ಕಾಲೇಜಿಗೆ ಕೀರ್ತಿ ತಂದ ಟೈಮ್ಸ್‌ ವಿದ್ಯಾರ್ಥಿಗಳಿಗೆ ಸನ್ಮಾನ

| Published : Apr 12 2025, 12:49 AM IST

ಸಾರಾಂಶ

೨೦೨೪-೨೫ನೇ ಸಾಲಿನಲ್ಲಿ ಪರೀಕ್ಷೆ ಎದುರಿಸಿದ ೨೬೫ ವಿದ್ಯಾರ್ಥಿಗಳ ಪೈಕಿ ೧೦೧ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿ ಸಾಧನೆಗೈದಿದ್ದಾರೆ. ಎಲ್ಲ ಮಕ್ಕಳನ್ನು ಕಾಲೇಜು ಆಡಳಿತ ಮಂಡಳಿ ಅಭಿನಂದಿಸಿ ಸಿಹಿ ಹಂಚಿದರು. ಟೈಮ್ಸ್ ಪಿಯು ಕಾಲೇಜು ತಾಲೂಕು, ತಾಲೂಕಿನಾಚೆಗೂ ತನ್ನ ಕೀರ್ತಿಯನ್ನು ೧೧ ವರ್ಷಗಳಿಂದ ವಿಸ್ತರಿಸಿದೆ. ವಿಜ್ಞಾನ ವಿಭಾಗದಲ್ಲಿ ಪಿಯು ಕಾಲೇಜು ತೆರೆದು ೧೧ ವರ್ಷಗಳಿಂದ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪಟ್ಟಣದಲ್ಲಿನ ಟೈಮ್ಸ್ ಪಿಯು ಕಾಲೇಜು ೨೦೨೪-೨೫ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ತನ್ನ ಕೀರ್ತಿ ಹೆಚ್ಚಿಸಿಕೊಂಡಿದೆ.

೨೦೨೪-೨೫ನೇ ಸಾಲಿನಲ್ಲಿ ಪರೀಕ್ಷೆ ಎದುರಿಸಿದ ೨೬೫ ವಿದ್ಯಾರ್ಥಿಗಳ ಪೈಕಿ ೧೦೧ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆ ಹೊಂದಿ ಸಾಧನೆಗೈದಿದ್ದಾರೆ. ಎಲ್ಲ ಮಕ್ಕಳನ್ನು ಕಾಲೇಜು ಆಡಳಿತ ಮಂಡಳಿ ಅಭಿನಂದಿಸಿ ಸಿಹಿ ಹಂಚಿದರು. ಟೈಮ್ಸ್ ಪಿಯು ಕಾಲೇಜು ತಾಲೂಕು, ತಾಲೂಕಿನಾಚೆಗೂ ತನ್ನ ಕೀರ್ತಿಯನ್ನು ೧೧ ವರ್ಷಗಳಿಂದ ವಿಸ್ತರಿಸಿದೆ. ವಿಜ್ಞಾನ ವಿಭಾಗದಲ್ಲಿ ಪಿಯು ಕಾಲೇಜು ತೆರೆದು ೧೧ ವರ್ಷಗಳಿಂದ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾಗಿದೆ. ಪ್ರಸಕ್ತ ಸಾಲಿನಲ್ಲಿ ಕಾಲೇಜು ದ್ವಿತೀಯ ಪಿಯುಸಿಯಲ್ಲಿ ೨೬೫ ಮಕ್ಕಳನ್ನು ಹೊಂದಿದ್ದು, ಪ್ರಸಕ್ತ ವರ್ಷ ಶೇ.೯೮ ರಷ್ಟು ಫಲಿತಾಂಶ ದಾಖಲಿಸಿದೆ. ೨೬೩ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ೧೦೧ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿಯೂ, ೧೬೦ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ೨ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆ ಹೊಂದುವ ಮೂಲಕ ಉತ್ತಮ ಸಾಧನೆ ಮಾಡಿದ ಹೆಗ್ಗಳಿಕೆ ಹೊಂದಿದೆ.

ರಾಜ್ಯಕ್ಕೆ ಎಂಟನೇ ಸ್ಥಾನ ಮತ್ತು ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಉತ್ತಮ ಫಲಿತಾಂಶ ದಾಖಲಿಸಿದ ಪಿ.ಬಿ. ಧನ್ಯಶ್ರೀ ೬೦೦ ಅಂಕಗಳಿಗೆ ೫೯೧ಅಂಕ ಪಡೆದಿದ್ದಾಳೆ. ಡಿ.ಎಸ್.ನಿತ್ಯಶ್ರೀ ೫೮೯, ಪೂರ್ವಿಕಾ -೫೮೬, ಎಸ್.ಸುಷ್ಮಾ -೫೮೬, ಎಚ್.ಪಿ. ಬಿಂದು ೫೮೫ ಮತ್ತು ಪಿ.ಬಿ.ಧನುಶ್ರೀ ೫೮೪ ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಇವರೊಂದಿಗೆ ಉತ್ತಮ ಸಾಧನೆ ಮಾಡಿದ ಎಲ್ಲ ಮಕ್ಕಳನ್ನು ಕಾಲೇಜು ವತಿಯಿಂದ ಸನ್ಮಾನಿಸಿ ಸಿಹಿ ನೀಡಿ ಅಭಿನಂದಿಸಲಾಯಿತು.

ಈ ವೇಳೆ ಮಾತನಾಡಿದ ಟೈಮ್ಸ್ ಸಂಸ್ಥೆಯ ಕಾರ್ಯದರ್ಶಿ ಬಿ.ಕೆ.ಗಂಗಾಧರ್, ನಿರಂತರ ಶ್ರಮದೊಂದಿಗೆ ಉತ್ತಮ ಸಾಧನೆ ಮಾಡಿದ ಮಕ್ಕಳನ್ನು ಕಾಲೇಜಿನಿಂದ ಅಭಿನಂದಿಸಿ ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ. ಅವರ ಈ ಉತ್ತಮ ಸಾಧನೆಗೆ ಕಾಲೇಜಿನ ಸಿಬ್ಬಂದಿ, ಬೋಧಕರು ಮತ್ತು ಪಾಲಕರು ಕಾರಣರಾಗಿದ್ದಾರೆ. ಅವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದರು. ಇನ್ನೂ ಉತ್ತಮ ಸಾಧನೆ ಮಾಡಿದ ಮಕ್ಕಳು, ತಮ್ಮ ಕಲಿಕೆಯ ವಿಧಾನ, ಉತ್ತಮ ಅಂಕಗಳಿಕೆಗೆ ಅನುಸರಿಸಿದ ಮಾನದಂಡಗಳು, ಉಪನ್ಯಾಸಕರ ಸಹಕಾರ, ಶ್ರಮ ತಮ್ಮ ಸಾಧನೆಗೆ ಪೂರಕವಾದ ಕುರಿತು ಮಾತನಾಡಿದರು. ಪ್ರಾಂಶುಪಾಲ ಎ.ಸಿ.ಸುನಿಲ್, ಹಿರಿಯ ಪ್ರಾಧ್ಯಾಪಕ ಎಚ್.ಎಂ.ಶ್ರೀಕಂಠ, ಕೆ.ವಿ.ಸಂಜಯ್ ಸೇರಿದಂತೆ ಬೋಧಕ ಸಿಬ್ಬಂದಿ ಇದ್ದರು.