ಸಾರಾಂಶ
ಜಿಲ್ಲಾಮಟ್ಟದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲಾಶಸ್ತ್ರ ಚಿಕಿತ್ಸಕ ಡಾ.ಎಂಡಿ ಅಹಮದೋದ್ದಿನ್ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಬೀದರ್
ಎಚ್ಐವಿ ಸೊಂಕು ತಡೆಗಟ್ಟಲು ಜಾಗೃತಿ ಹಾಗೂ ಕಾಲ ಕಾಲಕ್ಕೆ ಚಿಕಿತ್ಸೆ ಅಗತ್ಯವಾಗಿದೆ ಎಂದು ಬ್ರಿಮ್ಸ್ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕ ಎಂ.ಡಿ ಅಹಮದುದ್ದಿನ್ ಹೇಳಿದರು.ನಗರದ ಎಫ್‌ಪಿಎಐನಲ್ಲಿ ಇತ್ತೀಚೆಗೆ ಲಾಲ್ ಬಹದ್ದೂರ್ ಶಿಕ್ಷಣ ಸಂಸ್ಥೆ, ಶರಣ ತತ್ವ ಪ್ರಸಾರ ಸಮಿತಿ, ನ್ಯೂ ಮದರ್ ತೆರೇಸಾ, ಫ್ಯಾಮಿಲಿ ಪ್ಲಾನಿಂಗ್ ಅಸೊಶಿಯಶನ್ ಆಫ್ ಇಂಡಿಯಾ ವತಿಯಿಂದ ಹಮ್ಮಿಕೊಂಡ ಜಿಲ್ಲಾ ಮಟ್ಟದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಚ್ಐವಿ ಒಂದು ಸಾಂಕ್ರಾಮಿಕ ಪಿಡುಗು ಅಲ್ಲದಿದ್ದರೂ ಸಹಿತ ಅದರಿಂದ ಜಾಗುರುಕರಾಗಿರುವುದು ಅಗತ್ಯ ಎಂದರು.
ಹಳ್ಳಿಗಳಲ್ಲಿ ಇಂದು ಎಚ್ಐವಿ ಸೊಂಕಿನ ಬಗ್ಗೆ ಬಹಳಷ್ಟು ತಪ್ಪು ಕಲ್ಪನೆಗಳಿವೆ. ಸೊಂಕಿತರನ್ನು ದೂರ ಇಡುವುದು, ಅವರನ್ನು ಎಲ್ಲ ಉತ್ತಮ ಕಾರ್ಯಾಗಳಿಂದ ದೂರ ಇಡುವುದು, ಕುಷ್ಟರೋಗಿಗಳ ತರಹ ಅವರ ಬಟ್ಟೆ, ಬರಿ, ಆಹಾರ ಪ್ರತ್ಯೇಕವಾಗಿ ಇಡುವುದನ್ನು ನಾವು ನೋಡುತ್ತೇವೆ. ಅದು ಸಂಪೂರ್ಣವಾಗಿ ತೊಲಗಬೇಕು, ಸೊಂಕಿತರಿಗೆ ಧೈರ್ಯ ತುಂಬಬೇಕು ಎಂದರು.ಭಾರತೀಯ ಕುಟುಂಬ ಯೋಜನಾ ಸಂಘ(ಎಫ್‌ಪಿಎಐ)ದ ಅಧ್ಯಕ್ಷ ಮಲ್ಲಿಕಾರ್ಜುನ್ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಚ್ಐವಿ ಇರುವ ಸೊಂಕಿತರಿಗೆ ಎಫ್‌ಪಿಎಐ ಸುಮಾರು 500ಕ್ಕೂ ಅಧಿಕ ಶಸ್ತ್ರ ಚಿಕಿತ್ಸೆಗಳನ್ನು ಮಾಡಿದೆ. ನಮ್ಮಲ್ಲಿರುವ ಡಾ.ಲಕಶೆಟ್ಟಿಯವರಂಥ ಮೇಧಾವಿ ವೈದ್ಯರಿಂದ ಇದು ಸಾಧ್ಯವಾಗಿದೆ ಎಂದರು.
ಜಿಲ್ಲಾ ಮೇಲ್ವಿಚಾರಕ ಸೂರ್ಯಕಾಂತ ಸಂಗೋಳ್ಕರ್, ಹಿರಿಯ ಸಾಹಿತಿ ಎಂ.ಜಿ.ದೇಶಪಾಂಡೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಡಿ.ಕೆ.ಗಣಪತಿ, ಸಂಘದ ಪ್ರಧಾನ ಕಾರ್ಯದರ್ಶಿ ಶಿವಕುಮಾರ ಸ್ವಾಮಿ ಮಾತನಾಡಿದರು.ಡಾ.ಪ್ರಿಯಂಕಾ, ಡಾ.ಸುಜಾತಾ ಹೊಸಮನಿ ಸೇರಿ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ 25 ಸಾಧಕರಿಗೆ ಆರೋಗ್ಯ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಮುಖರಾದ ವೀರಭದ್ರಪ್ಪ ಉಪ್ಪಿನ್, ಸುನಿಲಕುಮಾರ ಕುಲಕರ್ಣಿ, ಪಾಂಡುರಂಗ ಬೆಲ್ದಾರ್, ವಿಶ್ವನಾಥ ಸ್ವಾಮಿ, ಸಂಜೀವ್ ಕುಮಾರ್ ಸ್ವಾಮಿ, ಅರವಿಂದ ಕುಲಕರ್ಣಿ, ಬಸವರಾಜ್ ಖಂಡ್ರೆ, ಶ್ರೀನಿವಾಸ ಬಿರಾದಾರ, ಸಂತೋಷ ಶಿಂಧೆ, ಸುಬ್ಬಯ್ಯ ಸ್ವಾಮಿ, ರಿಯಾಜ ಪಾಶಾ ಕೊಳ್ಳೂರ್ ಹಾಗೂ ಇತರರು ಇದ್ದರು.