎಂದರು. ಜಿಪಂ ನಿವೃತ್ತ ಸಿಇಒ ಬಿ. ಎ. ಪರಮೇಶ್ ರವರು ಮಾತನಾಡಿ, ಹೇಮಂತ ಕುಮಾರ್ ಏನನ್ನೂ ಬಯಸದೆ ಹೆಣ್ಣು ಮಕ್ಕಳಿಗೆ ಗರ್ಭಕೊರಳು ಕ್ಯಾನ್ಸರ್ ತಡೆಯುವ ಲಸಿಕೆಯನ್ನು ಉಚಿತವಾಗಿ ಕೊಡುತ್ತಿರುವುದಲ್ಲದೆ, ವಿದ್ಯಾರ್ಥಿಗಳಿಗೆ ಪ್ರತಿಬಾ ಪುರಸ್ಕಾರ ಮಾಡುತ್ತಿರುವುದು ಶ್ಲಾಘನೀಯ ಎಂದರು. ರಾಧಮ್ಮ ಜನಸ್ಪಂದನ ಅಧ್ಯಕ್ಷ ಹೇಮಂತಕುಮಾರ್, ಐದು ವರ್ಷದಿಂದ ವೇದಿಕೆ ವತಿಯಿಂದ ಮಾಡಿದ ಕಾರ್ಯಗಳ ಬಗ್ಗೆ ಗಮನ ಸೆಳೆದರು. ಸಮಾರಂಭದಲ್ಲಿ ವಕೀಲ ವಿಜಯಕುಮಾರ್, ಡಾ.ಸಾವಿತ್ರಿ, ಡಾ. ಪ್ರೇಮಲತಾ, ಜಿ. ಪ್ರಕಾಶ್, ನಾಯಕರಹಳ್ಳಿ ಮಂಜೇಗೌಡ, ಎಚ್. ಪಿ. ಮೋಹನ್, ಎಂ. ಪಿ. ಹರೀಶ್, ಆನಂದ್, ಕಾರ್ಯದರ್ಶಿ ಸಿ. ಸೋಮಶೇಖರ್, ಕೆ. ಎಂ. ಸಾಗರ್, ಅಜಯವ, ನವೀನ್, ಕಿರಣ್, ಕಸ್ತೂರಿ, ಹೊನ್ನೇಗೌಡ, ಅಜಿತ್, ಲೊಕೇಶ್ ಮತ್ತಿತರರು ಹಾಜರಿದ್ದರು.